Breaking News

ಸುಳ್ಯ ಜಯನಗರದಲ್ಲಿ ಕೋಳಿ ಜಗಳ ಹಲ್ಲೆ ಆರೋಪ – ಪೋಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

Advt_Headding_Middle
Advt_Headding_Middle

ಮನೆಯೆದುರು ನೆಟ್ಟ ಗಿಡವನ್ನು ಕೋಳಿ ಬಂದು ಹಾಳುಗಡೆವಿದೆ ಎಂದು ಮನೆಯೊಡತಿ ಕೋಳಿಯ ಮನೆಯ ಯಜಮಾನಿಯನ್ನು ಪ್ರಶ್ನಿಸಿದ ಹಾಗೂ ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸಿದ ಘಟನೆ ಡಿ.೨೯ರಂದು ಸಂಜೆ ಜಯನಗರದಿಂದ ವರದಿಯಾಗಿದೆ. ಜಯನಗರದ ಪಾರ್ವತಿ ಎಂಬವರು ತಮ್ಮ ಕಂಪೌಂಡ್ ಬಳಿ ಗಿಡಗಳನ್ನು ನೆಟ್ಟಿದ್ದರೆಂದೂ ಆ ಗಿಡಗಳನ್ನು ಪಕ್ಕದ ಮನೆಯ ಲಲಿತಾ ಎಂಬವರ ಮನೆಯ ಕೋಳಿ ಬಂದು ಗಿಡಗಳ ಬುಡವನ್ನು ಕೆರೆದು ಹಾಳುಗಡೆವಿತೆನ್ನಲಾಗಿದೆ. ಈ ವಿಚಾರವನ್ನು ಪಾರ್ವತಿಯವರು ಲಲಿತಾರಲ್ಲಿ ಪ್ರಶ್ನಿಸಿದರೆಂದೂ, ಆಗ ಅವರೊಳಗೆ ಮಾತು ಬೆಳೆದು ಪಾರ್ವತಿಯವರು ಲಲಿತಾರಿಗೆ ಹಲ್ಲೆ ನಡೆಸಿದರೆನ್ನಲಾಗಿದೆ. ಗಾಯಗೊಂಡ ಲಲಿತಾ ಸುಳ್ಯ ಸರಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡರು. ಬಳಿಕ ಪ್ರಕರಣ ಠಾಣೆ ಮೆಟ್ಟಿಲೇರಿರುವುದಾಗಿ ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.