ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ-ಮಸೀದಿ ಅಧ್ಯಕ್ಷರಿಂದ ಪೋಲೀಸ್ ದೂರು

Advt_Headding_Middle
Advt_Headding_Middle
Advt_Headding_Middle

ಸುಳ್ಯದ ಮೊಗರ್ಪಣೆ ಮಸೀದಿಯ ಅಧ್ಯಕ್ಷರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಿದ ಬಗ್ಗೆ ಅಧ್ಯಕ್ಷರು ಪೋಲೀಸರಿಗೆ ದೂರು ನೀಡಿ ಪೋಲೀಸರು ಇಬ್ಬರನ್ನು ಠಾಣೆಗೆ ಕರೆಸಿ ವಿಚಾರಣೆಗೊಳಪಡಿಸಿ ಎಚ್ಚರಿಕೆ ನೀಡಿದ ಘಟನೆ ವರದಿಯಾಗಿದೆ.
ಮೊಗರ್ಪಣೆ ಮಸೀದಿ ಅಧ್ಯಕ್ಷರು ಮಿಲಾದ್ ವೇದಿಕೆಯನ್ನು ದುರುಪಯೋಗಪಡಿಸಿದ್ದಾರೆ. ಮದ್ರಸದಲ್ಲಿ ದೀನ್ ಕಲಿಯುವ ಮಕ್ಕಳಿಗೆ ಮೂಲಭೂತ ಹಕ್ಕನ್ನು ನಿರಾಕರಿಸಿದ್ದಾರೆ. ೪ವರ್ಷಗಳಿಂದ ಜಮಾಅತ್ ಮಹಾಸಬೆ ನಡೆಸಿಲ್ಲ- ಹಣದ ಲೆಕ್ಕಾಚಾರ ಕೊಟ್ಟಿಲ್ಲ ಎಂದು ಮುಂತಾಗಿ ಕೆಲವರು ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದರು.ಇದು ಹಲವು ಗ್ರೂಪ್‌ಗಳಿಗೆ ವೈರಲ್ ಆಗಿತ್ತು. ಕೆಲವು ತಿಂಗಳಿನಿಂದ ನಡೆಯುತ್ತಿದ್ದ ಈ ಅಪಪ್ರಚಾರದಿಂದ ನೊಂದ ಮಸೀದಿ ಅಧ್ಯಕ್ಷ ಸಮದ್ ಹಾಜಿಯವರು ಅಬ್ದುಲ್ಲ ಜಯನಗರ ಎಂಬವರ ಮೇಲೆ ಪೋಲೀಸ್ ದೂರು ನೀಡಿದರು.
ಪೋಲೀಸರು ಅಬ್ದುಲ್ಲರನ್ನು ಪೋಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ “ನಾನು ಹಾಕಿದ್ದಲ್ಲ. ನಾನು ಫಾರ್ವರ್ಡ್ ಮಾಡಿದ್ದೆ. ನನಗೆ ಕಳಿಸಿದ್ದು ಹನೀಫ್ ಹಳೆಗೇಟು” ಎಂದು ಹೇಳಿದರು. ಇದರ ಆಧಾರದಲ್ಲಿ ಹನೀಫ್ ಹಳೆಗೇಟು ಅವರನ್ನು ಪೋಲೀಸರು ಠಾಣೆಗೆ ಕರೆಸಿ ವಿಚಾರಣೆಗೊಳಪಡಿಸಿ ಇಬ್ಬರಿಂದಲೂ ಮುಚ್ಚಳಿಕೆ ಪಡೆದು, ಎಚ್ಚರಿಕೆ ನೀಡಿ ಕಳುಹಿಸಿದರೆಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.