HomePage_Banner
HomePage_Banner
HomePage_Banner
HomePage_Banner

ಇನ್ನು ಗರ್ಭಿಣಿಯರಿಗೆ ಸಿಗಲಿದೆ ೫ಸಾವಿರ ರೂ.ನೆರವು ಪ್ರದಾನ ಮಂತ್ರಿ ಮಾತೃವಂದನಾ ಯೋಜನೆ ಅನುಷ್ಠಾನ. ಜನನಿ ಸುರಕ್ಷಾದಿಂದ ಮತ್ತೆ ಸಾವಿರ ರೂ.ನೆರವು

ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಇದೀಗ ರಾಜ್ಯದಲ್ಲಿ ಅನುಷ್ಠಾನಕ್ಕೆ ಬರುತ್ತಿದ್ದು ಆದರಂತೆ ಎಲ್ಲ ಗರ್ಭಿಣಿ ಮಹಿಳೆಯರು ಐದು ಸಾವಿರ ರೂ. ಸಹಾಯಧನ ಪಡೆಯಲಿದ್ದಾರೆ. ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರಕಾರ ಅಡಳಿತ್ಮಾಕ ಅನುಮೋದನೆ ನೀಡಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಜಾರಿ ಗೊಳುಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.
ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳಿಂದ ಗರ್ಭಾವಸ್ಥೆಯಲ್ಲಿ ಪೌಷ್ಠಿಕಾಂಶ ಸಿಗದೆ, ಮಹಿಳೆ ಜೀವನದುದ್ದಕ್ಕೂ ಅನಾರೋಗ್ಯಕ್ಕೆ ತುತ್ತಾಗುವ, ಸ್ತನ್ಯಪಾನ ಮಾಡಲು ಅಶಕ್ತರಾಗುವ ಹಾಗೂ ಹುಟ್ಟುವ ಮಗು ಕೂಡಾ ಅಪೌಷ್ಠಿಕತೆಯಿಂದ ಬಳಲುವ ಕಾರಣದಿಂದ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ೨೦೧೩ರ ಪ್ರಕಾರ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಘೋಷಿಸಲಾಗಿದೆ.

ಜನನಿ ಸುರಕ್ಷಾವೂ ಲಭ್ಯ: ಪ್ರಸವದ ಸಂದರ್ಭದಲ್ಲಿ ತಾಯಿ ಮಗುವಿನ ಸಾವಿನ ಪ್ರಮಾಣ ಕಡಿಮೆಗೊಳಿಸುವ ನಿಟ್ಟಿನಲ್ಲಿ ಆಸ್ಪತ್ರೆಗಳಲ್ಲಿ ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಬಡವರಿಗೆ ನೀಡುವ ಜನನಿ ಸುರಕ್ಷಾ ಯೋಜನೆಯ ಒಂದು ಸಾವಿರ ರೂ. ಸೇರಿ ಒಟ್ಟು ಆರು ಸಾವಿರ ರೂ. ಪಡೆಯಲು ಅವಕಾಶವಿದೆ. ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಜಿಲ್ಲಾಮಟ್ಟದಲ್ಲಿ ಯೋಜನೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಹೊಸ ಯೋಜನೆಯಾದ ಕಾರಣ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪಿಎಂಎಂವಿವೈ ಕೋಶ ಸ್ಥಾಪಿಸಲು ಮತ್ತು ಆ ಕೋಶಗಳಿಗೆ ಒಬ್ಬ ಸಂಯೋಜಕರು ಹಾಗೂ ಒಬ್ಬ ಕಾರ್ಯಕ್ರಮ ಸಹಾಯಕರನ್ನು ಬಾಹ್ಯ ಮೂಲದಿಂದ ನೇಮಿಲು ಅವಕಾಶ ಒದಗಿಸಲಾಗಿದೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ನಿರೂಪಣಾಧಿಕಾರಿ ಹಾಗೂ ತಾಲೂಕು ಮಟ್ಟದಲ್ಲಿ ಶಿಶು ಅಭಿವೃದ್ಧಿ ಯೋನಾಧಿಕಾರಿಗೆ ಯೋಜನೆ ಜಾರಿ ಮತ್ತು ಮೇಲ್ವಚಾರಣೆ ಜವಾಬ್ದಾರಿ ವಹಿಸಲಾಗುತ್ತಿದೆ.

ಯಾರಿಗೆ ಸೌಲಭ್ಯ?: ೨೦೧೭ರ ಜ.೧ರ ನಂತರ ಗರ್ಭಿಣಿ ಆಗಿರುವ ಎಲ್ಲ ಮಹಿಳೆಯರಿಗೂ ಈ ಯೋಜನೆ ಲಭ್ಯ. ಸಹಾಯಧನದ ಐದು ಸಾವಿರ ರೂ.ಮೊತ್ತವನ್ನು ಮೂರು ಕಂತುಗಳಲ್ಲಿ ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿ ಖಾತೆಗೆ ವರ್ಗಾಯಿಸಲಾಗುತ್ತದೆ. ಹಾಗಾಗಿ ಯೋಜನೆ ಪಡೆಯವ ಫಲಾನುಭವಿಗಳು ಬ್ಯಾಂಕ್ ಖಾತೆ ಹೊಂದುವುದು ಅತೀ ಅಗತ್ಯ. ಯೋಜನೆಯು ಮೊದಲು ಜೀವಂತ ಹೆರಿಗೆಗೆ ಮಾತ್ರ ಸೀಮಿತ ಮಾಡಲಾಗಿದೆ. ನಗದು ವರ್ಗಾವಣೆ ಗರ್ಭಿಣಿ ಎಂದು ನೋಂದಣಿ ಆದಾಗ ಒಂದನೇ ಕಂತು ಒಂದು ಸಾವಿರ ರೂ. ವರ್ಗಾವಣೆ ಮಾಡಲಾಗುತ್ತದೆ. ಕನಿಷ್ಠ ಒಂದು ಅರೋಗ್ಯ ತಪಾಸಣೆ ಅದಾಗ ಅಥವಾ ಗರ್ಭಿಣಿಯಾಗಿ ಆರು ತಿಂಗಳಲ್ಲಿ ಎರಡನೇ ಕಂತಿನ ಮೊತ್ತ ಎರಡು ಸಾವಿರ ರೂ.ಮೊತ್ತವನ್ನು, ಮತ್ತು ಮೂರನೇ ಕಂತಿನ ಎರಡು ಸಾವಿರ ರೂ. ಮೊತ್ತವನ್ನು ಮಗು ಜನನ ನೋಂದಣಿ ಮೊದಲನೇ ಹಂತದ ಚುಚ್ಚು ಮದ್ದುಗಳನ್ನು ನೀಡುವ ಸಂದರ್ಭದಲ್ಲಿ ವರ್ಗಾವಣೆ ಮಾಡಲಾಗುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.