ಸುಳ್ಯ ಜಾತ್ರೋತ್ಸವದ ಅಂಗವಾಗಿ ಸುಳ್ಯ ಕೃಷಿ ಇಲಾಖೆ ವತಿಯಿಂದ ಗುರು ಭವನದ ಎದುರು ಕೃಷಿ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ.
ಇದರ ಉದ್ಘಾಟನೆಯನ್ನು ಜ.೯ರಂದು ಸುಳ್ಯ ತಾ.ಪಂ ಅಧ್ಯಕ್ಷ ಚನಿಯ ಕಲ್ತಡ್ಕ ನೆರವೇರಿಸಿದರು. ತಾ.ಪಂ ಸದಸ್ಯ ತೀರ್ಥರಾಮ ಜಾಲ್ಸೂರು ಮುಖ್ಯ ಅತಿಥಿಯಾಗಿ ಇದ್ದರು. ಕೃಷಿ ತಾಂತ್ರಿಕ ಅಧಿಕಾರಿ ಮೋಹನ್ ನಂಗಾರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.