ದುಗಲಡ್ಕ -ನೀರಬಿದರೆ-ಸುಳ್ಯ ರಸ್ತೆ ಕಾಮಗಾರಿ ಜ.೧೫ರೊಳಗೆ ಪ್ರಾರಂಭಿಸದಿದ್ದರೆ ಉಗ್ರ ಪ್ರತಿಭಟನೆ : ಊರವರ ಸಭೆಯಲ್ಲಿ ನಿರ್ಧಾರ

Advt_Headding_Middle
Advt_Headding_Middle

ದುಗ್ಗಲಡ್ಕ – ನೀರಬಿದಿರೆ ಕಮಿಲಡ್ಕ ಕೊಡಿಯಾಲ ಬೈಲು- ಸುಳ್ಯ ರಸ್ತೆ ದುರಸ್ತಿಗೆ ಒತ್ತಾಯಿಸಿ ನಾಗರಿಕ ಹೋರಾಟ ಸಮಿತಿಯಿಂದ ಊರವರ ಸಮಾಲೋಚನಾ ಸಭೆ ಡಿ.೩೧ರಂದು ಕಮಿಲಡ್ಕ ಭಜನಾ ಮಂದಿರ ವಠಾರದಲ್ಲಿ ನಡೆಯಿತು.
ಈ ರಸ್ತೆಗೆ ಶೀಘ್ರ ಅನುದಾನವನ್ನು ಒದಗಿಸಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಬೇಕೆಂದು ಒತ್ತಾಯಿಸಲಾಯಿತು. ಈ ರಸ್ತೆ ಗೆ ಸಂಬಂಧಿಸಿದ ಸ್ಥಳೀಯ ಪಂಚಾಯತ್ ಸದಸ್ಯರು, ನಗರ ಪಂಚಾಯತ್ ಸದಸ್ಯರು , ನಗರ ಪಂಚಾಯತ್ ಅಧ್ಯಕ್ಷರು , ತಾಲೂಕು ಪಂಚಾಯತ್ ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯರು, ಶಾಸಕರು, ಸಂಸದರು , ರಾಜ್ಯ ಸರಕಾರ , ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ಮನವಿಗೆ ಅನುಗುಣವಾಗಿ ಕಾಮಗಾರಿಯನ್ನು ಮುಂದಿನ ಜನವರಿ ೧೫ರ ಒಳಗಾಗಿ ಪ್ರಾರಂಭಿಸಬೇಕೆಂದು , ಒಂದು ವೇಳೆ ಕಾಮಗಾರಿ ಪ್ರಾರಂಭ ಮಾಡದೇ ಇದ್ದಲ್ಲಿ ಸಾರ್ವಜನಿಕ ಹೋರಾಟ ಸಮಿತಿಯಿಂದ ಬ್ರಹತ್ ಪ್ರತಿಭಟನೆ ಮಾಡುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಭೆಯಲ್ಲಿ ಮಾಜಿ ನಗರ ಪಂಚಾಯತ್ ಅಧ್ಯಕ್ಷ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಂ ವೆಂಕಪ್ಪಗೌಡ , ದಿನೇಶ ಅಂಬೆಕಲ್ಲು , ಸೀತಾರಾಮ ಗೌಡ, ಡಾ.ಅಶೋಕ್ ,ಮನೋಜ್ ಪಾನತ್ತಿಲ, ಮೋಹನ್ ಬೇರ್ಪಡ್ಕ , ಬಾಲಕೃಷ್ಣ ನಾಯರ್, ಶಿವರಾಮ ಮಡಪ್ಪಾಡಿ ಹಾಗು ಸ್ಥಳೀಯ ಸಾರ್ವಜನಿಕರು ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.