ಹಾಲೆಮಜಲು ಛತ್ರಪ್ಪಾಡಿ ರಸ್ತೆಯ ಅಭಿವೃದ್ಧಿಯಲ್ಲಿ ಕಡೆಗಣನೆ

Advt_Headding_Middle
Advt_Headding_Middle

ಗುತ್ತಿಗಾರು ಗ್ರಾ.ಪಂ ವ್ಯಾಪ್ತಿಯ ಜಾಲ್ಸುರು- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಿಂದ ಕವಲೊಡೆದು ಹೋಗುವ ಹಾಲೆಮಜಲು- ಛತ್ರಪ್ಪಾಡಿ ರಸ್ತೆಯನ್ನು ಅಭಿವೃದ್ಧಿಯಲ್ಲಿ ಕಡೆಗಣಿಸಲಾಗಿದೆ. ಈ ರಸ್ತೆಯು ಪ. ಪಂ. ವರ್ಗ ಕಾಲೋನಿ ರಸ್ತೆಯಾಗಿದ್ದು, ಇದು ಹೊಸಹಳ್ಳಿ, ಗುಡ್ಡೆಮನೆ, ಕುಕ್ಕುಜೆ, ಕಡ್ಲರು, ಅಡ್ಕಾರು ಸೇರಿದಂತೆ ಇನ್ನಿತರ ಬೈಲುಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಈ ರಸ್ತೆಯನ್ನು ಶಾಶ್ವತವಾಗಿ ಅಭಿವೃದ್ಧಿಪಡಿಸುವಂತರ ಆ ಭಾಗದ ಜನರ ಪರವಾಗಿ, ಪ್ರಭಾಕರ ಛತ್ರಪ್ಪಾಡಿಯವರು ಸಂಬಂಧಪಟ್ಟವವರಿಗೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಜಿ.ಪಂ. ಇಂಜಿನಿಯರಿಂಗ್ ವಿಭಾಗ ೪ಕಿ.ಮೀ ದೂರೆ ಕಾಂಕ್ರಿಟಿಕರಣಕ್ಕಾಗಿ ೨ಕೋಟಿ ೩೦ ಲಕ್ಷ ಅಂದಾಜು ಪಟ್ಟಿಯನ್ನು ೨೦೧೫- ೧೬ರಲ್ಲಿ ಜಿಲ್ಲಾ ಪಂಚಾಯತ್ ಮಂಗಳೂರಿಗೆ ಕಳುಹಿಸಿತು. ಆದರೆ, ಅಷ್ಟೋಂದು ಅನುದಾನ ಜಿ.ಪಂ.ನಲ್ಲಿ ಲಭ್ಯವಿಲ್ಲದ ಕಾರಣ ಅದನ್ನು ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಗೆ ಕಳುಹಿಸಲಾಗಿರುವ ವಿಚಾರ ಮಾಹಿತಿ ಹಕ್ಕಿನಡಿ ಮಾಹಿತಿ ದೊರೆತಿದ್ದು, ಗ್ರಾಮೀಣಾಭಿವೃದ್ಧಿ ಇಲಾಖೆ ಈಗಾಗಲೇ ಜಿಲ್ಲಾಪಂಚಾಯತ್ ಗ್ರಾಮೀಣ ರಸ್ತೆಯ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಅದನ್ನು ವಿನಿಯೋಗಿಸುವಂತೆ ಸೂಚಿಸಿದ್ದರು. ಈ ವಿಚಾರ ಮಾಹಿತಿ ಹಕ್ಕಿನಡಿ ದೊರೆತಿದೆ. ಅದರೆ ಇಲಾಖೆಯಲ್ಲಿ ಇಷೆಲ್ಲಾ ಕಡತ ವಿನಿಮಯ ಅಗಿದ್ದರೂ ಸಂಬಂಧಪಟ್ಟ
ಜನಪ್ರತಿನಿಧಿಗಳು ಗಮನವನ್ನು ಹರಿಸದೆ ಇರುವುದು ದುರದೃಷ್ಟಕರವಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.