ಸೌಹರ್ಧತೆಯಿಂದ ಬಾಳು : ಹಾಫಿಲ್ ಶಮಿಝ್ ಖಾನ್ ನಾಫಿ ಕರೆ

Advt_Headding_Middle
Advt_Headding_Middle

ಮರಣ ಯಾವ ಕ್ಷಣದಲ್ಲೂ ಸಂಭವಿಸಬಹುದು ಇರುವಷ್ಟು ದಿನ ಊರ ಜನರೊಂದಿಗೆ ಸೌರ್ಹಧತೆಯಿಂದ ಬಾಳಬೇಕೆಂದು ಬಹು|ಹಾಫಿಲ್ ಶಮಿಝ್ ಖಾನ್ ನಾಫಿ ಇಡುಕ್ಕಿ ಕರೆ ನೀಡಿದರು. ಅವರು ಪೇರಡ್ಕ ಉರೂಸ್ ಸಮಾರಂಭದ ಎರಡನೇ ದಿನದ ಮುಖ್ಯ ಪ್ರಭಾಷಣದಲ್ಲಿ ಯುವ ಜನತೆಗೆ ಕರೆ ನೀಡಿದರು. ಉರೂಸ್ ಸಮಿತಿ ಅಧ್ಯಕ್ಷರಾದ ಟಿ.ಎಂ ಶಹೀದ್, ಪೇರಡ್ಕ ಖತೀಬರಾದ ಖಲೀಲ್ ಫೈಝಿ, ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪೇರಡ್ಕ ಜಮಾಅತ್ ಅಧ್ಯಕ್ಷರಾದ ಎಸ್. ಆಲಿಹಾಜಿ, ಪೇರಡ್ಕ, ಜಮಾಅತ್ ಮಾಜಿ ಅಧ್ಯಕ್ಷರಾದ ಟಿ.ಎಂ ಬಾಬಾ ಹಾಜಿ, ಪಿ.ಎ ಅಬ್ದುಲ್ ರಹಿಮನ್, ಸೈದುಹಾಜಿ, ಇಬ್ರಾಹಿಂ ಕರಾವಳಿ, ಅರಂತೋಡು ಜುಮಾ ಮಸೀದಿ ಖತೀಬರಾದ ಇಸಾಕ್ ಬಾಖವಿ, ಸಂಪಾಜೆ ಜುಮಾ ಮಸೀದಿ ಖತೀಬರಾದ ಜಮಾಲುದ್ದೀನ್ ಅಲ್ ಅಮಾನಿ, ಕಲ್ಲುಗುಂಡಿ ಜಮಾ ಮಸೀದಿ ಖತೀಬರಾದ ಅಬ್ದುಲ್ ರಝಾಕ್ ಫೈಝಿ, ಸಂಪಾಜೆ ಮಸೀದಿ ಅಧ್ಯಕ್ಷರಾದ ಮಹಮ್ಮದ್ ಹಮೀದಿಂ, ಗೂನಡ್ಕ ಎಸ್.ಕೆ.ಎಸ್.ಎಸ್.ಎಫ್ ಅಧ್ಯಕ್ಷರಾದ ಮುನೀರ್ ದಾರಿಮಿ, ಎಂ.ಆರ್.ಡಿ.ಎ ಅಧ್ಯಕ್ಷರಾದ ಹಕೀಂ ದರ್ಖಾಸು, ಶಂಸುಲ್ ಬಲಮ ಅನುಸ್ಮರಣಾ ವೇದಿಕೆ ಗೂನಡ್ಕ ಇದರ ಅಧ್ಯಕ್ಷರಾದ
ಎನ್.ಹೆಚ್ ಹಾರೀಸ್, ಜಮಾಹತ್ ಪ್ರಧಾನ ಕಾರ್ಯದರ್ಶಿ ಪಿ.ಕೆ ಉಮ್ಮರ್, ಎಣ್ಮೂರು ಐವತೋಕ್ಲೂ ಜಮಾ ಮಸೀದು ಅಧ್ಯಕ್ಷರಾದ ಇಸ್ಮೀಲ್ ಪಡ್ಪಿನಂಗಡಿ, ಯುವ ನ್ಯಾಯವಾದಿ ಮೂಸ ಕುಂಞಿ ಪೈಂಬೆಚಾಲ್, ಟಿ.ಕೆ ಲತೀಫ್, ಕ್ಯೊನಾಡು ಮಸೀದಿ ಅಧ್ಯಕ್ಷರಾದ ಎಸ್.ಪಿ ಅಬ್ದುಲ್ ರಹ್‌ಮಾನ್ ಮೊದಲಾದವರು ಉಪಸ್ಥಿತರಿದ್ದರು. ಉರೂಸ್ ಸಮಿತಿ ಪ್ರಧಾನ ಕಾಯದರ್ಶಿ ಜಿ.ಕೆ ಹಮೀದ್ ಸ್ವಾಗತಿಸಿ ಸದರ್ ಝಕರಿಯಾ ದಾರಿಮಿ ವಂದಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.