Breaking News

ದುಗಲಡ್ಕಕ್ಕೆ ಟೌನ್‌ಫೀಡರ್ ಮಂಜೂರು : ಸಂಶುದ್ದೀನ್

Advt_Headding_Middle
Advt_Headding_Middle

ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿರುವ ದುಗಲಡ್ಕ ಪ್ರದೇಶಕ್ಕೆ ಟೌನ್‌ಫೀಡರ್ ವಿದ್ಯುತ್ ಸರಬರಾಜಿನ ಯೋಜನೆ ಬಹುಕಾಲದ ಬೇಡಿಕೆಯಾಗಿದ್ದು, ಪ್ರಕೃತ ಟೌನ್‌ಫೀಡರ್‌ಗೆ ಲೈನನ್ನು ಅಳವಡಿಸುವ ಯೋಜನೆ ಮಂಜೂರಾಗಿದೆ. ಕಾಮಗಾರಿ ಕಾರ್ಯಾದೇಶವನ್ನು ಗುತ್ತಿಗೆದಾರರಿಗೆ ಈಗಾಗಲೇ ನೀಡಲಾಗಿದ್ದು, ಕಾಮಗಾರಿ ಪ್ರಾರಂಭಿಸುವ ಹಂತದಲ್ಲಿದೆ ಎಂದು ಸುಳ್ಯ ನ.ಪಂ. ಮಾಜಿ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯ ಎಸ್.ಸಂಶುದ್ಧೀನ್ ಹೇಳಿದ್ದಾರೆ.
ದುಗಲಡ್ಕ ಪ್ರದೇಶವು ನ.ಪಂ.ವ್ಯಾಪ್ತಿಯಲ್ಲಿದ್ದರೂ ಈವರೆಗೆ ಗ್ರಾಮೀಣ ಪ್ರದೇಶದ ಫೀಡರ್‌ನಿಂದ ವಿದ್ಯುತ್ ಸರಬರಾಜು ಇರುವುದರಿಂದ ಅಲ್ಲಿನ ಕೃಷಿಕರಿಗೆ, ಕುಡಿಯುವ ನೀರಿನ ಯೋಜನೆಗೆ ಬಹಳ ತೊಂದರೆಯಾಗುತ್ತಿರುವುದನ್ನು ಮನಗಂಡು, ೨೦೦೪ರಲ್ಲಿಯೇ ನಾನು ನ.ಪಂ.ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಅಲ್ಲಿನ ನಿವಾಸಿಗಳು ಮನವಿ ಸಲ್ಲಿಸಿದ್ದು, ಈವರೆಗೆ ಕಾಮಗಾರಿ ಆಗಿರಲಿಲ್ಲ. ಪ್ರಕೃತ ಇಂಧನ ಸಚಿವರಾದ ಡಿ.ಕೆ.ಶಿವಕುಮಾರ್ ಹಾಗೂ ಉಸ್ತುವಾರಿ ಸಚಿವ ರಮಾನಾಥ ರೈಯವರ ಮೂಲಕ ಸರ್ಕಾರದ ಹಂತದಲ್ಲಿಯೇ ಪ್ರಯತ್ನ ನಡೆಸಿ ಇದೀಗ ಯೋಜನೆಯ ಕನಸು ನನಸಾಗುವ ಸಮಯ ಬಂದಿದೆ. ಸುಮಾರು ೪.೫ ಲಕ್ಷ ರೂ. ವೆಚ್ಚದಲ್ಲಿ ಗ್ರಾಮೀಣ ಲೈನನ್ನು ಅಭಿವೃದ್ಧಿಗೊಳಿಸಿ ೩೦ ವಿದ್ಯುತ್ ಕಂಬ ಮತ್ತು ೧ ಪರಿವರ್ತಕವನ್ನು ಅಳವಡಿಸಿ ಈ ಕಾಮಗಾರಿ ಪ್ರಾರಂಭಿಸಲಾಗುವುದು. ಇದರಿಂದಾಗಿ ಆ ಭಾಗದ ಕೃಷಿಕರಿಗೆ ಹಾಗೂ ನ.ಪಂ.ನ ಕುಡಿಯುವ ನೀರಿನ ೬ ಕೊಳವೆ ಬಾವಿಗಳಿಗೆ ನಿರಂತರ ವಿದ್ಯುತ್ ಸರಬರಾಜಿನ ಮೂಲಕ ಜನರಿಗೆ ಬಹಳಷ್ಟು ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.
ಕಂದಡ್ಕ – ಸುಳ್ಯ ೧೧ಕೆವಿ ವಿದ್ಯುತ್ ಲಿಂಕ್ ಲೈನ್ ಕಾಮಗಾರಿಗೆ ೪.೬೬ ಲಕ್ಷ ಅಂದಾಜುಪಟ್ಟಿ ಮಂಜೂರಾಗಿ ಕಾಮಗಾರಿಯ ಕಾರ್ಯಾದೇಶವನ್ನು ನೀಡಲಾಗಿದೆ. ಈ ಕಾಮಗಾರಿಯು ಕಂದಡ್ಕ ದೊಡ್ಡತೋಟ ಲಿಂಕ್‌ಲೈನ್‌ನ ಅಭಿವೃದ್ಧಿ ಕಾಮಗಾರಿಯಾಗಿದೆ ಎಂದವರು ತಿಳಿಸಿದರು.
ರಾಜ್ಯ ವಕ್ಫ್ ಕೌನ್ಸಿಲ್ ವತಿಯಿಂದ ವೈದ್ಯಕೀಯ ಪರಿಹಾರ ನಿಧಿ ಯೋಜನೆಯಡಿ ವಿವಿಧ ಫಲಾನುಭವಿಗಳಿಗೆ ರೂ. ೩ ಲಕ್ಷ ಧನಸಹಾಯ ಮಂಜೂರುಗೊಂಡು ವಿತರಿಸಲಾಗಿದೆ ಎಂದ ಅವರು, ಕೊಡಿಯಾಲಬೈಲು- ನೀರಬಿದಿರೆ- ದುಗಲಡ್ಕ ರಸ್ತೆ ದುರವಸ್ಥೆ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದಿದೆ. ಈ ಬಗ್ಗೆ ಸಂಬಂಧಪಟ್ಟವರು ಸಂಪರ್ಕಿಸಿದರೆ ಅವರ ಬೇಡಿಕೆ ಸರಕಾರಿ ಮಟ್ಟದಲ್ಲಿ ಈಡೇರಿಸಲು ಸ್ಪಂದಿಸಲಾಗುವುದು ಎಂದು ಅವರು ಹೇಳಿದರು.
ಒಳಚರಂಡಿ ಅವ್ಯವಸ್ಥೆ ಬಗ್ಗೆ ಪತ್ರಕರ್ತರು ಗಮನ ಸೆಳೆದಾಗ ನನ್ನ ಅವಧಿಯಲ್ಲಿ ಕೆಲಸ ಸರಿಯಾಗಿದೆ. ಆ ನಂತರ ಬಂದ ಅಧ್ಯಕ್ಷರುಗಳು ಸಮರ್ಪಕವಾಗಿ ನಿರ್ವಹಿಸಿಲ್ಲ ಎಂದು ಹೇಳಿದರು.
ಜಿಲ್ಲಾ ವಕ್ಫ್ ಕೌನ್ಸಿಲ್ ಸದಸ್ಯ ಕೆ.ಎಂ.ಮುಸ್ತಫಾ, ನ.ಪಂ.ಸದಸ್ಯರಾದ ಕೆ.ಗೋಕುಲ್‌ದಾಸ್, ಶಿವಕುಮಾರ್ ಕಂದಡ್ಕ, ಶಶಿಕಲಾ ನೀರಬಿದಿರೆ, ಗಣ್ಯರಾದ ನಂದರಾಜ್ ಸಂಕೇಶ, ಲೀಲಾಮನಮೋಹನ್, ಭವಾನಿಶಂಕರ ಕಲ್ಮಡ್ಕ, ಮೂಸಾ ಕೊಳೆಂಜಿಕೋಡಿ, ನಾರಾಯಣ ಟೈಲರ್, ಲಕ್ಷ್ಮಣ ಟೈಲರ್, ಕೆ.ಟಿ.ಭಾಗೀಶ್, ಶಾಫಿ ಕುತ್ತಮೊಟ್ಟೆ, ಹಸೈನಾರ್, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.