ಇಂದು ೬ ಕಡೆ ಶ್ರೀಚೆನ್ನಕೇಶವ ದೇವರಿಗೆ ಕಟ್ಟೆಪೂಜೆ

Advt_Headding_Middle
Advt_Headding_Middle

ಸುಳ್ಯ ಶ್ರೀಚೆನ್ನಕೇಶವ ದೇವರ ಜಾತ್ರೆಯ ಸಂದರ್ಭದಲ್ಲಿ ಒಟ್ಟು ೧೧ ಕಡೆ ಕಟ್ಟೆಪೂಜೆಗಳು ನೆರವೇರುತ್ತದೆ. ಜ.೮ರಂದು ೬ ಕಡೆಪೂಜೆ ನಡೆದರೆ, ಉಳಿದೈದು ಕಡೆ ಜ.೧೧ರಂದು ಕಟ್ಟೆಪೂಜೆ ನಡೆಯುತ್ತದೆ.
ಜ.೮ರಂದು ರಾತ್ರಿ ಉತ್ಸವ ಬಲಿ ಹೊರಟು ಬಳಿಕ ಪಟ್ಟಣ ಸವಾರಿಗೆ ತೊಡಗುವ ಶ್ರೀ ಚೆನ್ನಕೇಶವ ದೇವರಿಗೆ ವಿವೇಕಾನಂದ ವೃತ್ತ, ಹಳೇಗೇಟು, ಜಯನಗರದ ಮಿಲಿಟ್ರಿ ಗ್ರೌಂಡ್, ಜ್ಯೋತಿ ಸರ್ಕಲ್ ಬಳಿಯ ಅಮೃತಭವನದ ಪಕ್ಕದಲ್ಲಿ, ರಾಮಮಂದಿರದಲ್ಲಿ ಮತ್ತು ಜಟ್ಟಿಪಳ್ಳದಲ್ಲಿರುವ ಶ್ರೀಚೆನ್ನಕೇಶವ ದೇವರ ಕಟ್ಟೆಯಲ್ಲಿ ಕಟ್ಟೆಪೂಜೆಗಳು ನಡೆಯುತ್ತವೆ. ಈ ಕಟ್ಟೆಗಳನ್ನು ವಿದ್ಯುತ್ ದ್ವೀಪಗಳಿಂದ ಅಲಂಕರಿಸಿ, ದೇವರನ್ನು ಸ್ವಾಗತಿಸಲು ಸ್ಥಳೀಯರು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಜಟ್ಟಿಪಳ್ಳದಲ್ಲಿ ಗಜಕೇಸರಿ ತಂಡದವರು, ಶ್ರೀಚೆನ್ನಕೇಶವ ಸ್ವಸಹಾಯ ಸಂಘದವರು ಮತ್ತು ಕಾರ್ಗಿಲ್ ಬಾಯ್ಸ್ ತಂಡದವರು ವಿಶೇಷ ರೀತಿಯ ದ್ವಾರಗಳನ್ನು ರಚಿಸಿ, ದೇವರನ್ನು ಸ್ವಾಗತಿಸುತ್ತಾರೆ.
ಜಟ್ಟಿಪಳ್ಳದ ಶ್ರೀಚೆನ್ನಕೇಶವ ಕಟ್ಟೆಯಲ್ಲಿ ಶ್ರೀರಾಮ ಸೇವಾ ಸಮಿತಿಯವರು ಜ.೮ ರಂದು ಮಧ್ಯಾಹ್ನ ಶ್ರೀಸತ್ಯನಾರಾಯಣ ದೇವರ ಪೂಜೆಯನ್ನು ಸಹ ಏರ್ಪಡಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.