ತೊಡಿಕಾನ: ದಾಖಲೆ ಬರೆದ ಧನುಪೂಜೆ ಜ.೧೪ರಂದು ಆಯಿರಕೊಡ ಅಭಿಷೇಕ- ಧನುಪೂಜೆ ಸಂಪನ್ನ

Advt_Headding_Middle
Advt_Headding_Middle

ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಳೆದ ೬ವರ್ಷಗಳಿಂದ ನಿರಂತರವಾಗಿ ಧನುಪೂಜೆ ನಡೆದುಕೊಂಡು ಬರುತ್ತಿದ್ದು, ಈ ಭಾರೀ ಧನುಪೂಜೆಯ ಸಂಖ್ಯೆಯಲ್ಲಿ ದಾಖಲೆ ಬರೆದಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು.ಕೆ. ಕೇಸವ ಉಳುವಾರು ಹಾಗೂ ಜೀಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ. ದಿವಾಕರ ರೈ ತಿಳಿಸಿದ್ದಾರೆ.
ಇನ್ನೂ ಒಂದು ವಾರಗಳ ಕಾಲ ಧನುಪೂಜೆ ನಡೆಯಲಿದ್ದು ಜ.೭ರ ವರೆಗೆ ೧೧೦೦ಕ್ಕೂ ಮಿಕ್ಕಿ ಪೂಜೆ ನಡೆದಿದೆ. ಕಳೆದ ವರ್ಷಗಳಲ್ಲಿ ಆತ್ಯಧಿಕ ೧೩೫೦ ಪೂಜೆಗಳು ನಡೆದಿದ್ದರೆ ಈ ಬಾರಿ ೧೫೦೦ಕ್ಕೂ ಮಿಕ್ಕಿ ಧನುಪೂಜೆ ದಾಖಲಾಗಿದೆ.
ತಾಲೂಕಿನ ಬೇರೆ ಬೇರೆ ಗ್ರಾಮಗಳಿಂದ ಭಕ್ತಾಧಿಗಳಿಂದ ಭಕ್ತಾಧಿಗಳು ಆಗಮಿಸಿ ಪೂಜೆ ನೇರವೆಸುತ್ತಿದ್ದಾರೆ. ಸುಳ್ಯ, ಆಲೆಟ್ಟಿ, ಅರಂತೋಡು, ಸಂಪಾಜೆ ಗ್ರಾಮಗಳಿಂದ ಭಕ್ತಾಧಿಗಳು ಪಾದಯಾತ್ರೆ ಮೂಲಕವೂ ಆಗಮಿಸಿ ಧನುಪೂಜೆಯಲ್ಲಿ ಭಾಗಿಯಾಗಿದ್ದಾರೆ. ಬ್ರಹ್ಮಕಲಶದ ಬಳಿಕ ನಡೆಯುತ್ತಿರುವ ಪ್ರಥಮ ವರ್ಷದ ಧನುಪೂಜೆ ಇದಾಗಿರುವುದರಿಂದ ಪೂಜೆ ಹಾಗೂ ಭಕ್ತಾಧಿಗಳ ಸಂಖ್ಯೆಯೂ ಅಧಿಕವಾಗಿದೆ. ರಜಾದಿನದಂದು ಹಾಗೂ ವಿಶೇಷ ದಿನಗಳಂದು ಮುಂಜಾನೆ ಧನುಪೂಜೆಗೆ ಒಂದು ಸಾವಿರಕ್ಕೂ ಮಿಕ್ಕಿ ಭಕ್ತಾಧಿಗಳು ಆಗಮಿಸುತ್ತಿದ್ದಾರೆ. ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ವ್ಯವಸ್ಥಾಪನಾ ಸಮಿತಿ ಧನುಪೂಜೆ ಆಚರಣೆ ಸಮಿತಿ ಹಾಗೂ ಸಿಬ್ಬಂದಿ ವರ್ಗದವರು ಪ್ರತಿದಿನ ಹಾಜರಿದ್ದು ಭಕ್ತರಿಗೆ ಸೂಕ್ತ ಮಾಹಿತಿ ಮಾರ್ಗದರ್ಶನ ನೀಡುತ್ತಿದ್ದಾರೆ.
ಜ.೧೪ರಂದು ಆಯಿರಕೊಡ ಅಭಿಷೇಕ
ದೇವಸ್ಥಾನದಲ್ಲಿ ಜ.೧೪ರಂದು ಈ ಬಾರಿಯ ಧನುಪೂಜೆ ಮುಕ್ತಾಯಗೊಳ್ಳಲಿದ್ದು ಅಂದು ಮಕರ ಸಂಕ್ರಮಣದ ಪ್ರಯುಕ್ತ ಆಯಿರಕೊಡ ಅಭಿಷೇಕ, ಸೀಯಾಳ ಅಭಿಷೇಕ ಹಾಗೂ ರಾತ್ರಿ ರಂಗಪೂಜೆ ನಡೆಯಲಿದೆ.
ಹಸಿರುವಾಣಿ : ಭಕ್ತರಿಂದ ವರ್ಷಂಪ್ರತಿಯಂತೆ ಹಸಿರುವಾಣಿಯನ್ನು ಸ್ವೀಕರಿಸಲಾಗುತ್ತಿದ್ದು ಜ.೧೪ರಂದು ಭಕ್ತರು ಹಸಿರುವಾಣಿ ಹಾಗೂ ಮನೆವಂತಿಕೆಯನ್ನು ದೇವಸ್ಥಾನಕ್ಕೆ ತಂದೊಪ್ಪಿಸಬೇಕು ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಉಳುವಾರು ಹಾಗೂ ಜೋರ್ಣೋದ್ದಾರ ಸಮಿತಿ ಅಧ್ಯಕ್ಷ ಪಿ.ಬಿ. ದಿವಾಕರ ರೈ ತಿಳಿಸಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.