ಹರಿಹರೇಶ್ವರ ದೇವಸ್ಥಾನ ಮತ್ತು ಶ್ರೀ ಅಯ್ಯಪ್ಪ ದೇವಸ್ಥಾನ ಉಪ್ಪುಕಳಕ್ಕೆ ಡಿ.ವಿ ಯವರಿಂದ ತಲಾ ೫೦ ಸಾವಿರ ದೇಣಿಗೆ

Advt_Headding_Middle
Advt_Headding_Middle

ಹರಿಹರೇಶ್ವರ ದೇವಸ್ಥಾನ ಹರಿಹರ ಪಲ್ಲತಡ್ಕ ಮತ್ತು ಜೀರ್ಣೋದ್ಧಾರಗೊಳ್ಳುತಿರುವ ಶ್ರೀ ಅಯ್ಯಪ್ಪ ದೇವಸ್ಥಾನ ಉಪ್ಪುಕಳ ಇಲ್ಲಿಗೆ ಮಾಜಿ ಮುಖ್ಯಮಂತ್ರಿ, ಅಂಕಿ ಅಂಶ ಮತ್ತು ಅನುಷ್ಠಾನ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಅವರು ತಲಾ ೫೦ ಸಾವಿರದಂತೆ ತನ್ನ ವೈಯ್ಯಕ್ತಿಕ ಹಣ ನೀಡಿದ್ದಾರೆ.

ಈ ಹಿಂದೆ ನ.೪ ರಂದು ಹರಿಹರದಲ್ಲಿ ನಡೆದ ಸೂಕ್ಷ್ಮ ವಲಯ ಬಾದಿತ ಪ್ರದೇಶಗಳ ಸಮಾಲೋಚನಾ ಸಭೆಯಲ್ಲಿ ಡಿ.ವಿ ಯವರು ಭಾಗವಹಿಸಿದ್ದ ಸಂದರ್ಭದಲ್ಲಿ ಹಣ ನೀಡುವ ಭರವಸೆಯನ್ನು ನೀಡಿದ್ದರು. ಅದರಂತೆ ನ.೧೩ ರಂದು ಸುಳ್ಯದಲ್ಲಿ ಹಣವನ್ನು ದೇವಸ್ಥಾನದವರಿಗೆ ಹಸ್ತಾಂತರಿಸಲಾಗಿದೆ. ಈ ಸಂದರ್ಭ ಅಯ್ಯಪ್ಪ ದೇವಾಲಯದ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಚಿದಾನಂದ ಉಪ್ಪುಕಳ, ಕಾರ್ಯದರ್ಶಿ ತೇಜಕುಮಾರ್ ಕಿರಿಭಾಗ, ನಿಧಿ ಸಂಗ್ರಹಣಾ ಸಮಿತಿಯ ಅಧ್ಯಕ್ಷ ಅಂಬಾದಾಸ್, ಉಪಾಧ್ಯಕ್ಷ ಚಂದ್ರಹಾಸ ಶಿವಾಲ, ಸಮಿತಿ ಸದಸ್ಯ ನಿತ್ಯಾನಂದ ಕಳಿಗೆ, ಹರಿಹರೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಕುದ್ಕುಳಿ, ರೇಗನ್ ಶೆಟ್ಯಡ್ಕ, ಶರತ್ ಕಲ್ಲೇಮಠ, ಪ್ರಭಾಕರ ಬಾಳುಗೋಡು ಉಪಸ್ಥಿತರಿದ್ದರು. ಬಿ.ಜೆ.ಪಿ ಮಂಡಲ ಸಮಿತಿಯ ಅಧ್ಯಕ್ಷ ವೆಂಕಟ್ ವಳಲಂಬೆ, ಜಿ. ಪಂ. ಸದಸ್ಯ ಹರೀಶ್ ಕಂಜಿಪಿಲಿ ಮತ್ತು ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಉಪಸ್ಥಿತಿಯಲ್ಲಿ ಹಣವನ್ನು ಹಸ್ತಾಂತರಿಸಲಾಯಿತು. ಡಿ.ವಿಯವರು ಉಪ್ಪುಕಳ ದೇವಸ್ಥಾನಕ್ಕೆ ಈ ಹಿಂದೆ ಡಿ.ವಿ ಯವರು ಮುಖ್ಯ ಮಂತ್ರಿಯಾಗಿರುವಾಗಲೂ ರೂ ೫ ಲಕ್ಷ ಅನುದಾನ ನೀಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.