ಹೇಮಂತ್ ಸಂಪಾಜೆಗೆ ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಪ್ರಶಸ್ತಿ- ರಾಜ್ಯಪಾಲ ವಜುಭಾಯಿ ವಾಲರಿಂದ ಪ್ರಶಸ್ತಿ ಪ್ರದಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ವತಿಯಿಂದ ಕೊಡಮಾಡುವ ಪ್ರತಿಷ್ಠಿತ ಕೆಒಎ-೨೦೧೭(ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ) ಸಾಲಿನ ಪ್ರಶಸ್ತಿಯನ್ನು ಉದಯವಾಣಿ ಕ್ರೀಡಾ ವರದಿಗಾರ, ಉಪ ಸಂಪಾದಕ ಸುಳ್ಯ ತಾಲೂಕಿನ ಹೇಮಂತ್ ಸಂಪಾಜೆ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಯವನಿಕಾ ಸಂಭಾಗಣದಲ್ಲಿ ಗುರುವಾರ (೧೧-೧-೨೦೧೮) ಸಂಜೆ ನಡೆದ ಕಾರ‍್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿ ಮೊತ್ತ ೧ ಲಕ್ಷ ರೂ.ಸ್ಮರಣಿಕೆ ಒಳಗೊಂಡಿದೆ. 
ಇದೇ ವೇಳೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ರಾಜ್ಯದ ೧೦ ಮಂದಿ ಕ್ರೀಡಾಪಟುಗಳು ಹಾಗೂ ೪ ಮಂದಿ ಮಾಜಿ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಸೇರಿದಂತೆ. ಒಟ್ಟು ೧೫ ಮಂದಿ ಪ್ರಶಸ್ತಿ ಸ್ವೀಕರಿಸಿದರು. ಇದರಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರಶಸ್ತಿಗೆ ಹೇಮಂತ್ ಏಕೈಕ ಆಯ್ಕೆಯಾಗಿದ್ದರು. ಅಷ್ಟೇ ಅಲ್ಲ ಅತೀ ಕಿರಿಯ ವಯಸ್ಸಿಗೆ ಈ ಪ್ರಶಸ್ತಿಯನ್ನು ಪಡೆದ ಖ್ಯಾತಿಗೆ ಪಾತ್ರರಾಗಿದ್ದಾರೆ.   ಗೃಹ ಸಚಿವ ರಾಮಲಿಂಗಾ ರೆಡ್ಡಿ, ಸರ್ಕಾರದ ಹೆಚ್ಚುವರಿ ಮುಖ್ಯಕಾರ‍್ಯದರ್ಶಿ ರಜನೀಶ್ ಗೋಯೆಲ್, ಮುಖ್ಯಮಂತ್ರಿಗಳ ಸಂಸದೀಯ ವ್ಯವಹಾರಗಳ ಕಾರ‍್ಯದರ್ಶಿ ಗೋವಿಂದರಾಜು, ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ ನಿರ್ದೇಶಕ ಅನುಪಮ್ ಅಗರ್ವಾಲ್, ಕೆಒಎ ಉಪಾಧ್ಯಕ್ಷ ಅನಂತ್‌ರಾಜ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. 
ಹೇಮಂತ್  ಮೂಲತಃ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದವರು. ಎಂ.ಎಸ್.ಹೊನ್ನಪ್ಪ ಗೌಡ-ಪದ್ಮಾವತಿ ದಂಪತಿಗಳ ಏಕೈಕ ಪುತ್ರ. ಹೇಮಂತ್ ಬಾಲ್ಯದಿಂದಲೂ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದರು. ಅನೇಕ ಪ್ರಶಸ್ತಿಗಳನ್ನು ಕೂಡ ಗೆದ್ದಿದ್ದಾರೆ. ಮುಂದೆ ಇದೇ ಕ್ರೀಡೆ ಅವರನ್ನು ಕ್ರೀಡಾ ವರದಿಗಾರನಾಗಿ ಕೈಹಿಡಿಯಿತು. 
ಹೇಮಂತ್ ಪ್ರಾಥಮಿಕ ಶಿಕ್ಷಣವನ್ನು ಕಲ್ಲುಗುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪ್ರೌಢ ಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಸಂಪಾಜೆ ಜೂನಿಯರ್ ಕಾಲೇಜಿನಿಂದ ಪಡೆದುಕೊಂಡಿದ್ದಾರೆ. ೨೦೦೯ರಲ್ಲಿ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಿಂದ ಕಲಾ ವಿಭಾಗದಲ್ಲಿ ಪದವಿ ಡೆದುಕೊಂಡ ಬಳಿಕ ೨೦೧೦-೨೦೧೧ರಲ್ಲಿ ಉಜಿರೆ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ (ಎಂಸಿಜೆ) ಸ್ನಾತಕೋತ್ತರ ಪದವಿ ಪಡೆದುಕೊಂಡರು. 
ಮುದ್ರಣ ಮಾಧ್ಯಮದಲ್ಲಿ ೬ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸ್ನಾತಕೋತ್ತರ ಶಿಕ್ಷಣದ ಬಳಿಕ ಹೊಸದಿಗಂತ ಬೆಂಗಳೂರು ಆವೃತ್ತಿಯಲ್ಲಿ ವೃತ್ತಿ ಜೀವನ ಆರಂಭಿಸಿದ್ದು, ಮೂರು ವರ್ಷ ಯಶಸ್ವಿಯಾಗಿ ಕ್ರೀಡಾ ವರದಿಗಾರ, ಉಪಸಂಪಾದಕರಾಗಿ ಕೆಲಸ ಮಾಡಿದರು. ಹಾಲಿ ಉದಯವಾಣಿ ಸಂಪಾದಕರಾಗಿರುವ ಶಿವಸುಬ್ರಹ್ಮಣ್ಯ ಮಾರ್ಗದರ್ಶನದಲ್ಲಿ ಬೆಳೆದರು. ಇದಾದ ಬಳಿಕ  ಉದಯವಾಣಿಯಲ್ಲಿ ಸೇರಿದರು.  ಪ್ರಸ್ತುತ ಕನ್ನಡ ಪ್ರಭ ಸಂಪಾದಕರಾದ ರವಿ ಹೆಗಡೆ ಜತೆಗೆ ಕೆಲಸ ನಿರ್ವಹಿಸಿ ಅವರಿಂದಲೂ ಉತ್ತಮ ಕೆಲಸಗಾರ ಎಂದು ಮೆಚ್ಚುಗೆ ಗಳಿಸಿದರು. ಹೇಮಂತ್ ಪ್ರಸ್ತುತ ಉದಯವಾಣಿ ಬೆಂಗಳೂರು ಆವೃತ್ತಿಯಲ್ಲಿ ಕಳೆದ ೩ ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್, ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು, ವಿಶೇಷಚೇತನ ಅಥ್ಲೀಟ್ ಶಾಲಿನಿ, ಮಾಜಿ ಕ್ರಿಕೆಟಿಗರಾದ ಎಸ್.ಶ್ರೀಶಾಂತ್, ಸುನೀಲ್ ಜೋಶಿ, ವೆಂಕಟೇಶ್ ಪ್ರಸಾದ್, ಸೈಯದ್ ಕಿರ್ಮಾನಿ ಸೇರಿದಂತೆ ಅನೇಕ ಗಣ್ಯ ಕ್ರೀಡಾಪಟುಗಳ ಸಂದರ್ಶನ ನಡೆಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ರಾಜ್ಯ ಅಥ್ಲೆಟಿಕ್ಸ್ ಕೂಟವೊಂದರಲ್ಲಿ ಡ್ರಗ್ಸ್ ಬಳಕೆಯಾಗಿದ್ದರ ಬಗ್ಗೆ ಇವರು ಪ್ರಕಟಿಸಿದ್ದ ರಹಸ್ಯ ಕಾರ‍್ಯಾಚರಣೆ ವರದಿ ಇವರಿಗೆ ರಾಜ್ಯಾದ್ಯಂತ ಬಾರೀ ಜನಪ್ರಿಯತೆ ತಂದುಕೊಟ್ಟಿತ್ತು.  ಅನೇಕ ಕ್ರೀಡಾಪಟುಗಳ ಸಮಸ್ಯೆಗಳ ಬಗ್ಗೆ ವಿಸ್ತೃತ ವರದಿ ಮಾಡಿ ಸರ್ಕಾರದ ಗಮನ ಸೆಳೆದಿದ್ದಾರೆ. ಈ ಎಲ್ಲ ಕಾರಣಗಳಿಂದ ಕಿರಿಯ ವಯಸ್ಸಿಗೆ ಅವರಿಗೆ ಪ್ರಶಸ್ತಿ ಲಭಿಸಿದೆ. ಇವರ ಪತ್ನಿ ದಯಾಮಣಿ ಕೂಡ ಪತ್ರಕರ್ತೆಯಾಗಿದ್ದಾರೆ. ಹೇಮಂತ್ ತಮ್ಮ ಪತ್ನಿ ಹಾಗೂ ೧ ವರ್ಷದ ಮಗ ಎಂ.ಎಚ್.ಸಮನ್ಯು ಜತೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 

ಸಾಧನೆ ಮಾಡುವ ಹಸಿವು, ಕಠಿಣ ಪರಿಶ್ರಮವಿದ್ದರೆ ಪ್ರಶಸ್ತಿಗಳೇ ನಮ್ಮನ್ನು ಬೆನ್ನಟ್ಟಿಕೊಂಡು ಬರುತ್ತವೆ ಎನ್ನುವುದಕ್ಕೆ ನಾನು ಪ್ರತ್ಯಕ್ಷ ಉದಾಹರಣೆ. ನನ್ನ ಸಂಸ್ಥೆ, ತಾಲೂಕು, ನನ್ನೂರು ಸಂಪಾಜೆಯ ಜನತೆಯ ಪ್ರತಿನಿಧಿಯಾಗಿ ದೊಡ್ಡ ವೇದಿಕೆಯಲ್ಲಿ ಪ್ರಶಸ್ತಿ ಪಡೆದಿರುವುದು ನನಗೆ ಹೆಮ್ಮೆಯ ವಿಷಯ.ಹೇಮಂತ್ ಸಂಪಾಜೆ

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.