ಕೊಲ್ಲಮೊಗ್ರು ಪಶು ಚಿಕಿತ್ಸಾಲಯ ಮತ್ತೆ ತೆರೆಯುವುದೆ !?

Advt_Headding_Middle
Advt_Headding_Middle

ಸರಕಾರದ ಯೋಜನೆಯಂತೆ ಕೊಲ್ಲಮೊಗ್ರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಲ್ಲಮೊಗ್ರು ವಿನಲ್ಲಿ ಸುಮಾರು ವರ್ಷಗಳಿಂದ ಪ್ರಾಥಮಿಕ ಪಶು ಚಿಕಿತ್ಸಾಲಯ ಕಾರ್ಯ ನಿರ್ವಹಿಸುತಿತ್ತು. ಇಲ್ಲಿ ಒಬ್ಬರು ಪಶು ಪರಿವೀಕ್ಷರು ಕಾರ್ಯ ನಿರ್ವಹಿಸುತಿದ್ದರು. ಇವರನ್ನು ಪಶು ಇಲಾಖೆಯು ಮೂರು ತಿಂಗಳ ಹಿಂದೆ ಮೂಡಬಿದಿರೆಗೆ ವರ್ಗಾವಣೆ ಮಾಡಿತ್ತು, ಆದರೆ ಈ ಪಶು ಚಿಕಿತ್ಸಾಲಯಕ್ಕೆ ಯಾರನ್ನು ನಿಯೋಜಿಸದ ಕಾರಣ ಇದರ ಬಾಗಿಲು ಮುಚ್ಚಿತು. ಕೊಲ್ಲಮೊಗ್ರು, ಕಲ್ಮಕಾರು, ಹರಿಹರ ಪಲ್ಲತಡ್ಕ, ಬಾಳುಗೋಡು ಗ್ರಾಮಗಳಿಗೆ ಇದೊಂದೆ ಪಶು ಚಿಕಿತ್ಸಾಲಯವಿದ್ದು ಇದೀಗ ಅದೂ ಮುಚ್ಚಿ ಈ ಭಾಗದ ಜನ ಗುತ್ತಿಗಾರು ಅಥವಾ ಸುಬ್ರಹ್ಮಣ್ಯ ಕ್ಕೆ ಓಡಬೇಕಾಗಿದೆ. ಬಾಗಿಲು ಮುಚ್ಚಿ ಮೂರು ತಿಂಗಳಾದರು ಇಲಾಖೆ ಆಗಲಿ ಸಂಬಂಧ ಪಟ್ಟವರಾಗಲಿ ಇದರ ಬಗ್ಗೆ ಗಮನಹರಿಸದೆ ಇರುವುದು ವಿಶೇಷವಾಗಿದೆ. ಇದು ಮತ್ತೆ ಕಾರ್ಯಾರಂಭ ಮಾಡಬೇಕು ಇದರೆ ಬಗ್ಗೆ ಜನಪ್ರತಿನಿಧಿಗಳು, ಫಲಾನುಭವಿಗಳು ಧ್ವನಿ ಎತ್ತುವ ಅವಶ್ಯಕತೆ ಇದೆ.

ನಮ್ಮಲ್ಲಿ ೫ ದನಗಳು ಇದೆ, ನಮ್ಮ ದನಗಳಿಗೆ ಅಸೌಖ್ಯತೆ ಉಂಟಾದರೆ ನಾವು ಗುತ್ತಿಗಾರಿಗೆ ಹೋಗಬೇಕಾಗಿದೆ, ಕೊಲ್ಲಮೊಗ್ರು ದಲ್ಲಿ ಹಲವಾರು ವರ್ಷಗಳಿಂದ ಇದ್ದ ಒಂದು ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರವು ಮುಚ್ಚಿ ೩ ತಿಂಗಳಾಗುತ್ತಾ ಬಂತು ಯಾರೇ ಆಗಲಿ ಬಹುವರ್ಷಗಳ ವ್ಯವಸ್ಥೆ ಶಾಶ್ವತವಾಗಿ ಮುಚ್ಚದಂತೆ ನೋಡಿಕೊಳ್ಳಬೇಕಾಗಿದೆ.
ಪುಷ್ಪಾರಾಜ್ ಪಡ್ಪು , ನಿರ್ದೇಶಕರು ಕೊಲ್ಲಮೊಗ್ರು ಹಾಲು ಉತ್ಪಾದಕ ಸಂಘ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.