HomePage_Banner
HomePage_Banner
HomePage_Banner
HomePage_Banner

ಸೊಂಪಾದ ಕೂದಲಿಗೆ ಸೀಬೆಕಾಯಿ

ಸೊಂಪಾದ ಕೂದಲಿನ ಬಯಕೆ ಯಾರಿಗಿರುವುದಿಲ್ಲ ಹೇಳಿ. ಇಳಿಬಿದ್ದ ಜಲಪಾತದಂತಿರುವ ದಟ್ಟ ಕಪ್ಪು ಕೇಶರಾಶಿಯ ಸೊಬಗಿಗೆ ಬೆರಗಾಗದವರು ಈ ಭೂಮಿಯಲ್ಲಿ ಯಾರೂ ಇರಲಿಕ್ಕಿಲ್ಲ. ಯಕ್ಷ ಗಂಧರ್ವರ ಕಾಲದಿಂದಲೂ ದಟ್ಟ ಕಾರ್ಮೋಡದಂತಿರುವ ತಲೆಗೂದಲು ತನ್ನದೇ ಪ್ರಾಶಸ್ತ್ಯವನ್ನು ಹೊಂದಿದೆ. ಚಿತ್ರಗಳಲ್ಲಿಯೂ ನೀಳಕೇಶರಾಶಿಯುಳ್ಳ ಹೆಂಗಳೆಯರ ಚಿತ್ರವನ್ನೇ ಹೆಚ್ಚು ಬಿಡಿಸಿರುವುದನ್ನು ನೀವು ಗಮನಿಸಿರಬಹುದು. ಅಂದವಾದ ಕೂದಲು ಮಹಿಳೆಗೆ ಆಭರಣಗಳಿಗಿಂತಲೂ ಹೆಚ್ಚು ಮಹತ್ವಪೂರ್ಣವಾಗಿತ್ತು ಎಂಬುದು ಇದರಿಂದ ತಿಳಿದುಕೊಳ್ಳಬಹುದು.
ನೈಸರ್ಗಿಕ ವಿಧಾನಗಳಿಂದಲೇ ಅಂದಿನ ಕಾಲದ ಹೆಂಗಳೆಯರು ತಮ್ಮ ನೀಳ್ಗೂದಲನ್ನು ಪೋಷಿಸುತ್ತಿದ್ದರು. ತಲೆತೊಳೆಯಲು ಸೀಗೆಕಾಯಿ, ಸೊಪ್ಪುಗಳ ಕಂಡೀಶನರ್ ವಿಧಾನವನ್ನು ಇವರು ಹೆಚ್ಚು ಆಯ್ದುಕೊಳ್ಳುತ್ತಿದ್ದರು. ಕೂದಲು ತೊಳೆದುಕೊಂಡ ನಂತರ ಬಿಸಿಲಿನಲ್ಲಿ ಪ್ರಾಕೃತಿಕವಾಗಿ ಒಣಗಿಸಿಕೊಳ್ಳುತ್ತಿದ್ದರು. ತಲೆಗೂದಲಿಗೆ ಹಚ್ಚಿಕೊಳ್ಳುವ ಎಣ್ಣೆ ತಯಾರಿಯಲ್ಲೂ ವಿಶೇಷ ಅಸ್ಥೆಯನ್ನು ಇವರು ವಹಿಸುತ್ತಿದ್ದರು.

ಆದರೆ ಈಗ ತಲೆಗೂದಲಿನ ಆರೈಕೆಗೆ ಸಮಯದ ಅಭಾವವಾಗಿದೆ. ಎಣ್ಣೆ ತಯಾರಿಸುವುದನ್ನು ಬಿಟ್ಟು ನೆತ್ತಿಗೆ ಎಣ್ಣೆಯಿಟ್ಟು ಮಾಡುವ ತಲೆಸ್ನಾನ ಕೂಡ ಎರಡು ವಾರಕ್ಕೊಮ್ಮೆ ಅದೂ ಅಮ್ಮ ನೆನಪಿಸಿದಾಗ ಎಂಬಂತಾಗಿದೆ. ದೈನಂದಿನ ಬಿಡುವಿಲ್ಲದ ಬದುಕಿನಲ್ಲಿ ಎಣ್ಣೆ ಹಚ್ಚಿ ತಲೆಸ್ನಾನಗೈಯುವುದು, ಕೂದಲಿಗೆ ವಿಶೇಷ ಆರೈಕೆಯನ್ನು ಮಾಡಲು ಸಮಯವೇ ನಮ್ಮಲ್ಲಿ ಇಲ್ಲ ಎಂಬಂತಹ ಸ್ಥಿತಿ ಬಂದೊದಗಿದೆ. ಆದರೂ ನೀಳವಾದ ದಟ್ಟ ಕೂದಲನ್ನು ನೋಡಿದಾಗ ನಮ್ಮಲ್ಲೂ ಇಂತಹ ಕೂದಲು ನಮಗೂ ಬೇಕು ಎಂಬ ಭಾವನೆ ಮೂಡುವುದು ಸಹಜ. ಹಾಗಿದ್ದರೆ ನೀವು ಸ್ವಲ್ಪ ಸಮಯವನ್ನು ಹೊಂದಿಸಿಕೊಳ್ಳಲೇಬೇಕು.

 

ಹತ್ತಾರು ಕಾಯಿಲೆಗಳನ್ನು ಗುಣಪಡಿಸುವ ಪವರ್ ಸೀಬೆ ಎಲೆಗಳಲ್ಲಿದೆ
ಕೂದಲುದುರುವುದು ತಡೆಯಬೇಕಾ? ಹಾಗಿದ್ದರೆ ಸೀಬೆ ಎಲೆಯನ್ನು ಬಳಸಿ
ತಯಾರಿಸಲು ಬೇಕಾಗುವ ಸಾಮಾಗ್ರಿಗಳು
* ಒಂದು ಮುಷ್ಟಿ ಸೀಬೆ ಎಲೆಗಳು
* ಒಂದು ಲೀಟರ್ ನೀರು
* ಕುದಿಸಲೊಂದು ಪಾತ್ರೆ
* ಜರಡಿ* ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಲು ಇರಿಸಿ.
* ನೀರು ಕುದಿಯಲಾರಂಬಿಸಿದ ನಂತರ ಸೀಬೆ ಎಲೆಯನ್ನು ಆ ಪಾತ್ರೆಗೆ ಹಾಕಿ.
* ಹಾಗೆಯೇ ೨೦ ನಿಮಿಷಗಳ ಕಾಲ ನೀರು ಕುದಿಯುವುದನ್ನು ಮುಂದುವರಿಸಿ.
* ನಂತರ ನೀರು ಮತ್ತು ಎಲೆಯ ಮಿಶ್ರಣವನ್ನು ತಣ್ಣಗಾಗಲು ಬಿಡಿ.

೧. ಕೂದಲಿಗೆ ಕಂಡೀಷನರ್ ಬಳಸದೆಯೇ ಶಾಂಪೂ ಬಳಸಿ ಸ್ವಚ್ಛಗೊಳಿಸಿ.
೨. ಕೇಶಗಳು ಸ್ವಲ್ಪ ಒಣಗಿದೆ ಎನ್ನುವಾಗ ತಯಾರಿಸಿಕೊಂಡ ಮಿಶ್ರಣವನ್ನು ಅನ್ವಯಿಸಿ.
೩. ನೆತ್ತಿಯ ಮೇಲೆ ಮತ್ತು ಕೂದಲುಗಳ ಬುಡಕ್ಕೆ ಮಿಶ್ರಣವನ್ನು ಲೇಪಿಸಿ ಮಸಾಜ್ ಮಾಡಿ.
೪. ನಂತರ ೨ ಗಂಟೆಗಳ ಕಾಲ ಹಾಗೇ ಇರಲು ಬಿಡಿ
೫. ಬಳಿಕ ತಣ್ಣೀರಿನಲ್ಲಿ ಕೂದಲನ್ನು ತೊಳೆಯಿರಿ.

ಕೂದಲು ತುಂಬಾ ಉದುರುತ್ತಿದ್ದರೆ ಸೀಬೆ ಎಲೆಯ ಮಿಶ್ರಣವನ್ನು ವಾರದಲ್ಲಿ ಮೂರು ಬಾರಿ ಬಳಸಿ. ಕೇವಲ ಕೂದಲುಗಳ ಬೆಳವಣಿಗೆ ಅಥವಾ ಹೊಳೆಯುವಿಕೆಯ ಉದ್ದೇಶವಾಗಿದ್ದರೆ ವಾರದಲ್ಲಿ ಎರಡುಬಾರಿ ಬಳಸಿ.
ಮುನ್ನೆಚ್ಚರಿಕೆ
* ಮಿಶ್ರಣವನ್ನು ಅನ್ವಯಿಸುವ ಮುಂಚೆ ತಣ್ಣಗಾಗಿದೆಯೇ ಎಂದು ಪರೀಕ್ಷಿಸಿಕೊಳ್ಳಿ.
* ಬಿಸಿ ನೀರಿನಿಂದ ಕೂದಲನ್ನು ತೊಳೆಯಬಾರದು. ಇದು ನೆತ್ತಿ ಮತ್ತು ಕೂದಲನ್ನು ಒಣಗಿಸುತ್ತದೆ.

೧. ಇದರಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುವುದರಿಂದ ಕೂದಲು ವೇಗವಾಗಿ ಮತ್ತು ಆರೋಗ್ಯಕರವಾಗಿ ಬೆಳೆಯಲು ಸಹಾಯ ಮಾಡುತ್ತದೆ.
೨. ರೋಗ ನಿರೋಧಕ ಶಕ್ತಿ ಹೆಚ್ಚಿದೆ.
೩. ಸೂರ್ಯನ ಹಾನಿಕಾರಕ ನೇರಳಾತೀತ ಕಿರಣಗಳಿಂದ ರಕ್ಷಣೆ ನೀಡುತ್ತದೆ.
೪. ಇದರ ಮಸಾಜ್ ಮಾಡುವುದರಿಂದ ರಕ್ತದೊತ್ತಡವು ಸುಧಾರಿಸುತ್ತದೆ.
೫. ಕೂದಲನ್ನು ಮೃದು ಹಾಗೂ ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.