ಬೆಳ್ಳಾರೆ ಶ್ರೀ ಅಜಪಿಲ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸುನಿಲ್ ರೈ ಪುಡ್ಕಜೆ ಆಯ್ಕೆ

Advt_Headding_Middle
Advt_Headding_Middle

ಇತಿಹಾಸ ಪ್ರಸಿದ್ಧ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸುನಿಲ್ ರೈ ಪುಡ್ಕಜೆ ಆಯ್ಕೆಯಾಗಿದ್ದಾರೆ.
ಜ.೧೫ ರಂದು ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಸುನಿಲ್ ರೈ ಪುಡ್ಕಜೆ ಅಧ್ಯಕ್ಷರಾಗಿ ಆಯ್ಕೆಯಾದರು. ಸದಸ್ಯ ಜಯರಾಮ ಉಮಿಕ್ಕಳ ಅಧ್ಯಕ್ಷ ಸ್ಥಾನಕ್ಕೆ ಸುನಿಲ್ ರೈಯವರ ಹೆಸರು ಸೂಚಿಸಿದರು. ನಾಗೇಶ್ ಕುಲಾಲ್ ಅನುಮೋದಿಸಿದರು. ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ರೈ ಪುಡ್ಕಜೆಯವರು ಮಾತನಾಡಿ ದೇವಸ್ಥಾನದ ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಮತ್ತು ಉತ್ಸವದಲ್ಲಿ ಎಲ್ಲರೂ ಸಹಕಾರ ನೀಡಬೇಕಾಗಿ ಕೇಳಿಕೊಂಡರು. ಶ್ರೀಮತಿ ರಾಜೀವಿ ಆರ್ ರೈ, ಅನಿಲ್ ರೈ ಚಾವಡಿಬಾಗಿಲು,ಚಂದ್ರಶೇಖರ ಕಾಮತ್,ಪ್ರೇಮಚಂದ್ರ ಬೆಳ್ಳಾರೆ, ಸಚಿನ್‌ರಾಜ್ ಶೆಟ್ಟಿ ಪೆರುವಾಜೆ,ಸತೀಶ್‌ರವರು ನೂತನ ಅಧ್ಯಕ್ಷ ಸದಸ್ಯರಿಗೆ ಶುಭಹಾರೈಸಿ ಮಾತನಾಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿ ಮೋಹನ್ ನಂಗಾರು,ಲೆಕ್ಕಪತ್ರ ಸಹಾಯಕ ಪದ್ಮನಾಭ ನೆಟ್ಟಾರು,
ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಧಾನ ಅರ್ಚಕ ಉದಯಕುಮಾರ್ ಕೆ.ಟಿ, ಜನಾರ್ಧನ ಗೌರಿಹೊಳೆ,ಶ್ರೀಮತಿ ಗುಣವತಿ ಮಂಡೇಪು, ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು,ಎನ್.ಎಸ್.ವಿಠಲದಾಸ್,ಸುನಿಲ್ ರೈ ಪುಡ್ಕಜೆ, ಜಯರಾಮ್ ಉಮಿಕ್ಕಳ, ನಾಗೇಶ್ ಕುಲಾಲ್, ಶ್ರೀಮತಿ ಶಶಿಕಲಾ ಚಾವಡಿಬಾಗಿಲು ಹಾಗೂ ಇತರ ಭಕ್ತಾದಿಗಳು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.