ದುಗಲಡ್ಕ: ದೆಹಲಿ ಕನ್ನಡಿಗ ವಸಂತ ಶೆಟ್ಟರ ಅಧ್ಯಕ್ಷತೆಯಲ್ಲಿ ನಡೆದ ಕನ್ನಡ ನುಡಿ ಜಾತ್ರೆಗೆ ತೆರೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 ದುಗಲಡ್ಕದಲ್ಲಿ ಜರಗಿದ ೨೨ ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಿ ಜರಗಿತ್ತು. ಕನ್ನಡಭಿಮಾನಿಗಳು ಉತ್ಸಾಹದಿಂದ ಪಾಲ್ಗೊಂಡರು.  ತಾಲೂಕು ಕಸಾಪ, ಕೊಕುಳಿ ಮಿತ್ರ ಯುವಕ ಮಂಡಲ, ದುಗಲಡ್ಕ ತುಳುಕೂಟ ಇದರ ಆಶ್ರಯದಲ್ಲಿ ನೀರಬಿದಿರೆ ಮಹಾಲಿಂಗೇಶ್ವರ ಭಟ್ ಸಭಾಂಗಣದ, ಪಾನತ್ತಿಲ ಈಶರಪ್ಪ ಗೌಡ ವೇದಿಕೆಯಲ್ಲಿ ದಿನಪೂರ್ತಿ ಕನ್ನಡಕ್ಕೆ ಸಂಬಂಧಿ ಸಿ ವಿವಿಧ ಚಟುವಟಿಕೆಗಳು ರಾತ್ರಿಯ ತನಕ ಸಾಗಿತ್ತು.  ೪೦ ಅಡಿ ಉದ್ದದ ಹಾಗೂ ೨೦ ಅಡಿ ಅಗಲದ ಭವ್ಯ ವೇದಿಕೆಯಲ್ಲಿ ವಿಶೇಷ ಆಕರ್ಷಣೆಯಾಗಿ ೮ ಜ್ಞಾನಪೀಠ ಪುರಸ್ಕೃತರ ಭಾವಚಿತ್ರ ಗಮನ ಸೆಳೆಯಿತು. ಸಮ್ಮೇಳನದಲ್ಲಿ ಬೆಳಗ್ಗಿನಿಂದ ಸಂಜೆ ತನಕ ಸಾವಿರಾರು ಜನರು ಪಾಲ್ಗೊಗೊಂಡಿದ್ದರು. ಅದಕ್ಕೆ ಬೇಕಾದ ಹಾಗೆ ಬೆಳಗ್ಗೆ, ಮಧ್ಯಾಹ್ನ, ಸಂಜೆ ಊಟ ಉಪಹಾರಕ್ಕೆ ಪೂರ್ಣ ವ್ಯವಸ್ಥೆ ಕಲ್ಪಿಸಲಾಗಿತ್ತು. ೧,೫೦೦ ಸಾವಿರಕ್ಕೂ ಮಿಕ್ಕಿ ಜನರು ಮಧ್ಯಾಹ್ನದ ಭೋಜನ ಸ್ವೀಕರಿಸಿದ್ದಾರೆ ಅನ್ನುತ್ತಾರೆ ಸಂಘಟಕರು.

ಕನ್ನಡದ ಬಾವುಟ, ವಸ್ತುಪ್ರದರ್ಶನ

ನಗರದ ಪೈಚಾರು ಬಳಿ ಬೃಹತ್ ಗಾತ್ರದ ಸ್ವಾಗತ ದ್ವಾರ, ಸಮ್ಮೇಳನ ನಡೆಯುವ ವಠಾರದ ಪರಿಸರದ ರಸ್ತೆಯಲ್ಲಿ ಕನ್ನಡದ ಧ್ವಜವನ್ನು ಅಳವಡಿಸಲಾಗಿತ್ತು. ೨೯ ವಸ್ತುಪ್ರದರ್ಶನ ಮಳಿಗೆಗಳು ತೆರದಿತ್ತು. ಪುಸ್ತಕ ಮಾರಾಟ, ತುಳುನಾಡಿನ ಪಾರಂಪರಿಕ ವಸ್ತುಗಳ ಪ್ರದರ್ಶನ ಸೇರಿದಂತೆ, ಹಲವು ಬಗೆಯ ಸ್ಟಾಲ್‌ಗಳಿತ್ತು. ಸಮ್ಮೇಳನಕ್ಕೆ ಆಗಮಿಸಿದ ಮಂದಿ, ಸ್ಟಾಲ್‌ಗಳಿಗೆ ಭೇಟಿ ನೀಡಿದ್ದರು.

ಸಮ್ಮೇಳನಾಧ್ಯಕ್ಷರ ಗರಿಮೆ


ಸಭಾ ವೇದಿಕೆಯಲ್ಲಿದ್ದ ಅತಿಥಿಗಳು ಕನ್ನಡದ ಕಂಪನ್ನು ಕರ್ನಾಟಕದಿಂದ ದೆಹಲಿಯಾಚಗೆ ಪಸರಿಸಿದ ಸಮ್ಮೇಳನಾಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರ ಸಂಘಟನ ಚಾತುರ‍್ಯವನ್ನು ಶ್ಲಾಘಿಸಿದರು. ಡಾ.ಟಿ.ಸಿ.ಪೂರ್ಣಿಮಾ ಅವರು ತನ್ನ ಮಾತಿನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ, ಅಧ್ಯಕ್ಷತೆಗೆ ಅತ್ಯುತ್ತಮ ಆಯ್ಕೆ ಎಂದು ಪ್ರಶಂಸಿದರು.

ದೊಡ್ಡರಂಗೇಗೌಡ,
ಮುಖ್ಯಮಂತ್ರಿ ಚಂದ್ರು ಆಗಮನ

ತಾಲೂಕು ಮಟ್ಟದ ಕನ್ನಡ ಕಂಪಿಗೆ ಮತ್ತಷ್ಟು ಮೆರಗು ತುಂಬಿದ್ದು, ಕವಿ ಡಾ.ದೊಡ್ಡರಂಗೇಗೌಡ, ಮುಖ್ಯಮಂತ್ರಿ ಚಂದ್ರು ಅವರ ಆಗಮನ. ಬೆಂಗಳೂರಿನಿಂದ ಆಗಮಿಸಿದ ದೊಡ್ಡರಂಗೇಗೌಡ ಬೆಳಗ್ಗಿನಿಂದ ಕೊನೆ ತನಕ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭಕ್ಕೆ ಅತಿಥಿಯಾಗಿದ್ದ ಮುಖ್ಯಮಂತ್ರಿ ಚಂದ್ರು ಅವರು ಕೆಲ ತಾಸುಗಳ ಮೊದಲೇ ಆಗಮಿಸಿದ್ದರು.

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ


ಮಂಗಳೂರಿನ ಕೊಲ್ಯ ನಾಟ್ಯನಿಕೇತನ ಪ್ರಸ್ತುತಪಡಿಸಿದ ಸಪ್ತಮಾತೃಕೆಯರು ನೃತ್ಯರೂಪಕ ಗಮನ ಸೆಳೆಯಿತು. ವಿವಿಧ ಗೋಷ್ಟಿಗಳ ಮಧ್ಯೆ-ಮಧ್ಯೆ ಮಕ್ಕಳಿಂದ ಕನ್ನಡಕ್ಕೆ ಸಂಬಂಧಿಸಿ ವಿವಿಧ ನೃತ್ಯಗಳು ನಡೆಯಿತು.

 

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.