ಜ್ಯೋತಿಷಿ ಜಾಲ್ಸೂರಿನ ಮೋನಪ್ಪ ಆಚಾರ್ಯರಿಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Advt_Headding_Middle
Advt_Headding_Middle

 

ಕುಂಟಾರು ರವೀಶ್ ತಂತ್ರಿಯವರನ್ನು ಶಾಲಾ ಅಧ್ಯಕ್ಷರಾದ ರುಕ್ಮಯ್ಯದಾಸ್ ಮತ್ತು ಶ್ರೀಮತಿ ಲೀಲಾವತಿ ರುಕ್ಮಯ್ಯದಾಸ್ ಫಲ ಪುಪ್ಪಗಳಿಂದ ಸನ್ಮಾನಿಸಿದರು. ಬಿ.ಇ.ಒ ಕಛೇರಿಯ ಶಿವಪ್ರಸಾದ, ಸಂಸ್ಥೆಯ ಕಾರ್ಯದರ್ಶಿ ಕಿಶೋರ್ ಕುಮಾರ್ ಬಿ.ಆರ್, ಶಾಲಾ ಉಪಪ್ರಾಂಶುಪಾಲ ಅನಸೂಯ ಕೆ.ಆರ್, ಎಸ್.ಡಿ.ಎಂ.ಸಿಯ ಅಧ್ಯಕ್ಷ ಶಿವಪ್ರಸಾದ ಹೊಸೂರು, ವಕೀಲರಾದ ಸದಾನಂದ ಎ.ಎಸ್. ಸಚಿನ್ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಐದನೇ ತರಗತಿ ವಿದ್ಯಾರ್ಥಿನಿ ನೇಹಾ ಸ್ವಾಗತಿಸಿದರು. ಸಹಶಿಕ್ಷಕಿ ಪುನೀತಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಹ ಶಿಕ್ಷಕಿ ಚಿತ್ರಲೇಖಾ ವಂದಿಸಿದರು. ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಲಾಗಿತ್ತು. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕೃಷ್ಣರಾಜ್ ಅವರು ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ನಿರೂಪಿಸಿದರು. ಜ್ಯೋತಿಷಿ, ಶಿಲ್ಪಶಾಸ್ತ್ರಜ್ಞ ಜಾಲ್ಸೂರಿನ ಮೋನಪ್ಪ ಆಚಾರ್ಯ ಅವರಿಗೆ ದ.ಕ. ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ನ.೧ರಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರು ಮಂಗಳೂರಿನ ನೆಹರೂ ಮೈದಾನದಲ್ಲಿ ಪ್ರಧಾನ ಮಾಡಿದರು.
ಮೂಲತ: ಬಂಟ್ವಾಳ ತಾಲೂಕಿನ ಕೊಲ ಗ್ರಾಮದ ರಾಯಿ ಬೈದಗುತ್ತು ದಿ. ಶೇಷಪ್ಪ ಆಚಾರ್ಯ ಹಾಗೂ ದಿ. ಲಕ್ಷ್ಮೀ ದಂಪತಿಗಳ ಪುತ್ರರಾಗಿರುವ ಮೋನಪ್ಪ ಆಚಾರ್ಯ ಅವರ ಶಿಲ್ಪ ಶಾಸ್ತ್ರಜ್ಞ ಮತ್ತು ಜ್ಯೋತಿಷ್ಯ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ೨೦೧೭ನೇ ದ.ಕ. ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಯಿತು. ತಮ್ಮ ತಂದೆ ದಿ. ಶೇಷಪ್ಪ ಆಚಾರ್ಯ ಅವರು ಜ್ಯೋತಿಷ್ಯ ಪಂಡಿತರಾಗಿದ್ದು ಅವರ ಬಳಿಯಲ್ಲಿ ಜ್ಯೋತಿಷ್ಯ ವಿದ್ಯೆ ಕಲಿತುಕೊಂಡ ಮೋನಪ್ಪ ಆಚಾರ್ಯ ಅವರು ಸುಮಾರು ೨೮ ವರ್ಷಗಳ ಹಿಂದೆ ಜಾಲ್ಸೂರಿಗೆ ಬಂದು ನೆಲೆಸಿ ಜ್ಯೋತಿಷ್ಯ ಹಾಗೂ ಶಿಲ್ಪ ಶಾಸ್ತ್ರ ಕ್ಷೇತ್ರದಲ್ಲಿ ಪ್ರಸಿದ್ದರಾಗಿದ್ದರು. ಇತ್ತೀಚಿನ ಒಂದು ವರ್ಷಗಳ ಹಿಂದೆ ತಮ್ಮ ಸ್ವಂತ ಊರಾದ ಬಂಟ್ವಾಳದ ರಾಯಿಯಲ್ಲಿ ನೆಲೆಸಿರುವ ಇವರು ಪ್ರತೀ ಗುರುವಾರ ವೇಣೂರು ಹಾಗೂ ಪ್ರತೀ ಆದಿತ್ಯವಾರದಂದು ಜಾಲ್ಸೂರಿಗೆ ಬಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದ್ದಾರೆ.
ಮೋನಪ್ಪ ಆಚಾರ್ಯ ಅವರಿಗೆ ಜ್ಯೋತಿಷ್ಯ ಹಾಗೂ ಶಿಲ್ಪ ಶಾಸ್ತ್ರ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿಗಳು ದೊರೆತಿದ್ದು ಹಾಸನ ಜಿಲ್ಲೆ ಅರಕಲಗೂಡು ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು ಮಠ, ಉಡುಪಿ ಜಿಲ್ಲೆಯ ಕಟಪಾಡಿ ಆನೆಗುಂಡಿ ಮಠದಿಂದ ಆನೆಗುಂಡಿ ಶ್ರೀ ಪ್ರಶಸ್ತಿ, ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಸಾರಕೂಟೇಲು ನಾಗಬ್ರಹ್ಮ ಸಾನಿಧ್ಯದಿಂದ ಪ್ರಶಸ್ತಿ, ಬೆಳ್ಳಾರೆ ವಿಶ್ವಕರ್ಮ ಸೇವಾ ಸಮಿತಿ ಪ್ರಶಸ್ತಿ, ಮಂಗಳೂರಿನ ಮಧುರತರಂಗ ಪ್ರಶಸ್ತಿ, ಬಂಟ್ವಾಳದ ಸಿದ್ಧಕಟ್ಟೆ ವಿಶ್ವಕರ್ಮ ಸೇವಾ ಸಂಘದ ಪ್ರಶಸ್ತಿ, ಕಾರ್ಕಳದ ದಾನ್‌ಶಾಲೆಯಲ್ಲಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾಚಾರ್ಯ ಮಹಾಸ್ವಾಮಿಗಳ ವತಿಯಿಂದ ಸನ್ಮಾನ ಹೀಗೆ ಹಲವಾರು ಪ್ರಶಸ್ತಿಗಳು ಲಭಿಸಿದ್ದು ಇದೀಗ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ದೊರೆತ ಬಳಿಕ ಹುಟ್ಟೂರಾದ ಬಂಟ್ವಾಳದ ರಾಯಿ ಗ್ರಾಮ ಪಂಚಾಯತ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಹುಟ್ಟೂರ ಸನ್ಮಾನ ಮಾಡಿ ಅಭಿನಂದಿಸಲಾಯಿತು.
ಮೋನಪ್ಪ ಆಚಾರ್ಯ ಅವರ ಪತ್ನಿ ಶ್ರೀಮತಿ ಹೇಮಾವತಿ ಗೃಹಿಣಿಯಾಗಿದ್ದು ಹಿರಿಯ ಪುತ್ರ ಚಂದ್ರಶೇಖರ ಆಚಾರ್ಯ ಅವರು ಬಂಟ್ವಾಳದಲ್ಲಿ ಚಿನ್ನದ ಕೆಲಸಗಾರರಾಗಿ ದುಡಿಯುತ್ತಿದ್ದು ಕಿರಿಯ ಪುತ್ರ ಉದಯ ಆಚಾರ್ಯ ಅವರು ತಂದೆಯೊಂದಿಗೆ ಜ್ಯೋತಿಷ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರಿಯರಾದ ಶ್ರೀಮತಿ ಪುಷ್ಪಾ ಹಾಗೂ ಶ್ರೀಮತಿ ಪದ್ಮಶ್ರೀ ವಿವಾಹವಾಗಿ ಮಂಗಳೂರು ಹಾಗೂ ಮೂಡಿಗೆರೆಯಲ್ಲಿ ನೆಲೆಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.