ಅಗಲಿದ ಸುಳ್ಯದ ಮೊದಲ ಬಿಜೆಪಿ ಶಾಸಕ .ದುಡಿಮೆಯಿಂದ ಹೊಟ್ಟೆತುಂಬಿಸಿದ ಕಾರ್ಮಿಕ ದುರಂತ ನಾಯಕನೂ ಆಗಿದ್ದ ಬಾಕಿಲ ಹುಕ್ರಪ್ಪ

Advt_Headding_Middle
Advt_Headding_Middle

ರಾಜಕೀಯ ಮತ್ತು ವೈಯಕ್ತಿಕ ಬದುಕಿನ ಅನೇಕ ಸಂಗಾತಿಗಳನ್ನು ದಾಖಲೆಯಾಗಿ ಬಿಟ್ಟು ಹೋಗಿದ್ದಾರೆ ಮಾಜಿ ಶಾಸಕ ಬಾಕಿಲ ಹುಕ್ರರಪ್ಪ. ವಿಪರಾಸ್ಯವೆಂದರೆ ಈ ಯಾವ ದಾಖಲೆಗಳು ಅವರ ಬದುಕನ್ನು ಎತ್ತರಿಸಲಿಲ್ಲ. ಹೀಗಾಗಿ ಬಾಕಿಲ ಹುಕ್ರರಪ್ಪ ಎಂಬ ಮಾಜಿ ಶಾಸಕ ಜನ ನಾಯಕರು ಹೌದು, ದುರುಂತ ನಾಯಕನು ಹೌದು.
೧೯೮೩ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಭಾರಿಗೇ ಸ್ಪರ್ದಿಸಿದ ಬಾಕಿಲ ಹುಕ್ರರಪ್ಪ ಭಾರೀ ಅಂತರದಿಂದ ವಿಜಯ ಸಾದಿಸಿದರು.೨೧,೯೭೫ಮತಗಳು ಅವರಿಗೆ ದೊರೆತಿದ್ದರೆ, ಅವರ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಎನ್ ಶೀನ ಅವರಿಗೆ ೧೫,೪೨೬ಮತಗಳು ದೊರೆತ್ತಿತ್ತು, ಹಾಗೇ ವಿಜಯ ಪತಾಕೆ ಹಾರಿಸಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಿಜೆಪಿ ಶಾಸಕನಾಗಿ ಝಂಡ ಹಾರಿಸಿ ಹುಕ್ರೆಪ್ಪರು ೨ವರುಷಗಳ ಕಾಲ ಸುಳ್ಯವನ್ನು ಪ್ರತಿನಿಧಿಸಿದ್ದರು.  ಶಾಸಕರಾಗಿದ್ದ ಸಂದರ್ಬ ಲೊಸ್ ಎಂಜಲೀಸ್‌ನಲ್ಲಿ ನಡೆದ ಒಲಿಪಿಂಕ್ಸ್ ವೀಕ್ಷಣೆಗೆ ಸರಕಾರದ ಪ್ರತಿನಿಧಿಯಾಗಿ ತೆರಳಿದ್ದರು.
ಬಾಕಿಲ ಹುಕ್ರರಪ್ಪರವರು ಪಕ್ಷವನ್ನು ಮೀರಿ ಕೆಲವು ನಿರ್ದಾರಗಳನ್ನು ತೆಗೆದುಕೊಳ್ಳುತ್ತಿದ್ದು, ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು, ಪರಿಣಾಮ ೧೯೮೫ರ ಚುನಾವಣೆಯಲ್ಲಿ ಅವರಿಗೆ ಟೀಕೆಟ್ ನಿರಾಕರಿಸಲಾಯಿತು.
ಅಲ್ಲಿಂದ ಹುಕ್ರರಪ್ಪರ ಪಕ್ಷಾಂತರ ಪರ್ವ ಆರಂಭಗೊಂಡಿತ್ತು.೧೯೮೫ರ ಚುನಾವಣೆಯಲ್ಲಿ ಅವರು ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ದಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ವಿರುದ್ಧ ಅಲ್ಪ ಮತಗಳ ಆತರಂದಿಂದ ಪರಭವಗೊಂಡರು. ಆಗ ಕಾಂಗ್ರೆಸ್ ಅಭ್ಯರ್ಥಿ ಕೆ.ಕುಶಲ ೨೫೦೦೦ ಸಾವಿರದ ೫೪೨ ಮತ ಪಡೆದರೆ, ಬಾಕಿಲ ಹುಕ್ರರಪ್ಪ ೨೪ಸಾವಿರದ ೭೪೯ ಮತ ಪಡೆದರು. ಆಗ ಬಿಜೆಪಿಯಿಂದ ಸ್ಪರ್ಧಿಸಿದ ಅಗ್ರಹಾರ ದುಗ್ಗಪ್ಪ ೧೧ಸಾವಿರದ ೩೯೧ ಮತ ಪಡೆದಿದ್ದರು.
೧೯೮೯ರ ಚುನಾವಣೆಯಲ್ಲಿ ಹುಕ್ರರಪ್ಪರು ಜನತಾದಳ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. ೨೨,೮೩೬ ಮತ ಪಡೆದಿದ್ದರು. ಆ ಚುನಾವಣೆಯನ್ನು ಕಾಂಗ್ರೆಸ್‌ನಿಂದ ಕೆ. ಕುಶಲ ಗೆಲವು ಸಾಧಿಸಿದರೆ ಬಿಜೆಪಿಯಿಂದ ಸ್ಪರ್ಧಿಸಿದ ಎಸ್.ಅಂಗಾರ ದ್ವೀತಿಯ ಸ್ಥಾನ ಪಡೆದಿದ್ದರು,.
೧೯೯೪ರ ಚುನಾವಣೆಯ ವೇಳೆಗೆ ಬಾಕಿಲ ಹುಕ್ರಪ್ಪರು ಪಕ್ಷ ಬದಲಿಸಿದರು. ಎಸ್ ಬಂಗಾರಪ್ಪ ನೇತೃತ್ವದ ಕೆ.ಸಿ.ಪಿ ಸೇರಿ ಚುನಾವಣೆಗೆ ಸ್ಪರ್ದಿಸಿದ್ದರು. ಆ ಚುನಾವಣೆಯಲ್ಲಿ ಬಿಜೆಪಿಯ ಎಸ್. ಅಂಗಾರ, ಕುಶಾಲರನ್ನು ಸೋಲಿಸಿ ಪ್ರಥಮವಾಗಿ ಸುಳ್ಯದ ಶಾಸಕರಾದರು. ಬಾಕಿಲ ಹುಕ್ರಪ್ಪರಿಗೆ ಆ ಬಾರೀ ಸಿಕ್ಕಿದ್ದು, ಕೇವಲ ೨ಸಾವಿರದ ೫೧೦ಮತಗಳು. ಅಲ್ಲಿಂದ ಮತ್ತೆ ಬಿಜೆಪಿಗೆ ಬಂದರು. ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಆ ಬಳಿಕ ಜೆ.ಡಿ.ಎಸ್‌ಗೆ ಮತ್ತೆ ಬಿಜೆಪಿಗೆ ಸೇರಿದರು. ಅಲ್ಲಿಂದ ಆಮ್ ಆದ್ಮಿ ಪಕ್ಷ ಸೇರ್ಪಡೆಗೊಂಡರು. ಕೆಲವೇ ತಿಂಗಳ ಹಿಂದೆಯಷ್ಟೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಈ ಮಧ್ಯೆ ಗುತ್ತಿಗಾರು ಗ್ರಾಂ.ಪಂ ಚುನಾವಣೆಗೆ ಸ್ಪರ್ಧಿಸಿ ವಿಜೇತರಾದ ಅವರು ಒಂದು ಅವದಿಗೆ ಪಂಚಾಯತ್‌ನ ಅಧ್ಯಕ್ಷರು ಆಗಿದ್ದರು.
ಆದರೆ ಬಾಕಿಲ ಹುಕ್ರಪ್ಪ ಹೆಚ್ಚು ಸುದ್ದಿ ಮಾಡಿದ್ದು, ಕಾರ್ಮಿನಾಗಿಯೇ ಕಾಣಿಸಿಕೊಂಡಾಗ ಸಕ್ರೀಯ ರಾಜಕಾರಣದಲ್ಲಿ ಚಲಾವಣೆ ಇಲ್ಲದ ನಾಣ್ಯವಾದಾಗ ಅನಿವಾರ್ಯವಾಗಿ ಬೇರೆಯವೆ ರಬ್ಬರ್ ತೋಟದಲ್ಲಿ ಕಾರ್ಮಿಕನಾಗಿ ದುಡಿಯ ಬೇಕಾಯಿತು. ಸರ್ಕಾರದಿಂದ ಬರುತ್ತಿದ್ದ ಪಿಂಚಣಿಯ ಹಣ ಬೇರೆ ಉದ್ದೇಶಗಳಿಗೆ ಬಳಕೆಯಾದಾಗ ತುತ್ತಿನ ಚೀಲ ತುಂಬಿಸಲು ಕಾರ್ಮಿಕನಾಗಬೇಕಾದ್ದು ಅನಿವಾರ್ಯವಾಯಿತು. ಬಾಕಿಲ ಹುಕ್ರಪ್ಪರ ಈ ದುಡಿಮೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಮಾದ್ಯಮಗಳಲ್ಲು ಬೆಳಕಿಗೆ ಬರುವಂತಾಯಿತು.
ಕೆಲವು ವರುಪಗಳ ಹಿಂದೆ ಅಸೌಖ್ಯದಿಂದ ಸುಳ್ಯದ ಅಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಹುಕ್ರಪ್ಪರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲು ಹಣವಿಲ್ಲದೆ ಊರ ಮುಖಂಡರೇ ಹಣ ಹೊಂದಿಸಬೇಕಾಯಿತು. ಕಳೆದ ಮೂರು ತಿಂಗಳಿಂದ ತೀರ್ವ ಆನಾರೋಗ್ಯದಿಂದ ಅವರು ಮೆಟ್ಟಿನಡ್ಕದ ಮಗನ ಮನೆಯಲಿದ್ದರು.
ಒಂದು ಭಾರೀ ಶಾಸಕನಾಗುತ್ತಲೇ ತನಗಾಗಿ ತಮ್ಮವರಿಗಾಗಿ, ತಲೆಮಾರಿಗಾಗಿ ಎಲ್ಲವನ್ನು ಮಾಡಿಕೊಂಡು, ಮೆರೆಯುತ್ತಿರುವ ಜನಪ್ರತಿನಿಧಿಗಳಿರುವ ಇಂದಿನ ಕಾಲದಲ್ಲಿ ಬಾಕಿಲ ಹುಕ್ರಪ್ಪರವರ ಕೊನೆ ಕಾಲದ ದಯಾನೀಯ ಬದುಕು ಕಾಲದ ವ್ಯಂಗ್ಯವೇ ಸರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.