ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ವಿ.ಟಿ.ಯು. ಮೌಲ್ಯಮಾಪನ ಕೇಂದ್ರವಾಗಿ ೨ನೇ ಬಾರಿಗೆ ಮುನ್ನಡೆ

Advt_Headding_Middle
Advt_Headding_Middle

ಸುಳ್ಯ ಎ.ಒ.ಎಲ್.ಇ. ಇದರ ಆಶ್ರಯದಲ್ಲಿರುವ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕೇಂದ್ರವಾಗಿ ೨ನೇ ಬಾರಿಗೆ ಮುನ್ನಡೆದಿದೆ. ಕರ್ನಾಟಕದಾದ್ಯಂತವಿರುವ ೨೧೯ ಕಾಲೇಜುಗಳಲ್ಲಿ ಒಟ್ಟು ೧೬ ಕಾಲೇಜುಗಳಲ್ಲಿ ಮೌಲ್ಯಮಾಪನ ಕೇಂದ್ರಗಳಿದ್ದು, ಅವುಗಳಲ್ಲಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜು ಕೂಡ ಒಂದಾಗಿದೆ. ಎ.ಒ.ಎಲ್.ಇ.ಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ರೇಣುಕಾ ಪ್ರಸಾದ್ ಕೆ.ವಿ.ಯವರು ನಮ್ಮ ಕಾಲೇಜಿನ ಮೌಲ್ಯಮಾಪನ ಕೇಂದ್ರವನ್ನು ಆಧುನೀಕರಿಸಿ, ಸುಸಜ್ಜಿತ ಕೇಂದ್ರವಾಗಿ ವ್ಯವಸ್ಥೆಗೊಳಿಸಿರುವುದರಿಂದ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ೪ನೇ ಅತ್ಯುತ್ತಮ ಮೌಲ್ಯಮಾಪನ ಕೇಂದ್ರವಾಗಿ ಗುರುತಿಸಿಕೊಂಡಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಎ. ಜ್ಞಾನೇಶ್ ತಿಳಿಸಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.