ಸುಳ್ಯದ ನೆಹರೂ ಮೆಮೊರಿಯಲ್ ಕಾಲೇಜಿನಲ್ಲಿ ೨೦೧೭-೨೦೧೮ನೇ ಸಾಲಿನ ವಾರ್ಷಿಕ ಕ್ರೀಡಾಕೂಟದ ಉದ್ಘಾಟನ ಕಾರ್ಯಕ್ರಮ ಇಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಓ.ಎಲ್.ಇ.ನ ಅಧ್ಯಕ್ಷ ಡಾ.ಕೆ.ವಿ ಚಿದಾನಂದ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾರ್ಥ ವಾರಣಾಸಿ ಪಾಲ್ಗೊಂಡಿದ್ದರು.
ಎನ್.ಎಮ್.ಸಿ.ಯ ದೈಹಿಕ ಶಿಕ್ಷಕ ರಾಧಕೃಷ್ಣ ಮಾಣಿ ಬೆಟ್ಟು, ಚಂದ್ರ ಕೋಲ್ಚಾರ್, ಭವಾನಿ ಶಂಕರ್ ಅಡ್ತಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಕಾಲೇಜಿನ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು.