ಮಗುವಿಗೆ ಭೇದಿ ಕಂಡು ಬಂದರೆ ಮೊಸರು ಮತ್ತು ಅನ್ನ ನೀಡಿ

Advt_Headding_Middle
Advt_Headding_Middle

ಮಕ್ಕಳಲ್ಲಿ ಹೆಚ್ಚಾಗಿ ಭೇದಿ ಸಮಸ್ಯೆ ಕಂಡು ಬರುತ್ತದೆ. ಆದರೆ ಈ ಸಮಯದಲ್ಲಿ ಡೈರಿ ಉತ್ಪನ್ನಗಳನ್ನು ನೀಡಲು ಹೆಚ್ಚಿನ ಜನರು ಒಪ್ಪೋದಿಲ್ಲ. ಯಾಕೆಂದರೆ ಹಾಲು ಮತ್ತು ಹಾಲಿನ ಉತ್ಪನ್ನಗಳು ಮಕ್ಕಳ ಕಂಢೀಶನ್‌ನ್ನು ಇನ್ನಷ್ಟು ಬಿಗಡಾಯಿಸುತ್ತದೆ ಎಂದು.

ಡೈರಿಯಾ ಬಂದರೆ ಅದು ಹಲವಾರು ರೋಗಗಳ ಲಕ್ಷಣವಾಗಿರುತ್ತದೆ. ಅಂದರೆ ಮಕ್ಕಳಿಗೆ ಸ್ಟಮಕ್ ಇನ್‌ಫೆಕ್ಷನ್, ಹೊಟ್ಟೆನೋವು, ಹೊಟ್ಟೆಯಲ್ಲಿ ಹುಳು. ಹೀಗೆ ಹಲವಾರು ಸಮಸ್ಯೆಗಳಿಗೂ ಇದು ಕಾರಣವಾಗುತ್ತದೆ. ಹೊಟ್ಟೆಯಲ್ಲಿ ಇನ್‌ಫೆಕ್ಷನ್ ಆಗಲು ಕಾರಣ ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಇರೋದು. ದನದ ಹಾಲಿನಲ್ಲಿ ಕೆಲವೊಂದು ಎನ್ಸಿಮ್ಸ್ ಮತ್ತು ಬ್ಯಾಕ್ಟೀರಿಯಾಗಳಿವೆ. ಇದರಿಂದ ಮಕ್ಕಳಲ್ಲಿ ಅಜೀರ್ಣ ಸಮಸ್ಯೆ ಉಂಟಾಗುತ್ತದೆ. ಆದುದರಿಂದ ಮಕ್ಕಳಿಗೆ ದನದ ಹಾಲು ನೀಡಬಾರದು ಎಂದು ಹೇಳಲಾಗುತ್ತದೆ.

ಆದರೆ ಭೇದಿಯ ಸಮಯದಲ್ಲಿ ಮಕ್ಕಳಿಗೆ ಮೊಸರು ನೀಡಿದರೆ ಉತ್ತಮ. ಮೊಸರಿನಲ್ಲಿರುವ ಪ್ರೊಬಯೋಟಿಕ್ ಹೊಟ್ಟೆಯಲ್ಲಿನ ಗುಡ್ ಬ್ಯಾಕ್ಟೀರಿಯಾಗಳನ್ನು ಬ್ಯಾಲೆನ್ಸ್ ಆಗಿಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಅನ್ನ – ಮೊಸರು ನೀಡಿದರೆ ಮಕ್ಕಳು ಸ್ಟ್ರಾಂಗ್ ಆಗಿ ಆರೋಗ್ಯದಲ್ಲಿ ಸುಧಾರಣೆ ಕಾಣಿಸಿಕೊಳ್ಳುತ್ತದೆ. ಆದರೆ ಅದಕ್ಕೂ ಮುನ್ನ ಮಕ್ಕಳಿಗೆ ಸರಿಯಾದ ಪ್ರಮಾಣದಲ್ಲಿ ನೀರಿನ ಅಂಶ ದೇಹಕ್ಕೆ ಸೇರಿಕೊಳ್ಳುವಂತೆ ನೋಡಿಕೊಳ್ಳಬೇಕು.

ಮಕ್ಕಳಿಗೆ ಭೇದಿ ಸಮಯದಲ್ಲಿ ಮೊಸರನ್ನ ನೀಡಿ. ಇದರಿಂದ ಹೊಟ್ಟೆಯ ಇನ್‌ಫೆಕ್ಷನ್ ದೂರವಾಗುತ್ತದೆ. ಮನೆಯಲ್ಲಿಯೆ ಮೊಸರು ತಯಾರಿಸಿ ನೀಡಿದರೆ ಮತ್ತಷ್ಟು ಉತ್ತಮ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.