ಮನೆ ಮೇಲೆ ಉರುಳಿ ಬಿದ್ದ ಲಾರಿ

Advt_Headding_Middle
Advt_Headding_Middle

ಜಾಲ್ಸೂರು ಗ್ರಾಮದ ಬೊಳುಬೈಲು ಎಂಬಲ್ಲಿ ಲಾರಿಯೊಂದು ಹೊಸದಾಗಿ ನಿರ್ಮಿಸುತ್ತಿದ್ದ, ಮನೆಯೊಂದರ ಮೇಲೆ ಲಾರಿ ಉರುಳಿ ಬಿದ್ದಿರುವ ಘಟನೆ ವರದಿಯಾಗಿದೆ.ಸಾಫಿ ಎಂಬವರ ಮನೆಗೆ ಹೋಗುತ್ತಿದ್ದ ಲಾರಿ, ರವಿ ಎಂಬವರ ಹೊಸ ಮನೆಯ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಮನೆಗೆ ಹಾನಿಯಾಗಿದ್ದು, ಲಾರಿಯನ್ನು ಮೇಲೆಕ್ಕೆತ್ತುವ ಪ್ರಯತ್ನ ಸಾಗಿದೆ.ಸಾಫಿ ಎಂಬವರ ಮನೆಗೆ ಹೋಗುತ್ತಿದ್ದ ಲಾರಿ, ರವಿ ಎಂಬವರ ಹೊಸ ಮನೆಯ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ಮನೆಗೆ ಹಾನಿಯಾಗಿದ್ದು, ಲಾರಿಯನ್ನು ಮೇಲೆಕ್ಕೆತ್ತುವ ಪ್ರಯತ್ನ ಸಾಗಿದೆ.

ಮಾತುಕತೆಯಲ್ಲಿ ಇತ್ಯರ್ಥ
ಜಾಲ್ಸೂರು ಗ್ರಾಮ ಪಂಚಾಯತ್ ಕಛೇರಿಯಲ್ಲಿ ಉಪಾಧ್ಯಕ್ಷ ದಿನೇಶ್ ಅಡ್ಕಾರು ಅವರ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯಿತು. ಬೋರ್ ವೆಲ್ ಏಜೆಂಟ್ ಬೆಳ್ಳಾರೆಯ ಚಂದ್ರಶೇಖರ ಕಾಮತ್, ಮನೆಯ ಮಾಲಕ ರಮೇಶ್, ರವೀಂದ್ರ, ಗ್ರಾ.ಪಂ. ಸದಸ್ಯ ಪ್ರವೀಣ ಪಿಲಿಕೋಡಿ , ಬೋರ್ ವೆಲ್ ಕಾರ್ಮಿಕರು ಸೇರಿದಂತೆ ಪಂಚಾಯತ್ ಆಡಳಿತ ಮಂಡಳಿ ಸದಸ್ಯರ ಸಮ್ಮುಖದಲ್ಲಿ ಮಾತುಕತೆ ನಡೆದು ಮನೆಯ ಕಂಪೌಂಡ್ ಮತ್ತು ಹಾನಿಯಾದುದಕ್ಕೆ ಒಂದು ಲಕ್ಷದ ಮೂವತ್ತೈದು ಸಾವಿರ ನಗದು ನೀಡುವುದಾಗಿ ಒಪ್ಪಿಕೊಂಡರು. ಘಟನೆಯಲ್ಲಿ ಮನೆಯ ಕಂಪೌಂಡ್, ಎರಡು ಕಿಟಕಿ, ಸನ್ ಸೈಡ್, ಎರಡು ಕೋಣೆಯ ಗೋಡೆಗಳಿಗೆ ಹಾನಿಯಾಗಿದ್ದು ಸುಮಾರು ಎರಡೂವರೆ ಲಕ್ಷದಷ್ಟು ನಷ್ಟ ಸಂಭವಿಸಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.