ಪೇರಡ್ಕ ಮಸೀದಿ ಉರೂಸ್ ಸಮರೋಪ -ಉಮ್ರಾ ಯಾತ್ರೆ ಕೈಗೊಂಡು ಯಾವುದೇ ಪ್ರಯೋಜನವಿಲ್ಲ: ಝೈನುಲ್ ಆಬಿದೀನ್ ತಂಙಳ್

Advt_Headding_Middle
Advt_Headding_Middle

ಚರಿತ್ರೆ ಪ್ರಸಿದ್ಧವಾದ ಪೇರಡ್ಕ ಮಖಂ ಉರೂಸ್ ಸಮಾರೋಪ ಸಮಾರಂಭ ಜ.೧೪ರಂದು ತೆಕ್ಕಿಲ್ ದಿ.ಮಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆಯಿತು.
ಸೌಹಾರ್ದ ಕಾರ್ಯಕ್ರಮನ್ನು ದ.ಕ.ಜಿಲ್ಲಾ ಪಂಚಾಯತ್‌ನ ಮಾಜಿ ಉಪಾಧ್ಯಾಕ್ಷ ಎಮ್.ಎಸ್ ಮಹಮ್ಮದ್ ಉದ್ಘಾಟಿಸಿದರು. ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ ಶಹೀದ್ ಅಧ್ಯಕ್ಷತೆ ವಹಿಸಿದ್ದರು. ಸಮರೋಪ ಸಮಾರಂಭದ ದುವಾ ನೇತೃತ್ವ ವಹಿಸಿ ಮಾತನಾಡಿದ ಸೈಯದ್ ಝೈನುಲ್ ಆಬಿದೀನ್ ತಂಙಳ್ ಮಾತನಾಡಿ ಹಲವಾರು ಭಾರೀ ಉಮ್ರಾ ಯಾತ್ರೆ ಕೈಗೊಂಡು ಯಾವುದೇ ಪ್ರಯೋಜನವಿಲ್ಲ ಆದರೊಂದಿಗೆ ಕುರಾನ್‌ನಿನ ಮತ್ತು ಇಸ್ಲಾಂಮಿನ ಆದರ್ಶಗಳನ್ನು ಮೈಗೂಡಿಸಿದರೆ ಮಾತ್ರ ಪರಿಪೂರ್ಣವಾದ ಉಮ್ರಾ ಕರ್ಮ ನಿರ್ವಹಿಸಿದಂತದಾಗುತ್ತದೆ. ನೆರೆಮನೆಯಲ್ಲಿ ಮದುವೆ ಪ್ರಾಯದ ಹೆಣ್ಣು ಮಗುವಿದ್ದು ಆದರ ವಿವಾಹಕ್ಕೆ ಮುತುವರ್ಜಿ ವಹಿಸಿದೆ ಮಾಡಿದಂತ ಯಾವುದೇ ಕಾರ್ಯವನ್ನು ದೇವರು ಸ್ವೀಕರಿಸುವುದಿಲ್ಲ ಎಂದು ಆವರು ಹೇಳಿದರು. ಮುಖ್ಯ ಪ್ರಭಾಷಣಗಾರರಾಗಿ ಎಡ್ವಕೇಟ್ ಹನೀಫ್ ಹುದವಿ ಮುಖ್ಯ ಪ್ರಭಾಷಣ ಮಾಡಿದರು. ವೇದಿಕೆಯಲ್ಲಿ ಎಸ್.ಸಂಶುದ್ಧೀನ್, ಪಿ.ಎ. ಮಹಮ್ಮದ್,
ಉಮ್ಮರ್ ಬೀಜದ ಕಟ್ಟೆ, ಅಬ್ದುಲ್ ಗಫೂರ್, ಮುಸ್ತಫ ಹಾಜಿ, ಉಮ್ಮರ್, ಅಬ್ದುಲ್ ಕಲಾಂ ಸುಳ್ಯ, ತಾಜಾ ಮಹಮ್ಮದ್, ಮುಸ್ತಫ, ಸಿದ್ಧೀಕ್ ಕೊಕ್ಕೋ, ಹಮೀದ್ ಕುತ್ತಮೊಟ್ಟೆ, ಅಶ್ರಪ್ ಸೆಂಟ್ಯಾರ್, ಅಬ್ಬಾಸ್ ಹಾಜಿ ಕಟ್ಟೆಕ್ಕಾರ್, ಮಹಮ್ಮದ್ ಪೆರಾಜೆ ಉಪಸ್ಥಿತರಿದ್ದರು. ಪೇರಡ್ಕ ಜುಮ್ಮಾ ಮಸೀದಿ ಖತೀಬ ಇಬ್ರಾಹಿಂ ಖಲೀಲ್ ಪೈಝಿ ಸ್ವಾಗತಿಸಿದರು.

ಹೈಲೈಟ್ಸ್ : ಕಾರ್ಯಕ್ರಮದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ಸೀರಣಿ ವಿತರಣೆ ನಡೆಯಿತು. ಗೂನಡ್ಕದಿಂದ ಪೇರಡ್ಕ ದರ್ಗಾದವರೆಗೆ ವಿದ್ಯುತ್ ದೀಪ ಅಲಂಕಾರದಿಂದ ಕಂಗೊಳಿಸುತ್ತಿತ್ತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.