Breaking News

ಜನವರಿ ೧೯ರಿಂದ ೨೬ರವರೆಗೆ ಮೊಗ್ರ ಶ್ರೀ ಕನ್ನಡ ದೇವತೆಯಾನೆ ಪುರುಷ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ

Advt_Headding_Middle
Advt_Headding_Middle

ಗುತ್ತಿಗಾರು ಗ್ರಾಮದ ಕಮಿಲ ಮೊಗ್ರ ಶ್ರೀ ಶ್ರೀ ಕನ್ನಡ ದೇವತೆಯಾನೆ ಪುರುಷ ದೈವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಜ.೧೯ರಿಂದ ೨೬ರವರೆಗೆ ನಡೆಯಲಿದೆ.ಜ.೧೫.ರಂದು ಮುಹೂರ್ತದ ಗೊನೆ ಕಡಿಯುವುದರೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಜ. ೧೯ರಂದುಮಧ್ಯಾಹ್ನ ಗಂಟೆ ೧೨ಕ್ಕೆ ಮೊಗ್ರ ದೊಡ್ಡ ಮನೆಯಲ್ಲಿ ಶ್ರೀ ದೇವರಿಗೆ ಸಮಾರಾಧನೆ ,ರಾತ್ರಿ ಗಂಟೆ ೮.ಕ್ಕೆ ಮಲ್ಕಜೆ ಮಾಳಿಗೆಯಿಂದ ಭಂಡಾರ ಹೊರಡಲಿದೆ.ಜ.೨೦ರಂದು ಪ್ರಾತಃ ಕಾಲ ೫ಕ್ಕೆ ಶ್ರೀ ಉಳ್ಳಾಕುಲು ನೇಮ, ಪೂ ೧೧ಕ್ಕೆ ಶ್ರೀ ಕುಮಾರ ನೇಮ, ಸಂಜೆ ಗಂಟೆ ೩ಕ್ಕೆ ಉಳ್ಳಾಕುಲು ಭಂಡಾರ ಹೊರಡುವುದು, ಸಂಜೆ ಗಂಟೆ ೫ಕ್ಕೆ ಶ್ರೀ ಪುರುಷ ದೈವದ ನೇಮ, ರಾತ್ರಿ ಗಂಟೆ ೯ಕ್ಕೆ ಶ್ರೀ ರುದ್ರಚಾಮುಂಡಿ ನೇಮ,ರಾತ್ರಿ ಗಂಟೆ ೧೨ಕ್ಕೆ ಶ್ರೀ ಮಲೆ ಚಾಮುಂಡಿ ನೇಮ ನಡೆಯಲಿದೆ. ಜ.೨೧ರಂದು ಪ್ರಾತಃ ಕಾಲ ೫ಕ್ಕೆ ಶ್ರೀ ಭೈರಜ್ಜಿ ನೇಮ, ಬೆಳಿಗ್ಗೆ ಗಂಟೆ ೧೦ಕ್ಕೆ ಭಂಡಾರ ಹೊರಡಲಿದೆ.ಜ.೨೫ರಂದು ರಾತ್ರಿ ಗಂಟೆ ೮ಕ್ಕೆ ಮೂವ ಮಾಳಿಗೆಯಿಂದ ಭಂಡಾರ ಹೊರಡಲಿದೆ.
ಜ.೨೬ರಂದು ಪ್ರಾತಃ ಕಾಲ ೫ಕ್ಕೆ ಬ್ರಹ್ಮರ ನೇಮ, ಪೂ ೧೦ರಿಂದ ಶ್ರೀ ರಾಜ್ಯನ್ ದೈವದ ನೇಮ ಮತ್ತು ಉಪದೈವಗಳ ನೇಮ ನಡೆಯಲಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.