HomePage_Banner
HomePage_Banner

ನೀಟ್ ೨೦೧೮: ಮೇ ೧೦ ರಂದು ನಡೆಯುವ ಸಾಧ್ಯತೆ

ಸಿಬಿಎಸ್‌ಇ ನೀಟ್ ೨೦೧೮ ರ ಪರೀಕ್ಷೆಯು ಮೇ ೧೦ ರಂದು (ಗುರುವಾರ) ನಡೆಯುವ ಸಾಧ್ಯತೆ ಇದೆ. ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ (ಎಂಸಿಐ) ಆಗಸ್ಟ್ ೧೮ ರೊಳಗೆ ವೈದ್ಯಕೀಯ ಮತ್ತು ದಂತ ಶಿಕ್ಷಣಕ್ಕೆ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದು, ಈ ವರ್ಷ ನೀಟ್ ಪರೀಕ್ಷೆಯನ್ನು ಭಾನುವಾರದ ಬದಲು ಗುರುವಾರ ನಡೆಯುವ ಸಾಧ್ಯತೆ ಇದೆ. ಎನ್‌ಇಇಟಿ ಫಲಿತಾಂಶಗಳನ್ನು ಆಧರಿಸಿ ಜುಲೈ ೧೦ ರಿಂದ ಪ್ರವೇಶ ಪ್ರಕ್ರಿಯೆ ನಡೆಸಲು ನಿರ್ಧರಿಸಿದ್ದು, ಜೂನ್ ಮೊದಲ ವಾರದಲ್ಲೇ ಫಲಿತಾಂಶಗಳು ಪ್ರಕಟವಾಗಲಿದೆ ಎಂದು ಎಂಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಜನವರಿ ತಿಂಗಳ ಅಂತ್ಯದ ವೇಳೆಗೆ ನೀಟ್ ಪರೀಕ್ಷೆಯ ಅಧಿಕೃತ ಪ್ರಕಟಣೆ ಹೊರಬಿದ್ದಿತ್ತು. ಸುಮಾರು ೬೫,೧೭೦ ಎಂಬಿಬಿಎಸ್ ಸೀಟುಗಳು ಮತ್ತು ಸುಮಾರು ೨೫,೭೩೦ ಬಿಡಿಎಸ್ ಕೋರ್ಸುಗಳಿಗೆ ಪ್ರವೇಶಕ್ಕಾಗಿ ೭ ಮೇ ೨೦೧೭ ರಂದು ನೀಟ್ ಪರೀಕ್ಷೆಗಳು ನಡೆದಿತ್ತು.
ಎಂಸಿಐ & ಡಿಸಿಐ ವೆಬ್ಸೈಟ್ಗಳಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ೪೭೦ ವೈದ್ಯಕೀಯ ಕಾಲೇಜುಗಳು ಮತ್ತು ೩೦೮ ಡೆಂಟಲ್ ಕಾಲೇಜುಗಳು ನೀಟ್ ಫಲಿತಾಂಶಗಳ ಆಧಾರದ ಮೇಲೆ ಅಧಿಕೃತ ಪ್ರವೇಶ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ.
ನೀಟ್ ಪರೀಕ್ಷೆ ಮೇ ೭ರಂದು ನಡೆದಿತ್ತು. ದೇಶದಾದ್ಯಂತ ೧೧ ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮರಾಠಿ, ಕನ್ನಡ, ಬೆಂಗಾಲಿ, ಅಸ್ಸಾಮಿ, ಗುಜರಾತಿ ಮತ್ತು ಒಡಿಯಾ ಸೇರಿ ಹತ್ತು ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಇತ್ತು.
೨೦೧೩ರಲ್ಲಿ ಮೊದಲ ಬಾರಿಗೆ ನೀಟ್ ಪರೀಕ್ಷೆ ನಡೆಸಲಾಗಿತ್ತು. ಇದಾದ ನಂತರ ನಿಂತಿದ್ದ ಪರೀಕ್ಷೆಯನ್ನು ೨೦೧೬ರಲ್ಲಿ ಮತ್ತೆ ಪುನರಾರಂಭಿಸಲಾಗಿತ್ತು. ೨೦೧೬ರಲ್ಲಿ ಎರಡು ಹಂತದಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆದರೆ ಕಳೆದ ಬಾರಿ ಒಂದೇ ಹಂತದಲ್ಲಿ ಪರೀಕ್ಷೆ ನಡೆಸಲಾಗಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.