Breaking News

ದಿಯಾ ರೀಸ್ಟೈಲ್ ಲೇಡಿಸ್ ಟೈಲರಿಂಗ್ ಶುಭಾರಂಭ

Advt_Headding_Middle
Advt_Headding_Middle

ದಿಯಾ ರೀಸ್ಟೈಲ್ ಲೇಡಿಸ್ ಟೈಲರಿಂಗ್ ಜ.೧೬ರಂದು ಶುಭಾರಂಭಗೊಂಡಿತು. ಉದ್ಘಾಟನೆಯನ್ನು ಸುಳ್ಯದ ತಹಶೀಲ್ದಾರರಾದ ಶ್ರೀಮತಿ ಕುಂಞಮ್ಮ ನೆರವೇರಿಸಿ ಶುಭಹಾರೈಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸುಳ್ಯ ತಾಲೂಕು ಬ್ಯೂಟಿ ಪಾರ್ಲರ್ ಅಸೋಸಿಯೇಶನ್‌ನ ಸಂಚಾಲಕಿ ಶ್ರೀಮತಿ ಜಯಶೀಲಾ ಜಯರಾಮ್, ಸುದ್ದಿ ಬಿಡುಗಡೆ ಪತ್ರಿಕೆಯ ಶಾಹಿನಾ ಸುಳ್ಯ, ಆಶ್ರಯ ಸಮಿತಿ ಸುಳ್ಯ ಸದಸ್ಯೆ ಸುಜಯ ಕೃಷ್ಣ, ನ.ಪಂ ಸದಸ್ಯೆ ಶ್ರೀಲತಾ ಪ್ರಸನ್ನ, ಶ್ರೀಮತಿ ಅಜ್ಮೀನಾ ಪವಝ್, ಡಿ.ಸಿ.ಸಿ. ಸದಸ್ಯೆ ಜೂಲಿಯಾನ ಕ್ರಾಸ್ತ, ಶ್ರೀಮತಿ ತಾಹಿರಾ ರಶೀದ್ ರೀಸ್ಟೈಲ್ ಸುಳ್ಯ ಉಪಸ್ಥಿತರಿದ್ದರು.
ಸಂಸ್ಥೆಯ ಪಾಲುದಾರರಾದ ಅಹಮ್ಮದ್, ಮುನೀರ್, ರಹೀಂ ಪ್ಯಾನ್ಸಿ, ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಇಲ್ಲಿ ಅತೀ ಕಡಿಮೆ ದರದಲ್ಲಿ ಜೂಡಿದಾರ್, ಬ್ಲೌಸ್, ಟಾಪ್ಸ್, ನೈಟಿ, ಗೌನ್, ಹೊಲಿದು ಕೊಡಲಾಗುವುದು ಎಂದು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.