ಪೆರುವಾಜೆಯ ಸುನಂದ ಕೊಲೆ ಪ್ರಕರಣದಲ್ಲಿ ಸೈನೈಡ್ ಕಿಲ್ಲರ್ ಮೋಹನ್ ಕುಮಾರ್‌ಗೆ ಗಲ್ಲು ಶಿಕ್ಷೆ ಖಾಯಂಗೊಳಿಸಿದ ಹೈಕೋಟ್

Advt_Headding_Middle

ವರದಕ್ಷಿಣೆ ರಹಿತವಾಗಿ ಮದುವೆಯಾಗುವುದಾಗಿ ಯುವತಿಯರನ್ನು ನಂಬಿಸಿ ಅವರನ್ನು ಮೋಸದ ಬಲೆಗೆ ಸಿಲುಕಿಸಿ ಲೈಂಗಿಕವಾಗಿ ಬಳಸಿಕೊಂಡು ನಂತರ ಸೈನೈಡ್ ನೀಡಿ ಕೊಲೆಗೈದು ಚಿನ್ನಾಭರಣ ದೋಚುತ್ತಿದ್ದ ಸರಣಿ ಹಂತಕ ಮೋಹನ್ ಕುಮಾರ್‌ಗೆ ಮಂಗಳೂರಿನ ೪ನೇ ಹೆಚ್ಚುವರಿ ಮತ್ತು ಜಿಲ್ಲಾ ಸೆಷೆನ್ಸ್ ನ್ಯಾಯಾಲಯ ೨೦೧೩, ದ.೨೧ ರಂದು ವಿಧಿಸಿದ ಗಲ್ಲು ಶಿಕ್ಷೆಯನ್ನು ಹೈಕೋರ್ಟ್ ಖಾಯಗೊಳಿಸಿ ಆದೇಶ ಮಾಡಿದೆ.
೨೦೦೮ ರಲ್ಲಿ ನಡೆದಿದ್ದ ಪೆರುವಾಜೆ ಗ್ರಾಮದ ಸುನಂದಾ ಕೊಲೆ ಪ್ರಕರಣದ ಆರೋಪಿ ಸೈನೆಡ್ ಮೋಹನನಿಗೆ ದಕ್ಷಿಣ ಕನ್ನಡ ಜಿಲ್ಲಾ ಸೆಷನ್ ಕೋರ್ಟ್ ವಿಧಿಸಿದ್ದ ಗಲ್ಲು ಶಿಕ್ಷೆ ಕಾಯಂ ಗೊಳಿಸಿರುವ ನ್ಯಾಯಮೂರ್ತಿ ರವಿ ಮಳಿಮಠ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ವಿಭಾಗೀಯ ಪೀಠ ಆರೋಪಿ ಸೈನೆಡ್ ಮೋಹನ ತರಹದ ವ್ಯಕ್ತಿಗಳು ಸಮಾಜಕ್ಕೆ ಕಂಟಕ ಎಂದು ಅಭಿಪ್ರಾಯಪಟ್ಟಿದ್ದಾರೆ.
ಗಲ್ಲು ಶಿಕ್ಷೆ ಖಾಯಂಗೊಳಿಸುವಂತೆ ಹೈಕೋರ್ಟ್ ರಿಜಿಸ್ಟರ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಪೀಠ ಆರೋಪಿ ಮೋಹನ್ ಇಪ್ಪತ್ತು ಮುಗ್ಧ ಮಹಿಳೆಯರನ್ನು ಮದುವೆಯಾಗಿ ನಂಬಿಸಿ ಸೈನೈಡ್ ಕೊಟ್ಟು ಕೊಲೆಗೈದ ಆರೋಪ ಎದುರಿಸುತ್ತಿದ್ದಾನೆ ಅಲ್ಲದೆ ಮಹಿಳೆಯನ್ನು ಕೊಲೆಗೈದ ಪ್ರಕರಣ ಸಂಬಂಧ ಆರೋಪಿ ವಿರುದ್ಧ ಪ್ರಾಸಿಕ್ಯೂಷನ್ ಸಲ್ಲಿಸಿರುವ ಸಾಕ್ಷ್ಯಾಧಾರಗಳು ಸೂಕ್ತವಾಗಿವೆ. ಆರೋಪಿಯು ಸೈಕೋ ಮನಸ್ಥಿತಿಯನ್ನು ಹೊಂದಿದ್ದು ಸಮಾಜದಲ್ಲಿದ್ದಾರೆ ಕಂಟಕವಾಗುವ ಸಾಧ್ಯತೆ ಇದೆ ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ
ಮಹಿಳೆಯ ಕೊಲೆಯ ಬಗ್ಗೆ ಮೈಸೂರಿನ ಲಾಡ್ಜಿನ ಸಿಬ್ಬಂದಿ ಆರೋಪಿಯ ಬಳಿಯಿಂದ ತಪ್ಪಿಸಿಕೊಂಡ ಇಬ್ಬರು ಮಹಿಳೆಯರ ಹೇಳಿಕೆ ಆರೋಪಿ ಸುನಂದಾ ಅವರ ಒಡವೆಗಳನ್ನು ಗಿರವಿ ಇಟ್ಟುಕೊಂಡಿದ್ದ ಜ್ಯುವೆಲ್ಲರಿ ಶಾಪ್ ಮಾಲೀಕ. ಹಾಗೂ ಆತನ ಮನೆಯಲ್ಲಿ ದೊರೆತ ಸೈನೆಡ್ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಮತ್ತಿತರ ಪ್ರಮುಖ ದಾಖಲೆಗಳು ಆರೋಪಿ ಕೃತ್ಯ ಎಸಗಿದ್ದಾನೆ ಎಂಬುದನ್ನು ಸಾಬೀತುಪಡಿಸಲು ಅರ್ಹವಾಗಿದ್ದು ಐಪಿಸಿ ಕಲಂ ೩೦೨, ೩೨೮, ೩೯೪ನಡಿ ಅಪರಾಧ ಕೃತ್ಯಗಳು ಸಾಬೀತಾಗಿವೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ಗಲ್ಲು ಶಿಕ್ಷೆ ವಿಧಿಸಿದ್ದ ಅಧೀನ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿದೆ. ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ವಿಶೇಷ ಅಭಿಯೋಜಕರಾಗಿ ವಿಜಯಕುಮಾರ್ ಮಜ್ಜಿಗೆ ವಾದ ಮಂಡಿಸಿದ್ದರು .
ಪೆರುವಾಜೆ ಸುನಂದಾ ಬಲಿಯಾದ ಕತೆ
ಸುಳ್ಯದ ಪೆರುವಾಜೆ ಗ್ರಾಮದ ವೈಪಾಲ ರತ್ನಾವತಿ ಪೂಜಾರಿಯವರ ಮಗಳು ಸುನಂದಾ ೨೦೦೮ರಲ್ಲಿ ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸಲು ಹೋಗಿದ್ದ ಅಲ್ಲಿ ಸುನಂದಾಳ ಪರಿಚಯವನ್ನು ಮೋಹನ್ ಕುಮಾರ್ ಮಾಡಿಕೊಂಡಿ ದ್ದ. ಆಕೆಯಲ್ಲಿ ತನ್ನ ಹೆಸರು ಶಶಿಧರ ಎಂದು ಹೇಳಿಕೊಂಡಿದ್ದನು. “ನೀವು ಟೀಚರ್ ಅಲ್ವಾ? ನಿಮ್ಮನ್ನು ಎಲ್ಲೋ ನೋಡಿದ ನೆನಪಾಗುತ್ತಿದೆ” ಎಂದಿದ್ದನ ಲ್ಲದೆ, ತಾನು ಮಂಗಳೂರಿನಲ್ಲಿ ಸುಪರೈ ವೈಸರ್ ಕೆಲಸ ಮಾಡಿಕೊಂಡಿರು ವುದಾಗಿಯೂ ಹೇಳಿದ್ದ. ಸುನಂದಾಳ ಪರಿಚಯ ಮಾಡಿ ಕೊಂಡಿದ್ದ ಬಳಿಕ ೧ ತಿಂಗಳವರೆಗೆ ಅವಳೊಡನೆ ನಿರಂತರ ಸಂಪರ್ಕದಲ್ಲಿದ್ದ. ತನ್ನ ಹುದ್ದೆ ಮೈಸೂರಿನಲ್ಲಿರುವುದರಿಂದ ತುಂಬಾ ಕಷ್ಟವಾಗುತ್ತಿದೆ. ತನ್ನ ಹುದ್ದೆಯನ್ನು ಪುತ್ತೂರಿಗೆ ವರ್ಗಾ ಯಿಸಬೇಕಾಗಿದೆ. ನಿನ್ನ ಮದುವೆಯಾದ ಬಳಿಕ ಆ ಕೆಲಸ ಮಾಡುವುದಾಗಿ ಆಕೆ ನಂಬುವಂತೆ ಮಾಡಿದ್ದ. ತನ್ನ ಮದುವೆಗೆ ಕೆಲವು ಅಡ್ಡಿ ಇರುವುದರಿಂದ ದೋಷ ನಿವಾರಣೆಗಾಗಿ ಕಾಸರ ಗೋಡಿನ ಮಲ್ಲ ದೇವಸ್ಥಾನದಲ್ಲಿ ಪೂಜೆ ಮಾಡೋಣ ನಂತರ ಮದುವೆಯಾಗೋಣ ಬಾ ಎಂದು ಹೇಳಿದ್ದ. ೨೦೦೮ ಫೆಬ್ರವರಿ ಫೆ.೧೧ರಂದು ಸುನಂದಾ ಸ್ವಸಹಾಯ ಸಂಘದಿಂದ ೨೫ ಸಾವಿರ ರೂಪಾಯಿ ಸಾಲವನ್ನು ಬೆಳ್ಳಾರೆಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಿಂದ ಡ್ರಾ ಮಾಡಿಕೊಂಡು ನಾಲ್ಕು ಪವನ್ ಚಿನ್ನವನ್ನು ಧರಿಸಿಕೊಂಡು ಹೋಗಿದ್ದಳು. ಮನೆಯಿಂದ ಆಕೆ ಹೊರಡುವಾಗ ಮಲ್ಲ ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಇದೆ ಎಂದು ಹೇಳಿ ಹೋಗಿದ್ದಳು. ಬೆಳ್ಳಾರೆಯಿಂದ ಸುಳ್ಯಕ್ಕೆ ಬಂದ ಅವರನ್ನು ಮೋಹನ ಮಲ್ಲಕ್ಕೆ ಕರೆದೊಯ್ಯದೆ ಮೈಸೂರಿಗೆ ಕರೆದುಕೊಂಡು ಹೋಗಿದ್ದ. ಸಂಜೆ ೪.೩೦ಕ್ಕೆ ಮೈಸೂರು ತಲುಪಿದ್ದ ಅವರು ಅಲ್ಲಿನ ಉಮಾಮಹೇಶ್ವರ ಲಾಡ್ಜ್‌ನಲ್ಲಿ ತಂಗಿದ್ದು ೫.೩೦ಕ್ಕೆ ಹೊರಗೆ ಹೊರಟಿದ್ದರು. ಸಂಜೆ ಪೆರುವಾಜೆಯ ಮನೆಗೆ ಫೋನ್ ಮಾಡಿದ ಆಕೆ ಇಂದು ರಾತ್ರಿ ಪೂಜೆ ಮುಗಿಸಿ ನಾಳೆ ಬರುವುದಾಗಿ ಹೇಳಿದ್ದಳು. ಆದರೆ ಸಂಜೆ ೭.೩೦ಕ್ಕೆ ಮೈಸೂರು ಪೋಲೀಸರು ಆಕೆಯ ಮನೆಗೆ ಫೋನ್ ಮಾಡಿ ಸುನಂದಾಳ ಮೃತದೇಹ ಮೈಸೂರು ಬಸ್ ನಿಲ್ದಾಣದಲ್ಲಿ ಬಿದ್ದಿರುವುದಾಗಿ ಹೇಳಿದರು. ಬಳಿಕ ಮನೆಯವರು ಮೈಸೂರಿಗೆ ಹೋಗಿ ಆಕೆಯ ಮೃತದೇಹವನ್ನು ತಂದು ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಆಕೆಯ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸಯನೈಡ್‌ನಿಂದ ಆಕೆ ಮೃತಪಟ್ಟಿರುವುದಾಗಿ ತಿಳಿದು ಬಂದಿತ್ತು. ಆ ವರದಿಯ ಬಂದು ಮೂರು ದಿನದಲ್ಲಿ ಮೋಹನ್ ಕುಮಾರ್ ಪೋಲೀಸರ ಬಲೆಗೆ ಸಿಕ್ಕಿಬಿದ್ದಿದ್ದ.
ಸುನಂದಾ ಕೊಲೆ ಪ್ರಕರಣದಲ್ಲಿ ೩೫ ಸಾಕ್ಷಿಗಳು
ಪೆರುವಾಜೆಯ ಸುನಂದ ಕೊಲೆ ಪ್ರಕರಣದಲ್ಲಿ ಪೋಲೀಸರು ೩೫ ಮಂದಿ ಸಾಕ್ಷಿದಾರರನ್ನು ಕೋರ್ಟಿಗೆ ಹಾಜರು ಪಡಿಸಿದ್ದಾರೆ. ಮಂಗಳೂರು ಸಮಾವೇಶದಲ್ಲಿ ಸುನಾಂದಳೊಂದಿಗೆ ಮೋಹನ್ ಮಾತನಾಡಿದ್ದನ್ನು ನೋಡಿದ್ದ ಬೆಳ್ಳಾರೆಯ ರಾಜೀವಿ ಆರ್ ರೈ, ವೈಪಾಲ ರಾಮಣ್ಣ ರೈ, ಸುನಂದಾಳ ತಾಯಿ ರತ್ನಾವತಿ, ಮೊಹನನಿಗೆ ಸಯನೈಡ್ ನೀಡುತ್ತಿದ್ದ ವ್ಯಾಪಾರಿ, ಅವರು ಮೈಸೂರಿನಲ್ಲಿದ್ದ ಲಾಡ್ಜ್‌ನವರು ಹೀಗೆ ೩೫ ಸಾಕ್ಷಿಗಳನ್ನು ತೋರ್ಪಡಿಸಿದ್ದಾರೆ.ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಂದ ಕಾಡುಕೋಣವೊಂದು ಯುವಕನಿಗೆ ಗುದ್ದಿದ ಹಾಗೂ ಗಾಯಗೊಂಡ ಆತ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾದ ಘಟನೆ ನ.೧೩ರಂದು ವರದಿಯಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.