ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗುವವರು ಒಂದು ವರ್ಷ ಸಾಹಿತ್ಯ ಸಂಘಟನೆಗೆ ಓಡಾಡಬೇಕು : ವಸಂತ ಶೆಟ್ಟಿ ಬೆಳ್ಳಾರೆ

Advt_Headding_Middle
Advt_Headding_Middle

’‘ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಗೌರವದ ಸ್ಥಾನ. ಆದರೆ ಅದು ಅಲಂಕಾರಿಕ ಮಾತ್ರ ಅಲ್ಲ. ಮುಂದಿನ ವರ್ಷದ ಸಮ್ಮೇಳನಾಧ್ಯಕ್ಷರ ಆಯ್ಕೆಯವರೆಗೆ ಈ ಸಮ್ಮೇಳನಾಧ್ಯಕ್ಷರು ಸಾಹಿತ್ಯದ ವಾತಾವರಣ ಬೆಳೆಸುವುದಕ್ಕಾಗಿ ಓಡಾಡಬೇಕು. ನಾನು ಹಾಗೆ ಮಾಡಬೇಕೆಂದಿzನೆ“
ಈ ಬಾರಿ ಜನವರಿ ೧೩ರಂದು ಸುಳ್ಯ ತಾಲೂಕು ೨೨ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ದೆಹಲಿ ಕನ್ನಡಿಗ ವಸಂತ ಶೆಟ್ಟಿ ಬೆಳ್ಳಾರೆಯವರ ಅಭಿಮತ.
ದ.೩೦ರಂದು ಸುಳ್ಯ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ’ಸಾಹಿತ್ಯ ಸಮ್ಮೇಳನಾಧ್ಯಕ್ಷರೊಂದಿಗೆ ಮಾತುಕತೆ’ಯಲ್ಲಿ ಪಾಲ್ಗೊಂಡು ಅವರು ಅಭಿಪ್ರಾಯ ಹಂಚಿಕೊಂಡರು.
“ಸಾಹಿತ್ಯ ಸಮ್ಮೇಳನಗಳು ಜಾತ್ರೆಯ ರೂಪದಲ್ಲಿ ನಡೆದರೂ, ಭಾಷೆಯ ಮತ್ತು ಸಾಹಿತ್ಯದ ಬೆಳವಣಿಗೆಗೆ ಸಹಕಾರಿಯಾಗಬೇಕು. ಅದಕ್ಕಾಗಿ ಅದ್ದೂರಿ ಸಮ್ಮೇಳನಕ್ಕಿಂತ ವ್ಯವಸ್ಥಿತ ಸಮ್ಮೇಳನಕ್ಕೆ ಒತ್ತುಕೊಡಬೇಕು. ಎಲ್ಲಾ ಶಾಲೆಗಳಿಂದ ನಿರ್ದಿಷ್ಟ ಸಂಖ್ಯೆಯ ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸುವಂತೆ ಆಗಬೇಕು. ಅವರಲ್ಲಿ ಭಾಷೆಯ, ಸಾಹಿತ್ಯದ ಅಭಿರುಚಿ ಬೆಳೆಯಬೇಕು“ ಎಂದು ವಸಂತ ಶೆಟ್ಟಿ ಹೇಳಿದರು. ದೆಹಲಿಯ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಎರಡನೆ ಅವಧಿಗೆ ಚುನಾಯಿತರಾಗಿರುವ ವಸಂತ ಶೆಟ್ಟಿಯವರು, ಕಳಂಜದ ತಂಟೆಪ್ಪಾಡಿಯಿಂದ ಕಳಂಜ, ಬೆಳ್ಳಾರೆ, ದೆಹಲಿಗೆ ಹೋದ ಅನುಭವಗಳನ್ನು ವಿವರಿಸಿದರಲ್ಲದೆ “ದೆಹಲಿ ಕರ್ನಾಟಕ ಸಂಘ, ದೆಹಲಿಯ ಜೆಎನ್‌ಯು ಕನ್ನಡ ವಿಭಾಗಗಳು ರಾಷ್ಟ್ರ ರಾಜಧಾನಿಯಲ್ಲಿ ಸಾಕಷ್ಟು ಕನ್ನಡದ ಕೆಲಸಗಳನ್ನು ಮಾಡುತ್ತಿದೆ. ತುಳುವನ್ನು ಸಂವಿಧಾನದ ೮ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ನಡೆಸಲಾಗುತ್ತಿದೆ” ಎಂದರು. ಕನ್ನಡದ ಕೃತಿಗಳನ್ನು ಇತರ ಭಾಷೆಗಳಿಗೆ ಭಾಷಾಂತರಿಸುವ ಕಾರ್ಯ ಇನ್ನಷ್ಟು ಆಗಬೇಕಾಗಿದೆ“ ಎಂದೂ ಹೇಳಿದರು.
’‘ನಾನೊಬ್ಬ ಸಾಹಿತಿಯಲ್ಲ ಸಂಘಟಕ“ ಎಂದು ಹೇಳುತ್ತಲೇ ತಾನು ಬರೆದ ಕೃತಿಗಳ ವಿವರ ನೀಡಿದ ಅವರು ಸುಳ್ಯದವರೇ ಆದ ನಿರಂಜನರ ಬಗ್ಗೆ ಪುಸ್ತಕ ಬರೆಯುತ್ತಿರುವುದಾಗಿ ತಿಳಿಸಿದರು.
ಮಕ್ಕಳನ್ನು ಯಾಂತ್ರಿಕವಾಗಿ ಬೆಳೆಸದೆ ಗ್ರಾಮೀಣ ಜೀವನಕ್ಕೆ ಅನುಗುಣವಾಗಿ ಬೆಳೆಸಬೇಕು. ಸಾಂಸ್ಕೃತಿಕ ಹಾಗೂ ಸಾಹಿತ್ಯ ಸಂಘಟನೆಗಳು ನಿರಂತರ ಕ್ರಿಯಾಶೀಲವಾಗಿದ್ದು ಅಂತಹ ವಾತಾವರಣ ಜಾಗೃತವಾಗಿರುವಂತೆ ನೋಡಿಕೊಳ್ಳಬೇಕು“ ಎಂದು ವಸಂತ ಶೆಟ್ಟಿ ಹೇಳಿದರು. ಪತ್ರಕರ್ತರ ಸಂಘದ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಹಾಗೂ ಜತೆ ಕಾರ್ಯದರ್ಶಿ ಪದ್ಮನಾಭ ಮುಂಡೋ ಕಜೆ ವೇದಿಕೆಯಲ್ಲಿದ್ದರು. ಸಮ್ಮೇಳನ ಸಂಘಟನಾ ಸಮಿತಿಯ ಅಧ್ಯಕ್ಷ ಕೆ.ಟಿ.ವಿಶ್ವನಾಥ್, ಕಾರ್ಯಾಧ್ಯಕ್ಷ ಶಶಿಧರ ಎಂ.ಜೆ., ದೊಡ್ಡಣ್ಣ ಬರೆಮೇಲು, ರಮೇಶ ನೀರಬಿದಿರೆ, ನಾರಾಯಣ ಟೈಲರ್, ಭವಾನಿಶಂಕರ ಕಲ್ಮಡ್ಕ, ಜಯರಾಮ ಶೆಟ್ಟಿ, ಕೆ.ಟಿ.ಭಾಗೀಶ್, ನಂದರಾಜ್ ಸಂಕೇಶ, ಮನೋಜ್ ಪಾನತ್ತಿಲ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.