Breaking News

ಸುಬ್ರಹ್ಮಣ್ಯ ಪೊಲೀಸರಿಂದ ದೌರ್ಜನ್ಯ -ತಮಿಳು ಚಿತ್ರನಟಿ ಆರೋಪ

Advt_Headding_Middle
Advt_Headding_Middle

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತಾನು ಬಂದಿದ್ದ ವೇಳೆ ತನ್ನ ಸಹಾಯಕ್ಕಾಗಿ ಬಂದಿದ್ದ ಯುವಕನನ್ನು ಸುಬ್ರಹ್ಮಣ್ಯ ಪೊಲೀಸರು ಠಾಣೆಗೆ ಕರೆಸಿಕೊಂಡು ದೌರ್ಜನ್ಯ ಎಸಗಿದ್ದಾರೆಂದು ತಮಿಳು ಚಿತ್ರನಟಿ ಅವಿಷ್ಕಾ ಆರೋಪಗೈದಿದ್ದಾರೆ. ದ.೨೦ರಂದು ಅವಿಷ್ಕಾ ಸರ್ಪಸಂಸ್ಕಾರಕ್ಕೆಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದರು. ಅಲ್ಲಿ ಛತ್ರವೊಂದರಲ್ಲಿ ಒಬ್ಬಂಟಿಯಾಗಿದ್ದ ಅವರ ಕೊಠಡಿಗೆ ಒಂದೆರಡು ಬಾರಿ ಬೆಳ್ಳಾರೆಯ ಫರ್ಝಾನ್ ಎಂಬ ಯುವಕ ಬಂದು ಹೋಗುವುದನ್ನು ಕಂಡ ಕೆಲವರು ಪೊಲೀಸರಿಗೆ ವಿಷಯ ತಿಳಿಸಿದ ಮೇರೆಗೆ ಪೊಲೀಸರು ಅಂದು ರಾತ್ರಿಯೇ ಛತ್ರಕ್ಕೆ ಹೋಗಿ ಆಕೆಯನ್ನು ಠಾಣೆಗೆ ಕರೆದೊಯ್ದಿದ್ದರು. ಮರುದಿನ ಬೆಳಿಗ್ಗೆ ಫರ್ಝಾನ್‌ನ್ನು ಕೂಡಾ ಠಾಣೆಗೆ ಕರೆಸಿದ ಪೊಲೀಸರು ವಿಚಾರಣೆ ನಡೆಸಿದರು. ಆ ಸಂದರ್ಭದಲ್ಲಿ ಅವರಿಬ್ಬರೂ ” ನಾವು ಬೆಂಗಳೂರಿನಲ್ಲಿ ಚಿತ್ರೀಕರಣವಾಗುತ್ತಿದ್ದ ಹಿಂದಿ ಸಿನಿಮಾವೊಂದರಲ್ಲಿ ಜತೆಯಾಗಿ ನಟಿಸುತ್ತಿದ್ದು, ಪರಸ್ಪರ ಪರಿಚಯವುಳ್ಳವರಾಗಿದ್ದರೆಂದೂ, ಸರ್ಪ ಸಂಸ್ಕಾರಕ್ಕೆಂದು ಸುಬ್ರಹ್ಮಣ್ಯಕ್ಕೆ ಬಂದಿದ್ದ ಅವಿಷ್ಕಾ ಹಣದ ಕೊರತೆಯಾದುದರಿಂದ ಫರ್ಝಾನ್ನನ್ನು ಬರಹೇಳಿ ಆತನಿಂದ ಹಣ ಪಡೆದಿರುವುದಾಗಿಯೂ ಹೇಳಿದ್ದರು. ಆ ಬಳಿಕ ಪೊಲೀಸರು ಆಕೆಯ ಹೆತ್ತವರನ್ನು ಸುಬ್ರಹ್ಮಣ್ಯಕ್ಕೆ ಕರೆಸಿಕೊಂಡು ಅವರ ಜತೆ ಕಳಿಸಿಕೊಟ್ಟಿದ್ದರು. ಬೆಳ್ಳಾರೆಯ ಫರ್ಝಾನ್‌ನನ್ನು ಬೆಳ್ಳಾರೆಗೆ ಕಳಿಸಿದರು. ವಿಚಾರಣೆಯ ಸಂದರ್ಭದಲ್ಲಿ ಪೊಲೀಸರು ಅವರಿಬ್ಬರಿಗೂ ಪೊಲೀಸ್ ರುಚಿ ತೋರಿಸಿದ್ದರೆನ್ನಲಾಗಿದೆ.ಆದರೆ ಈ ಘಟನೆಯನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಲವ್ ಜಿಹಾದ್ ಎಂದು ಬಿಂಬಿಸಿ, ಪ್ರಚಾರ ನಡೆಸತೊಡಗಿದ್ದರು.
ಇದನ್ನು ಖಂಡಿಸಿ ಅವಿಷ್ಕಾ ಸೆಲ್ಫ್ ವೀಡಿಯೋ ಮಾಡಿಕೊಂಡು ಘಟನೆಯ ವಿವರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ ಮತ್ತು ಸುಬ್ರಹ್ಮಣ್ಯ ಪೊಲೀಸರು ದೌರ್ಜನ್ಯ ನಡೆಸಿರುವುದಾಗಿ ಆರೋಪಿಸಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್‌ಕುಮಾರ್ ರೆಡ್ಡಿಯವರು ಸುಬ್ರಹ್ಮಣ್ಯ ಪೊಲೀಸರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.