Breaking News

ಕುಕ್ಕುಜಡ್ಕ ಪಿಲಿಕಜೆ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಅರ್ಧ ಏಕಾಹ ಭಜನೆ

Advt_Headding_Middle
Advt_Headding_Middle

ಅಮರಮುಡ್ನೂರು ಗ್ರಾಮದ ಕುಕ್ಕುಜಡ್ಕ ಪಿಲಿಕಜೆ ಶ್ರೀ ಧರ್ಮಶಾಸ್ತ ಭಜನಾ ಮಂದಿರದಲ್ಲಿ ಜ. ೭ರಂದು ಶ್ರೀ ಗುರುದೇವ ಸೇವಾ ಬಳಗ ಇದರ ಸಹಯೋಗದಲ್ಲಿ ೧೫ನೇ ವರ್ಷದ ಅರ್ಧ ಏಕಾಹ ಭಜನೆ ಹಾಗೂ ಇರುಮುಡಿ ಕಟ್ಟುಕಟ್ಟುವ ಕಾರ್ಯಕ್ರಮ ಜರಗಿತು. ಪೂ.ಗಣಪತಿ ಹವನ, ದೀಪ ಪ್ರತಿಷ್ಠೆಯಾಗಿ ಭಜನಾ ಕಾರ್ಯಕ್ರಮ ಪ್ರಾರಂಭಗೊಂಡಿತು. ಶಿವಸಾಯಿ ಭಟ್ ಪಿಲಿಕಜೆ ದೀಪ ಪ್ರಜ್ವಲಿಸಿ ಪ್ರಾರ್ಥಿಸಿದರು. ಮಧ್ಯಾಹ್ನ ಕರುಣಾಕರ ಗುರುಸ್ವಾಮಿಯವರ ನೇತೃತ್ವದಲ್ಲಿ ಅಯ್ಯಪ್ಪ ವೃತಧಾರಿಗಳ ಇರುಮುಡಿ ಕಟ್ಟುಕಟ್ಟಿ ಮಹಾಪೂಜೆಯಾಗಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ ನಡೆಯಿತು. ತಾಲೂಕಿನ ವಿವಿಧ ಭಜನಾ ಮಂಡಳಿಗಳ ಸದಸ್ಯರು ಆಗಮಿಸಿ ಭಜನೆಯಲ್ಲಿ ಪಾಲ್ಗೊಂಡರು. ಸೂರ್ಯಾಸ್ತಮಾನದ ವೇಳೆಯಲ್ಲಿ ಭಜನೆಯು ಸಮಾಪ್ತಿಗೊಂಡು ಮಹಾಪೂಜೆಯಾಗಿ ಪ್ರಸಾದ ವಿತರಣೆ ನಡೆಯಿತು. ರಾತ್ರಿ ೭ ಗಂಟೆಗೆ ರಂಗಮನೆ ಸುಳ್ಯ ಇವರ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.