ಬೊಂಬಾಯಿ ವಾಸುದೇವ ಗೌಡರ ಕಲಾತ್ಮಕ ಗುಡಿ ಕೈಗಾರಿಕೆ

Advt_Headding_Middle
Advt_Headding_Middle

ಹೊರಜಗತ್ತಿಗೆ ಪ್ರಚಾರ ಇಲ್ಲದೆ, ಮನೆಯಲ್ಲಿ ಉಪಯೋಗವಿಲ್ಲವೆಂದು ಹೊರಗೆ ಎಸೆದ ಕಸವನ್ನು ರಸವನ್ನಾಗಿಸಿ, ಕಾಡು ಬಳ್ಳಿ, ಬೆತ್ತವನ್ನು ಬಳಸಿ ಹತ್ತು ಹಲವು ಕಲಾತ್ಮಕ ದಿನೋಪಯೋಗಿ ವಸ್ತುಗಳ ನಿರ್ಮಾಣದ ಗುಡಿಕೈಗಾರಿಕೆಯನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ, ಅರಂತೋಡು ಗ್ರಾಮದ ಅಡ್ಕಬಳೆ ವಾಸುದೇವ ಗೌಡರು.

ಅರಂತೋಡು ಗ್ರಾಮದ ಅಡ್ಕಬಳೆ ವಾಸುದೇವ ಗೌಡರು ಹಲವು ವರ್ಷ ಮುಂಬಯಿಯಲ್ಲಿ ಹೊಟೇಲ್ ಉದ್ಯೋಗಿಯಾಗಿದ್ದು, ಈಗ ಮನೆಯಲ್ಲಿದ್ದಾರೆ. ಮುಂಬಯಿಯಲ್ಲಿದ್ದರಿಂದ ಊರಲ್ಲಿ ಇವರನ್ನು ಬೊಂಬಾಯಿ ವಾಸು ಎಂದೇ ಗುರುತಿಸುತ್ತಾರೆ. ಹೊರ ಜಗತ್ತಿಗೆ ಇವರೊಳಗಿನ ಕೌಶಲ್ಯತೆ ತೋರದೆ ಇದ್ದರೂ ಅವರ ಮನೆಗೆ ಹೋಗಿ ನೋಡಿದಾಗ ಗುಡಿಕೈಗಾರಿಕೆಯ ಹೊಸ ಪ್ರಪಂಚವೇ ತೆರೆದುಕೊಳ್ಳುತ್ತದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅರಂತೋಡು ಸೇವಾ ಪ್ರತಿನಿಧಿ ಐತ್ತಪ್ಪ ಬಾಜಿನಡ್ಕ ಇವರ ಮನೆಗೆ ಬೇಟಿ ನೀಡಿದಾಗ ವಾಸುದೇವ ಗೌಡರ ಕೈಯಿಂದ ಮೂಡಿಬಂದ ಕಲಾತ್ಮಕ ವಸ್ತುಗಳ ಬಗ್ಗೆ ಸುದ್ದಿಗೆ ಮಾಹಿತಿ ನೀಡಿದರು.

ವಾಸುದೇವ ಗೌಡರು ೧೦ ವರ್ಷಗಳಿಂದ ಕಲಾತ್ಮಕ ವಸ್ತುಗಳ ತಯಾರಿಕೆಯ ಗುಡಿಕೈಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮನೆಯ ಕೃಷಿ ಕೆಲಸದ ಬಿಡುವಿನ ವೇಳೆಯಲ್ಲಿ ಹವ್ಯಾಸವಾಗಿ ಬೆಳೆಸಿಕೊಂಡ ಗುಡಿ ಕೈಗಾರಿಕೆ ಈಗ ಅದರಲ್ಲೇ ಮಗ್ನವಾಗುವಂತೆ ಮಾಡಿದೆ.
ಕಾಡಿನ ಬೆತ್ತ, ಬಳ್ಳಿ ಹಾಗೂ ಮನೆಯಲ್ಲಿ ಉಪಯೋಗಿಸಿ ಬಿಸಾಡಿದ ವಸ್ತುಗಳೇ ಇವರ ಗುಡಿಕೈಗಾರಿಕೆಯ ಪರಿಕರಗಳು. ಬೆತ್ತದಿಂದ ಮಾಡಿದ ಟೋಪಿ, ಮೊಬೈಲ್ ಕವರ್, ಕನ್ನಡಕ ಹಾಕುವ ಕವರ್, ಬೆಲ್ಟ್, ಹೂಕುಂಡ, ಅಡಿಕೆ ಹೆಕ್ಕುವ ಬುಟ್ಟಿ, ಮೀನು ಹಿಡಿಯುವ ಕೂರಿ, ಬುಟ್ಟಿ, ರೊಟ್ಟಿ ಮಾಡಿ ಹಾಕಲು ಪಾತ್ರೆ, ವ್ಯಾನಿಟಿ ಬ್ಯಾಗ್, ಕೋಳಿ ಕಟ್ಟಕ್ಕೆ ಕೋಳಿ ಹಾಕಿಕೊಂಡು ಹೋಗಲು ಬೆತ್ತದ ಚೀಲ, ರಬ್ಬರ್ ಟ್ಯಾಪಿಂಗ್‌ನವರಿಗೆ ಸ್ಕ್ರಾಪ್ ಹಾಕಲು ಚೀಲ, ನೀರಿನ ಪ್ಲಾಸ್ಕ್ ಹಾಕಲು ಚೀಲ, ಕರಡಿಕೆ, ಹರಿವಾಣ, ವಿವಿಧ ಬಗೆಯ ಟೋಪಿ, ಹೀಗೆ ಮನೆಯ ತುಂಬೆಲ್ಲಾ ಬರೀ ಬೆತ್ತ ಹಾಗೂ ಕಾಡು ಬಳ್ಳಿಯ ಸಲಕರಣಗಳೇ ತುಂಬಿಕೊಂಡಿದೆ.

https://youtu.be/1VJwQl18D0s?t=32

ತ್ಯಂತ ಅಮೂಲ್ಯವೂ, ಕಲಾತ್ಮಕವೂ ಆಗಿರುವ ಈ ಗುಡಿಕೈಗಾರಿಕೆ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡಲು ಮುಂದೆ ಬಂದರೆ ಅವರಿಗೆ ನೀಡುವುದಾಗಿ ವಾಸುದೇವ ಗೌಡರು ಹೇಳುತ್ತಾರೆ. ಅರಂತೋಡು ಗ್ರಾಮದ ಬೊಳ್ತಜೆ ಎಂಬಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನೆಲೆಸಿರುವ ವಾಸುದೇವ ಗೌಡರ ದೂರವಾಣಿ ಸಂಖ್ಯೆ 9481837055

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.