Breaking News

ಪಂಜದಲ್ಲಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಬ್ಯಾಂಕಿಂಗ್ ವ್ಯವಹಾರ ಉದ್ಘಾಟನೆ

Advt_Headding_Middle
Advt_Headding_Middle

ಪಂಜದ ಜಿ.ಕೆ. ರೆಸಿಡೆನ್ಸಿಯಲ್ಲಿರುವ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಆಶ್ರಯದಲ್ಲಿ ನೂತನ ಕಛೇರಿ ಮತ್ತು ಬ್ಯಾಂಕಿಂಗ್ ವ್ಯವಹಾರಗಳ ಉದ್ಘಾಟನಾ ಸಮಾರಂಭ ಇಂದು ನಡೆಯಿತು. ಬ್ಯಾಂಕಿಂಗ್ ಕಛೇರಿಯನ್ನು ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲದ ಅಧ್ಯಕ್ಷ ಸಂಜೀವ ಪೂಜಾರಿ ಬಿ. ಉದ್ಘಾಟಿಸಿದರು. ಭದ್ರತಾ ಕೋಶವನ್ನು ಬೆಳ್ಳಾರೆ ಕ್ಷೇತ್ರದ ಜಿ.ಪಂ. ಸದಸ್ಯ ಎಸ್.ಎನ್. ಮನ್ಮಥ ಉದ್ಘಾಟಿಸಿದರು. ಪೂ. ೬ಗಂಟೆಗೆ ಗಣಪತಿ ಹವನ ಮತ್ತು ಸ್ಥಳ ಶುದ್ಧಿ ನಡೆಯಿತು. ಸಭಾಧ್ಯಕ್ಷತೆಯನ್ನು ದ.ಕ. ಜಿಲ್ಲಾ ಮೂರ್ತೆದಾರರ ಸಹಕಾರ ಮಹಾ ಮಂಡಲ ಬಿ.ಸಿ. ರೋಡ್ ಇದರ ಅಧ್ಯಕ್ಷ ಸಂಜೀವ ಪೂಜಾರಿ ಬಿ. ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಂಜ ತಾ.ಪಂ. ಸದಸ್ಯ ಅಬ್ದುಲ್ ಗಫೂರ್, ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಂಘ ಸುಳ್ಯ ಅಧ್ಯಕ್ಷ ವಿಠಲ್‌ದಾಸ್ ಎನ್.ಎಸ್.ಡಿ, ಮೂರ್ತೆದಾರರ ಮಹಾಮಂಡಲ ಬಿ.ಸಿ. ರೋಡ್ ಇದರ ನಿರ್ದೇಶಕ ವಿಜಯ ಕುಮಾರ್ ಸೊರಕೆ, ಶ್ರೀಮತಿ ರಾಜೀವಿ ಆರ್.ರೈ, ಜೆ.ಸಿ. ವಲಯ ಉಪಾಧ್ಯಕ್ಷ ರವಿ ಕಕ್ಕೆಪದವು ಸುಬ್ರಹ್ಮಣ್ಯ ಭಾಗವಹಿಸಿದ್ದರು. ಸಂಘದ ಅಧ್ಯಕ್ಷರಾಗಿ ವಿಶ್ವನಾಥ ಪೂಜಾರಿ ಕೆ, ಉಪಾಧ್ಯಕ್ಷರಾಗಿ ಆನಂದ ಸುವರ್ಣ, ಕಾರ್ಯದಶಿಯಾಗಿ ಚಿನ್ನಪ್ಪ ಪೂಜಾರಿ ಮತ್ತು ಪ್ರಭಾರ ಕಾರ್ಯದರ್ಶಿಯಾಗಿ ಶ್ರೀಮತಿ ದಿವ್ಯಶ್ರೀ ಎನ್ ಹಾಗೂ ನಿರ್ದೇಶಕರುಗಳಾಗಿ ಜನಾರ್ಧನ ಪೂಜಾರಿ ಎಡಮಂಗಲ, ದಾಮೋದರ ಪೂಜಾರಿ ಎಡಮಂಗಲ, ದಾಮೋದರ ಪೂಜಾರಿ ಮುರುಳ್ಯ , ದಿನೇಶ್ ಪೂಜಾರಿ ಅಲೆಕ್ಕಾಡಿ, ಚಿನ್ನಪ್ಪ ಪೂಜಾರಿ ಬಳ್ಪ, ರವೀಂದ್ರ ಪೂಜಾರಿ ಕಲ್ಮಡ್ಕ ಮತ್ತು ಶ್ರೀಮತಿ ವಸಂತಿ ಶೀನಪ್ಪ ನೂಜಾಡಿ ಇವರುಗಳು ಸಂಘವನ್ನು ಮುನ್ನಡೆಸುತ್ತಿದ್ದಾರೆ. ಕಾರ್ಯಕ್ರಮದ ಸ್ವಾಗತ ಹಾಗೂ ಪ್ರಾಸ್ತಾವನೆಯನ್ನು ಮೂರ್ತೆದಾರರ ಮಹಾಮಂಡಲ ಬಿ.ಸಿ. ರೋಡ್ ಇದರ ನಿರ್ದೇಶಕ ವಿಜಯ ಕುಮಾರ್ ಸೊರಕೆ ವಹಿಸಿದರು.

 

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.