ವಿವೇಕಾನಂದ ಜಯಂತಿ ದಿನ -ಎಲಿಮಲೆ ಅಟೋ ಚಾಲಕನ ಉಚಿತ ಸೇವೆ

Advt_Headding_Middle
Advt_Headding_Middle

ಕಳೆದ ವರ್ಷದ ಸ್ವಾಮಿ ವಿವೇಕಾನಂದ ಜಯಂತಿಯ ದಿನ ಪ್ರಯಾಣಿಕರಿಗೆ ಉಚಿತ ಅಟೋ ಸೇವೆ ಒದಗಿಸುವ ಮೂಲಕ ಸ್ವಾಮೀಜಿಯವರ ಜಯಂತಿಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದ್ದ ಅಟೋ ಚಾಲಕ ಈ ಬಾರಿಯೂ ಇದನ್ನು ಮುಂದುವರಿಸಿದ್ದಾರೆ. ಎಲಿಮಲೆಯಲ್ಲಿ ರಿಕ್ಷಾ ಚಾಲಕರಾಗಿರುವ ಶರತ್ ಮರ್ಗಿಲಡ್ಕ ಈ ಸೇವೆ ನಡೆಸಿದವರು.  ವಿವೇಕಾನಂದ ಜಯಂತಿ ದಿನ ಜ್ವರದಿಂದ ಬಳಲುತ್ತಿದ್ದ ರೋಗಿಯೊಬ್ಬರನ್ನು ಉಚಿತವಾಗಿ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಉಚಿತ ಅಟೋ ಸೇವೆ ಆರಂಭಿಸಿದ ಅವರು ಬೆಳಿಗ್ಗೆ ೮.೩೦ ರಿಂದ ಸಂಜೆ ೫.೦೦ ರ ತನಕ ಪ್ರಯಾಣಿಕರಿಗೆ ಉಚಿತ ಸೇವೆಯನ್ನು ಒದಗಿಸಿದರು. “ಜೊತೆಗೆ ವಿದ್ಯುತ್ ವಾಣಿ ಮತ್ತು ಯುವಕರಿಗೆ ಕರೆ” ಅನ್ನುವ ವಿವೇಕಾನಂದರ ಬೋಧನೆಗಳನ್ನು ಒಳಗೊಂಡ ಪುಸ್ತಕಗಳನ್ನು ಕೂಡಾ ಪ್ರಯಾಣಿಕರಿಗೆ ಉಡುಗೊರೆಯಾಗಿ ಕೊಡುವ ಮೂಲಕ ಈ ಬಾರಿಯ ವಿವೇಕಾನಂದ ಜಯಂತಿಯನ್ನು ಆಚರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.