ಮುಂದಿನ ವಿಧಾನಸಭಾ ಚುನಾವಣೆಗೆ ಮತ ಚಲಾಯಿಸಬೇಕಾದರೆ ಜ.೧೨ರ ಒಳಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಬೇಕೆಂಬ ಆದೇಶ ಚುನಾವಣಾ
ಆಯೋಗದಿಂದ ಬಂದಿದ್ದು, ಇದಕ್ಕಾಗಿ ಬೂತ್ ಲೆವಲ್ ಅಫೀಸರ್ (ಬಿ.ಎಲ್.ಓ) ಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಡಿ.೯ರಂದು ತಾಲೂಕು ಪಂಚಾಯತ್ ಸಂಭಾಗಣದಲ್ಲಿ ಬಿ.ಎಲ್.ಓಗಳ ಸಭೆ ಕರೆಯಲಾಗಿತ್ತು. ತಹಶೀಲ್ದಾರ್ ಕುಂಞಿಮ್ಮರವರ ಅಧ್ಯಕ್ಷತೆಯಲ್ಲಿ ಚುನಾವಣಾ ಶಾಖೆಯ ಉಪತಹಶೀಲ್ದಾರ್ ಚಂದ್ರಕಾಂತ್ ಹಾಗೂ ಸರಕಾರಿ ಕಾಲೇಜು ಪಿ.ಇ.ಡಿ ಸತೀಶ್ ಕೊಯಿಂಗಾಜೆಯವರು ತರಬೇತಿ ನೀಡಿದರು.