Breaking News

ಅರಂತೋಡಿನಲ್ಲಿ ಜೀಪು ಪಲ್ಟಿ : ಗಾಯ

Advt_Headding_Middle
Advt_Headding_Middle

ಮಡಿಕೇರಿಯ ಮೂರ್ನಾಡಿನಿಂದ ಕಾಸರಗೋಡಿಗೆ ಹೋಗುತ್ತಿದ್ದ ಜೀಪೊಂದು ಅರಂತೋಡು ಮಸೀದಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಗುಡ್ಡಕ್ಕೆ ಹತ್ತಿ ಪಲ್ಪಿಯಾದ ಘಟನೆ ನ.೨೬ರಂದು ವರದಿಯಾಗಿದೆ.
ಪರಿಣಾಮ ಜೀಪಿನ ಚಾಲಕ ವಾಮನರ ಮೂಗಿಗೆ ಗಾಯವಾಗಿದ್ದರೆ, ಅದರಲ್ಲಿದ್ದ ವಾರಿಜ ಮತ್ತು ಸರೋಜ ಎಂಬವರ ಕಾಲಿಗೆ ಗಾಯವಾಗಿದೆ. ಜೀಪಿನಲ್ಲಿದ್ದ ಇನ್ನಿಬ್ಬರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತೆಂದು ತಿಳಿದು ಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ತಾಜುದ್ದೀನ್ ಟರ್ಲಿ ಮತ್ತು ತಾಜುದ್ದೀನ್ ಅರಂತೋಡು ಹಾಗೂ ಇತರ ಯುವಕರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.