Breaking News

ಪೊಲೀಸರಿಂದ ಅನೈತಿಕ ಪೊಲೀಸ್ ಗಿರಿ- ಕ್ರಿಮಿನಲ್ ಪ್ರಕರಣ ದಾಖಲಿಸಲು ಎಸ್.ಡಿ.ಪಿ.ಐ ಆಗ್ರಹ

Advt_Headding_Middle
Advt_Headding_Middle

ಡಿ.೨೦ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ತಮಿಳು ಚಿತ್ರ ನಟ ಮತ್ತು ನಟಿಯನ್ನು ವಿನಃ ಕಾರಣ ಬಂಧಿಸಿ ಇವರಿಬ್ಬರ ಮೇಲೆ ಸುಳ್ಳು ಆರೋಪಿ ಹೊರಿಸಿ ಸುಬ್ರಹ್ಮಣ್ಯ ಠಾಣೆಯ ಪೊಲೀಸರು ದೈಹಿಕ ಮತ್ತು ಮಾನಸಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಎಸ್.ಡಿ.ಪಿ.ಐ ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿ ಆರೋಪಿಸಿದೆ.ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಜಿಲ್ಲಾ ಎಸ್.ಡಿ.ಪಿ.ಐ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಮತ್ತು ಸುಳ್ಯ ನ.ಪಂ ಸದಸ್ಯ ಕೆ.ಎಸ್ ಉಮ್ಮರ್ ಈ ಆಗ್ರಹ ವ್ಯಕ್ತಪಡಿಸಿದರು.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಪೂಜೆಗಾಗಿ ಮೈಸೂರು ಮೂಲದ ತಮಿಳು ಚಿತ್ರ ನಟಿ ಬರುವಾಗ ತನ್ನ ಸ್ನೇಹಿತ ಕಿರು ಚಿತ್ರ ನಟ ಕಲ್ಲೋಣಿಯ ಫರ್ವೇಝ್‌ನನ್ನು ಮಾತನಾಡಲು ಬರುವಂತೆ ಸೂಚಿಸಿದ್ದು ಆ ನಿಟ್ಟಿನಲ್ಲಿ ಆವರು ಸುಬ್ರಹ್ಮಣ್ಯಕ್ಕೆ ತೆರಳಿ ವಾಪಾಸ್ಸಾಗಿದ್ದಾನೆ. ಇದನ್ನೆ ನೆಪವಾಗಿಟ್ಟುಕೊಂಡು ಸಂಘ ಪರಿವಾರದ ಕಾರ್ಯಕರ್ತರು ಮತ್ತು ಪೊಲೀಸರು ಜೊತೆಗೂಡಿ ನಟಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ನಂತರ ಬೆಳ್ಳಾರೆಯಲ್ಲಿದ್ದ ಫರ್ವೇಝ್‌ನಿಗೆ ನಟಿಯ ಮೊಬೈಲ್‌ನಿಂದ ಬಲತ್ಕಾರವಾಗಿ ಕರೆ ಮಾಡಿಸಿ ಕರೆಸಿಕೊಂಡು ಆತನನ್ನು ಕೂಡ ಅನಧಿಕೃತವಾಗಿ ಠಾಣೆಯಲ್ಲಿ ಕೂಡಿ ಹಾಕಿದ್ದು ಆತನನ್ನು ಎಳೆದಾಡಿ ನೆಲಕ್ಕೆ ಹಾಕಿ ಬೂಟು ಕಾಲಿನಿಂದ ಒದ್ದು ಜಾತಿ ನಿಂದನೆ ಮಾಡಿ ಉಗ್ರಗಾಮಿ ನೀವು ಬ್ಯಾರಿಗಳು ನೀವು ಎಂದು ಹೀಯಾಳಿಸಿ ೭ಮಂದಿ ಪುರುಷ ಪೊಲೀಸರು ಹಾಗೂ ಒಬ್ಬ ಮಹಿಳ ಪೊಲೀಸರು ಮೂರು ಬೆತ್ತ ಹುಡಿಯಾಗುವ ರೀತಿಯಲ್ಲಿ ಹೊಡೆದು ಮೇಜಿನ ಮೇಲೆ ಮಲಗಿಸಿ ಕರೆಂಟ್ ಶಾಕ್ ಕೂಡ ಕೊಟ್ಟಿರುತ್ತಾರೆ. ಪ್ರಶಾಂತ್ ಕುಮಾರ್ , ಚಂದ್ರ ಗೌಡ, ನಾರಾಯಣ, ಸಂದ್ಯಾ ಮತ್ತು ಇತರ ೪ ಪೊಲೀಸರು ಮನಬಂದಂತೆ ಮಾನವೀಯತೆ ಇಲ್ಲದ ರೀತಿಯಲ್ಲಿ ಪುಡಿಗೈದಿದ್ದಾರೆ. ಇದು ಬಹಳ ಅಮಾನವೀಯ ಘಟನೆಯಾಗಿದ್ದು ಕಾನೂನಿನ ಸ್ಪಷ್ಟತೆ ಉಲ್ಲಂಘನೆಯಾಗಿದೆ. ಕೇಸು ಕೂಡ ದಾಖಲಾಗದೇ ಈ ರೀತಿ ವರ್ತಿಸಲು ಪೊಲೀಸರಿಗೆ ಅಧಿಕಾರ ಕೊಟ್ಟದ್ದು ಯಾರು? ಇವರು ಪೊಲೀಸರ ಆಥವಾ ಸಂಘ ಪರಿವಾರದ ಗೂಂಡಗಳ ಎಂಬ ಸಂಶಯ ನಮಗಿದೆ. ಸುಬ್ರಹ್ಮಣ್ಯ ಪೊಲೀಸ್ ಉಪನಿರೀಕ್ಷರಾಗಲಿ, ವೃತ್ತ ನಿರೀಕ್ಷಕರಾಗಲಿ ಯಾವುದೇ ಮಾಹಿತಿ ಕೊಡದೇ ಠಾಣೆಯ ಒಳಗೆ ಹಾಕಿ ವಸ್ತ್ರಗಳನ್ನು ಕಳಚಿ ಹಲ್ಲೆಗೈದಿರುವುದು ಕಾನೂನಿನ ಉಲ್ಲಂಘನೆಯಾಗಿದೆ. ಆದೇ ರೀತಿ ಠಾಣೆಯ ಒಳಗೆ ಸಂಘ ಪರಿವಾರದ ಗೂಂಡಾಗಳು ಕೂಡ ಹಲ್ಲೆ ನಡೆಸಿ ಮತ್ತು ನಟಿ ಮೇಲೆಯೂ ಹಲ್ಲೆ ನಡಿಸಿರುವುದು ನಟಿಯು ಸ್ವತಃ ಮಾಡಿದ ವೀಡಿಯೋದಿಂದ ಬಹಿರಂಗಗೊಂಡಿದೆ. ನಟಿಯ ಮನೆಯವರು ಫರ್ವೇಝ್‌ನನ್ನು ತಮಗೆ ಪರಿಚಯಸ್ಥ ಎಂದಾಗಲು ಪೊಲೀಸರು ನಿಲ್ಲಿಸಲಿಲ್ಲ.ನಂತರ ಬಿಡುಗಡೆ ಮಾಡುವಾಗ ಯಾರಿಗೂ ಹೇಳಬಾರದೆಂದು ಬೆದರಿಕೆ ಹಾಕಿ ೫ಖಾಲಿ ಹಾಳೆಯನ್ನು ಸಹಿ ಹಾಕಿಸಿಕೊಂಡಿರುತ್ತಾರೆ. ಹಿಗ್ಗಾ ಮುಗ್ಗ ಥಳಿಸಿರುವುದು ಬಹಳ ಅಮಾನವೀಯ ಘಟನೆಯಾಗಿದ್ದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಘಟನೆ ನಡೆದು ೧೦ದಿವಸ ಕಳೆದರೂ ಯಾವುದೇ ರೀತಿಯಲ್ಲಿ ಬಹಿರಂಗಗೊಂಡಿರಲಿಲ್ಲ.ಇಷ್ಟೆಲ್ಲ ಆವಂತರ ನಡೆದಿರುವುದು ಎಸ್.ಐಯವರಿಗಾಗಲೀ, ವೃತ್ತ ನಿರೀಕ್ಷಕರಿಗಾಲಿ ಪೊಲೀಸರು ಮಾಹಿತಿ ನೀಡದಿರುವುದು ವಿಪರ‍್ಯಾಸ. ಫರ್ವೇಝ್‌ನನ್ನು ಠಾಣೆಯಲ್ಲಿ ವಿವಸ್ತ್ರ ಗೊಳಿಸಿರುವ ಪೊಟೋ ಸಂಘ ಪರಿವಾರದ ಪೇಸ್ ಬುಕ್ ಪೇಜ್‌ಗಳಲ್ಲಿ ಕ್ಷಣಾರ್ಧದಲ್ಲೇ ಹರಿದಾಡತೊಡಗಿದೆ. ಇದು ಅಲ್ಲಿನ ಪೊಲೀಸರ ಮನಸ್ಥಿತಿ ಹಾಗೂ ಪೊಲೀಸರು ಸಂಘ ಪರಿವಾರದ ಏಜೆಂಟರಂತೆ ವರ್ತಿಸಿರುವುದು ವ್ಯಕ್ತವಾಗುತ್ತದೆ. ಫರ್ವೇಝ್ ಬಹಿರಂಗಗೊಳಿಸದಿರಲು ಕಾರಣ ಆತನನ್ನು ಸುಳ್ಳು ಕೇಸು ಹಾಕಿ ಸಿಲುಕಿಸುವುದಾಗಿ ಪೊಲೀಸರು ಬೆದರಿಸಿದ್ದರು. ನಾವು ಮಾಧ್ಯಮದವರಿಗೆ ಮತ್ತು ಉನ್ನತ ಪೊಲೀಸ್ ಆಧಿಕಾರಿಗಳೊಂದಿಗೆ ವಿಷಯ ತಿಳಿಸಿದಾಗ ಆದುವರಗೆ ಯಾರಿಗೂ ಈ ಪ್ರಕರಣ ತಿಳಿಯದಿರುವುದು ಬಹಳ ದುರಂತ ಸಂಗತಿ. ಕೂಡಲೇ ಪೊಲೀಸ್ ಇಲಾಖೆ ಮತ್ತು ಸರಕಾರ ೮ಮಂದಿ ಪೊಲೀಸ್ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಆವರ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಆವರು ಹೇಳಿದರು.
ಎಸ್.ಡಿ.ಪಿ.ಐ. ಸುಳ್ಯ ವಿಧಾನ ಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಎಂ.ಕೆ. ಮುಸ್ತಾಪ ಸದಸ್ಯರಾದ ಹಮೀದ್ ಅಡ್ಕಾರ್, ಹಮೀದ್ ಮರಕ್ಕಡ, ಅಬ್ದುಲ್ಲಾ ಅಡ್ಕಾರ್ ಪತ್ರಕಾಗೋಷ್ಟಿಯಲ್ಲಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.