ಸುಳ್ಯದಲ್ಲಿ ಇಂದಿರಾ ಕ್ಯಾಂಟೀನ್‌ಗೆ ಸ್ಥಳ ನಿಗದಿ-ಫೆಬ್ರವರಿಯಲ್ಲಿ ಸಿದ್ಧ

Advt_Headding_Middle
Advt_Headding_Middle

ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್‌ಗಳನ್ನು ತೆರೆದು ಕಡಿಮೆ ದರದಲ್ಲಿ ಊಟ-ಉಪಾಹಾರ ಒದಗಿಸುತ್ತಿರುವ ಕರ್ನಾಟಕ ಸರಕಾರ, ಈಗ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆಯಲು ಮುಂದಾಗಿದೆ.
ಇದರಂತೆ ಸುಳ್ಯ ತಾಲೂಕು ಕೇಂದ್ರದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯುವ ಜವಬ್ದಾರಿಯನ್ನು ಸುಳ್ಯ ನಗರ ಪಂಚಾಯತ್‌ಗೆ ನೀಡಲಾಗಿದೆ. ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕಾಗಿ ಕಂದಾಯ ಇಲಾಖೆ ಈಗಾಗಲೇ ಜಾಗ ಗುರುತಿಸಿದೆ. ಸುಳ್ಯ ತಾಲೂಕು ಕಚೇರಿಯ ಹಿಂಬದಿ, ನ್ಯಾಯಾಲಯ ಹಾಗೂ ಕೆ.ಎಫ್.ಡಿ.ಸಿ. ಕಚೇರಿಯ ಎದುರುಗಡೆ ಸುಮಾರು ೧೦ಸೆಂಟ್ಸ್‌ಗಿಂತ ಹೆಚ್ಚು ಸ್ಥಳವಿದ್ದು ಅಲ್ಲಿ ಸುಮಾರು ೫ ಸೆಂಟ್ಸ್ ಸ್ಥಳದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ನಿರ್ಧರಿಸಲಾಗಿದೆ. ಒಪ್ಪಿಗೆ ಪತ್ರವನ್ನೂ ಕೂಡಾ ನೀಡಲಾಗಿದೆ. ಇಂದಿರಾ ಕ್ಯಾಂಟೀನ್‌ಗೆ ನಿಗದಿತ ಸ್ಥಳವನ್ನು ಸಮತಟ್ಟುಗೊಳಿಸುವುದು, ನೀರಿನ ಸಂಪರ್ಕ ಒದಗಿಸುವುದು, ತ್ಯಾಜ್ಯ, ನೀರು ಹರಿದು ಒಳಚರಂಡಿಗೆ ಸೇರುವ ವ್ಯವಸ್ಥೆ ಮಾಡುವುದು. ಸ್ಥಳದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸುವುದು ನ.ಪಂನ ಜವಾಬ್ದಾರಿ. ಕಟ್ಟಡ ಕಟ್ಟಲು ಕಂಟ್ರಾಕ್ಟರ್‌ಗೆ ಸರಕಾರ ಅನುದಾನ ನಿಗದಿ ಪಡಿಸುತ್ತದೆ.
ಫೆಬ್ರವರಿ ತಿಂಗಳೊಳಗೆ ಕಾಮಗಾರಿ ಪೂರ್ಣಗೊಂಡು ಕ್ಯಾಂಟೀನ್ ತೆರೆಯುವ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ. ೫ರೂ.ಗೆ ಉಪಹಾರ, ೧೦ರೂ.ಗೆ ಊಟ ದೊರೆಯುವ ಈ ಕ್ಯಾಂಟೀನ್‌ಗೆ ಊಟ-ತಿಂಡಿಯನ್ನು ಜಿಲ್ಲಾ ಕೇಂದ್ರದಲ್ಲಿ ತಯಾರಿಸಿ ನಿಗದಿತ ಸಮಯಕ್ಕೆ ತಾಲೂಕು ಕೇಂದ್ರಗಳಿಗೆ ತಲುಪಿಸಲಾಗುತ್ತದೆ. ತಾಲೂಕು ಕಛೇರಿ, ನ್ಯಾಯಾಲಯ ಮತ್ತಿತರ ಸರಕಾರಿ ಕಚೇರಿಗಳಿಗೆ ಬರುವವರಿಗೆ ಮತ್ತು ಸಾರ್ವಜನಿಕರಿಗೆ ಇದರ ಪ್ರಯೋಜನ ದೊರಕಲಿದ್ದು, ಒಂದು ಹೊತ್ತಿಗೆ ೨೦೦ ಜನರಿಗೆ ಮಾತ್ರ ಊಟ ಒದಗಿಸಲಾಗುವುದೆಂದು ಹೇಳಲಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.