ಸುಬ್ರಹ್ಮಣ್ಯ ಕೆಎಸ್‌ಎಸ್ ಕಾಲೇಜಿನಲ್ಲಿ ಅಂತರ್ ಜಿಲ್ಲಾ ಖೋ.ಖೋ ಪಂದ್ಯಾಟ ಆಳ್ವಾಸ್ ತಂಡಗಳಿಗೆ ಅವಳಿ ಪ್ರಶಸ್ತಿ

Advt_Headding_Middle
Advt_Headding_Middle

ಕುಕ್ಕೆ ಸುಬ್ರಹ್ಮಣ್ಯ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ಜಾಕೆ ಪರಮೇಶ್ವರ ಗೌಡ ಮೆಮೋರಿಯಲ್ ಅಂತರ್ ಜಿಲ್ಲಾ ಮಟ್ಟದ ಪುರುಷರ ಖೋ ಖೋ ಪಂದ್ಯಾಟ ಹಾಸನ ಜಿಲ್ಲಾ ನ್ಯಾಯಾಧೀಶ ವಿಜಯಕುಮಾರ್ ರೈ ಉದ್ಘಾಟಿಸಿದರು.
ಶಿಕ್ಷಣ ಎಲ್ಲದಕ್ಕೂ ತಾಯಿ ಬೇರು. ಅದನ್ನು ಕಲಿಸಿದ ವಿದ್ಯಾಸಂಸ್ಥೆ ದೇಗುಲದಷ್ಟೆ ಪವಿತ್ರ್ಯವಾದುದು. ಅದೇ ರೀತಿ ಕ್ರೀಡೆಯಲ್ಲಿ ಗೆಲುವೊಂದೆ ಮುಖ್ಯವಲ್ಲ. ಭಾಗವಹಿಸುವಿಕೆ ಕೂಡ ಮಹತ್ವದಾಗುತ್ತದೆ. ಇಚ್ಚಾಶಕ್ತಿಇಂದ ಶ್ರಮವಹಿಸಿ ಮಾಡುವ ಕೆಲಸಕ್ಕೆ ತಕ್ಕ ಪ್ರತಿಫಲ, ಗೌರವಗಳು ದೊರೆತೆ ದೊರೆಯುತ್ತದೆ. ಎಂದು ಅವರು ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ಪಠ್ಯೇತರ ಕ್ರೀಡೆ ಒಂದು ವಿಷಯವಾಗಿ ರಚನೆಯಾಗಲಿ ಎಂದು ಆಶಯ ವ್ಯಕ್ತಪಡಿಸಿ ಕ್ರೀಡಾಪಟುಗಳಿಗೆ ಶುಭಹಾರೈಸಿದರು.
ನಿವೃತ್ತ ದೈ.ಶಿ.ಶಿಕ್ಷಕ ತುಕರಾಮ್ ಯೇನೆಕಲ್ಲು, ದೇಗುಲದ ಕಾರ್ಯನಿರ್ವಾಹಣಾಧಿಕಾರಿ ರವೀಂದ್ರ ಯಂ. ಹೆಚ್, ದೇಗುಲ ವ್ಯವಸ್ಥಾಪನ ಸಮಿತಿ ಸದಸ್ಯರಾದ ಬಾಲಕೃಷ್ಣ ಬಲ್ಲೇರಿ, ಕೃಷ್ಣಮೂರ್ತಿ ಭಟ್, ರಾಜೀವಿ ರೈ, ಮಾಧವ ಡಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲರಂಗಯ್ಯ, ಕಾಲೇಜು ಪೋಷಕ ಸಂಘದ ಅಧ್ಯಕ್ಷ ಮೋಹನದಾಸ್ ರೈ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಶಿವರಾಮ ರೈ, ಮಂಗಳೂರು ಮಹಾ ವಿಶ್ವವಿದ್ಯಾಲಯ ಶಾರೀರಿಕ ಶಿಕ್ಷಕ ನಿರ್ದೇಶಕ ದಯಾಕರ್, ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಸಾವಿತ್ರಿ, ದೈ.ಶಿ.ಶಿಕ್ಷಕ ದಿನೇಶ್ ಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪ್ರಾಂಶುಪಾಲ ಪ್ರೋ ರಂಗಯ್ಯ ಶೇಟ್ಟಿಗಾರ್ ಸ್ವಾಗತಿಸಿದರು. ಉಪನ್ಯಾಸಕಿ ಆರತಿ ವಂದಿಸಿದರು. ಉಪನ್ಯಾಸಕರಾದ ಮಂಜುನಾಥ್ ಭಟ್, ವಿನ್ಯಾಸ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕ್ರೀಡಾಂಗಣದಲ್ಲಿ ಗಣ್ಯರು ಕ್ರೀಡಾಪಟುಗಳ ಪರಿಚಯ ಮಾಡಿಕೊಂಡ ಬಳಿಕ ಬೆಲೂನ್ ಹಾರಿಸಿ ಪಂದ್ಯಾಟಕ್ಕೆ ಚಾಲನೆ ನೀಡಿದರು.
ಸಮಾರೋಪ ಖೋ-ಖೋ ಪಂದ್ಯಾಟದಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜ್ ತಂಡವು ಜಯ ಸಾಧಿಸುವುದರೊಂದಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ದ್ವೀತಿಯ ಸ್ಥಾನ ಆಳ್ವಾಸ್ ಪದವು ಕಾಲೇಜು ತಂಡ ಪಡಕೊಂಡಿತು. ತೃತೀಯ ಸ್ಥಾನವನ್ನು ಬಂಟ್ವಾಳದ ವಾಮಪದವಿನ ಜಿಎಪ್‌ಜಿಸಿ ಕಾಲೇಜು ತಂಡ ಪಡೆದರೆ ಕೋಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯ ತಂಡ ನಾಲ್ಕನೆ ಸ್ಥಾನ ಪಡೆಯಿತು. ಪಂದ್ಯಾಟದ ವಯಕ್ತಿಕ ಪ್ರಶಸ್ತಿಗಳಲ್ಲಿ ಸರ್ವಾಂಗೀಣ ಆಟಗಾರನಾಗಿ ಪದವು ಆಳ್ವಾಸ್ ಕಾಲೇಜು ತಂಡದ ಕ್ರೀಡಾಪಟು ವಿನಾಯಕ ಪ್ರಶಸ್ತಿ ಪಡಕೊಂಡರು. ಬೆಸ್ಟ್ ರಕ್ಷಣಾತ್ಮಕ ಆಟಗಾರನಾಗಿ ಮೂಡಬಿದಿರೆ ಆಳ್ವಾಸ್ ಕಾಲೇಜಿನ ಧನುಷ್ ಹಾಗೂ ಉತ್ತಮ ಹಿಡಿತಗಾರನಾಗಿ ವಾಮನಪದವು ಕಾಲೇಜಿನ ಜಿಎಪ್‌ಜಿಸಿ ತಂಡದ ಜಯಾನಂದ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡರು.
ಎರಡು ದಿನಗಳ ಅವಧಿ ನಡೆದ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಶಿವರಾಮ ರೈ ಬಹುಮಾನ ವಿತರಿಸಿದರು. ಕಾಲೇಜು ಪ್ರಾಂಶುಪಾಲ ಪ್ರೋ| ರಂಗಯ್ಯ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದರು. ಕುಕ್ಕೆ ಸುಬ್ರಹ್ಮಣ್ಯ ದೇಗುಲದ ವ್ಯವಸ್ಥಾಪನ ಸಮಿತಿ ಸದಸ್ಯ ಕೃಷ್ಣಮೂರ್ತಿ ಭಟ್, ಮಂಗಳೂರು ಶಾರೀರಿಕ ಶಿಕ್ಷಣ ನಿರ್ದೇಶಕ ಕಿಶೋರುಕುಮಾರ್ ಸಿ.ಕೆ, ಮಂಗಳೂರು

ವಿ.ವಿ ಹಿರಿಯ ಶಾರೀರಿಕ ಶಿಕ್ಷಣ ನಿರ್ದೇಶಕ ಯಂ ದಯಾಕರ, ಉಪಪ್ರಾಂಶುಪಾಲ ಪ್ರೋ| ಮಂಜುನಾಥ ಭಟ್, ಶಾರೀರಿಕ ಶಿಕ್ಷಣ ನಿರ್ದೇಶಕ ದಿನೇಶ್ ಕೆ, ಗುತ್ತಿಗೆದಾರ ಕೃಷ್ಣಕುಮಾರ್ ಬಾಳುಗೋಡು, ಶಿಕ್ಷಕ-ರಕ್ಷಕ ಸಂಘದ ಪೂರ್ವಾಧ್ಯಕ್ಷ ಸೀತಾರಾಮ ಎಣ್ಣೆಮಜಲು ಉಪಸ್ಥಿತರಿದ್ದರು. ಪ್ರೋ| ಉದಯಕುಮಾರ್ ವಂದಿಸಿ, ವಿನ್ಯಾಸ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.