ಸಾತ್ವಿಕ ಉಲಮಾಗಳ ಆದರ್ಶವೇ ಇಹಪರ ವಿಜಯದ ರಹದಾರಿ – ಹನೀಫ್ ನಿಝಾಮಿ, ಬೆಳ್ಳಾರೆಯಲ್ಲಿ ಅನುಸ್ಮರಣಾ ಸಂಗಮ

Advt_Headding_Middle
Advt_Headding_Middle

ಬೆಳ್ಳಾರೆ: ಸಾತ್ವಿಕ ಉಲಮಾಗಳು ನಮಗೆ ತೋರಿಸಿ ಕೊಟ್ಪ ಆದರ್ಶವನ್ನು ಸಂಪೂರ್ಣವಾಗಿ ನಮ್ಮ ಜೀವನದಲ್ಲಿ ಅಳವಡಿಸುವುದೇ ಇಹ-ಪರ ವಿಜಯಕ್ಕಿರುವ ಮಾರ್ಗವೆಂದು ಬಹು: ಹನೀಫ್ ನಿಝಾಮಿ ಮಂಜೇಶ್ವರ ಹೇಳಿದರು.
ಸಮಸ್ತದ ಉಲಮಾಗಳೆಲ್ಲರೂ ಸಾತ್ವಿಕರಾಗಿದ್ದು ಸ್ವಾರ್ಥ ಹಿತಾಸಕ್ತಿಯನ್ನು ಕಿಂಚಿತ್ತೂ ಕಾಣದೆ ಸಮುದಾಯದ ಏಳಿಗೆಗಾಗಿ ಜೀವನವನ್ನೇ ಮುಡಿಪಾಗಿಟ್ಟವರಾಗಿದ್ದು ಅವರನ್ನು ಅನುಕರಿಸಲು ಕರೆ ನೀಡಿದರು.
ಅವರು ಸಮಸ್ತ ಸುನ್ನಿ ಮಹಲ್ ಫೆಡರೇಶನ್ ಝಕರಿಯಾ ಜುಮಾ ಮಸೀದಿ ಬೆಳ್ಳಾರೆ ಇದರ ಆಶ್ರಯದಲ್ಲಿ ದ.ಕ. ಜಿಲ್ಲಾ ರಹ್ಮಾನೀಸ್ ಅಸೋಸಿಯೇಶನ್ ಸಹಯೋಗದೊಂದಿಗೆ ಬೆಳ್ಳಾರೆಯಲ್ಲಿ ನಡೆದ ಶಂಸುಲ್ ಉಲಮಾ, ಕಣ್ಣಿಯ್ಯತ್ ಉಸ್ತಾದ್, ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣೆ ಹಾಗೂ ಕೋಟುಮಲ ಬಾಪು ಉಸ್ತಾದ್ ಆಂಡ್ ನೇರ್ಚೆ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗಾರರಾಗಿ ಮಾತನಾಡಿದರು.
ಸಯ್ಯಿದ್ ಮುಹಮ್ಮದ್ ಜುನೈದ್ ಜಿಫ್ರೀ ತಂಙಳ್ ಆತೂರು ದುಆಶೀರ್ವಚನಗೈದರು. ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ಳಾರೆ ಜಮಾಅತ್ ಅಧ್ಯಕ್ಷರಾದ ಕೆ.ಎಂ. ಮುಹಮ್ಮದ್ ಹಾಜಿ ಬೆಳ್ಳಾರೆ ವಹಿಸಿದರು.
ಬೆಳ್ಳಾರೆ ಮುದರ್ರಿಸ್ ತಾಜುದ್ದೀನ್ ರಹ್ಮಾನಿ ಉಧ್ಘಾಟಿಸಿದರು. ಅಬೂಬಕ್ಕರ್ ರಿಯಾಝ್ ರಹ್ಮಾನಿ ಮತ್ತು ಅಬ್ದುರ್ರಶೀದ್ ರಹ್ಮಾನಿ ಪ್ರಾಸ್ತವಿಕ ಭಾಷಣಗೈದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಸಂಶುದ್ದೀನ್ ಸುಳ್ಯ ಹಾಗೂ ಬ್ಯಾರಿ ಸಾಹಿತ್ಯ ಅಖಾಡಮಿ ಸದಸ್ಯ ಅನ್ಸಾರ್ ಬೆಳ್ಳಾರೆ ಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮದರಸ ಮುಖ್ಯೋಪಾದ್ಯಾಯರಾದ ಬಹು ಮುಹಮ್ಮದ್ ಮುಸ್ಲಿಯಾರ್ಮದರಸ ಮುಖ್ಯೋಪಾದ್ಯಾಯರಾದ ಬಹು ಮುಹಮ್ಮದ್ ಮುಸ್ಲಿಯಾರ್,ಅದ್ಯಾಪಕರುಗಳಾದ ಬಹು. ಝೈನುದ್ದೀನ್ ಮುಸ್ಲಿಯಾರ್, ಸುಲೈಮಾನ್ ಮುಸ್ಲಿಯಾರ್, ಹಸೈನಾರ್ ಮುಸ್ಲಿಯಾರ್, ಜಮಾಅತ್ ಉಪಾದ್ಯಕ್ಷ ಯು.ಎಚ್.ಅಬೂಬಕ್ಕರ್, ಕೋಶಾದಿಕಾರಿ ಹಾಜಿ.ಕೆ.ಮಮ್ಮಾಲಿ, ಬೆಳ್ಳಾರೆ ಹಿದಾಯ ಎಜುಕೇಶನ್&ಚಾರಿಟೇಬಲ್ ಟ್ರಷ್ಠ್ ಪ್ರದಾನ ಕಾರ್ಯದರ್ಶಿ ಜನಾಬ್ ಶಾಫಿ ಬೆಳ್ಳಾರೆ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಇಬ್ರಾಹಿಂ ಅಂಬಟಗದ್ದೆ, ಆರಿಫ್, ಮುಸ್ತಫಾ ಕೆ, ಜಮಾಅತ್ ಪ್ರ ಕಾರ್ಯದರ್ಶಿ ಇಬ್ರಾಹಿಂ.ಕೆ, ಖಿದ್ಮತುಲ್ ಇಸ್ಲಾಂ ಅದ್ಯಕ್ಷ ಬಿ.ಎ.ಬಶೀರ್, ಜಮಾಅತ್ ಸದಸ್ಯ ಅಬ್ದುಲ್ ಖಾದರ್ ಹಾಜಿ. ಕಾರ್ಯದರ್ಶಿ ಬಶೀರ್ ಕಲ್ಲಪಣೆ, ದಫ್ ಕಮಿಟಿ ಅದ್ಯಕ್ಷ ಆಶಿರ್ ಎ.ಬಿ, ಕಾರ್ಯದರ್ಷಿ ಬಶೀರ್ ಯು.ಪಿ, ರಹ್ಮಾನೀಸ್ ಎಶೋಸಿಯೇಶನ್ ಪದಾದಿಕಾರಿಗಳಾದ ಹಾರಿಸ್ ರಹ್ಮಾನಿ, ನೌಫಲ್ ರಹ್ಮಾನಿ, ಬದ್ರುದ್ದೀನ್ ರಹ್ಮಾನಿ, ಸಿದ್ದೀಕ್ ರಹ್ಮಾನಿ, ಬಶೀರ್ ರಹ್ಮಾನಿ, ಅಬ್ದುಲ್ಲಾ ರಹ್ಮಾನಿ, ಅಶ್ರಫ್ ರಹ್ಮಾನಿ, ಹನೀಫ್ ಮೌಲವಿ, ಎಸ್.ಕೆ.ಎಸ್.ಎಸ್.ಎಫ್ ಅದ್ಯಕ್ಷ ಜಮಾಲುದ್ದೀನ್.ಕೆ.ಎಸ್, ಹಮೀದ್ ನೆಟ್ಟಾರ್, ಹಿದಾಯ ಪಬ್ಲಿಕ್ ಸ್ಕೂಲ್ ಎಸ್.ಡಿ.ಎಂ.ಸಿ ಅದ್ಯಕ್ಷ ಅಬ್ದುಲ್ ರಹ್ಮಾನ್ ತಂಬಿನಮಕ್ಕಿ , ಕಲ್ಲೋಣಿ ಮದರಸ ಅದ್ಯಕ್ಷ ಇಬ್ರಾಹಿಂ.ಕೆ,
ಮುಂತಾದ ಗಣ್ಯರು ಉಪಸ್ಥಿತರಿದ್ದರು. ಸಮಸ್ತ ಸುನ್ನಿ ಮಹಲ್ ಫೆಡರೇಶನ್ ಅಧ್ಯಕ್ಷರಾದ ಜನಾಬ್ ಬಷೀರ್ ಕೆ.ಎ. ಸ್ವಾಗತಿಸಿ ಧನ್ಯವಾದಗೈದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.