ಎಡಮಂಗಲ ಆಮಂತ್ರಣ ಪತ್ರಿಕೆ ಬಿಡುಗಡೆ

Advt_Headding_Middle
Advt_Headding_Middle

ಎಡಮಂಗಲ ಶ್ರೀ ಪಂಚಲಿಂಗೇಶ್ವರ ದೇವರು ಹಾಗೂ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಧರ್ಮಸ್ಥಳದಲ್ಲಿ ರಾಜರ್ಷಿ ಡಾ ಡಿ ವಿರೇಂದ್ರ ಹೆಗ್ಗೆಡೆಯವರ ದಿವ್ಯ ಹಸ್ತದಿಂದ ಜ.೧೫ರಂದು ಬಿಡುಗಡೆ ಕಾರ‍್ಯಕ್ರಮ ನಡೆಯಿತು.
ಈ ಶುಭ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಮರಕ್ಕಡ ,ಕಾರ‍್ಯದರ್ಶಿ ಎಚ್.ಎಸ್.ತ್ಯಾಗರಾಜು ಹೊಸಮನೆ, ಉಪಕೋಶಧಿಕಾರಿ ಗಿರೀಶ್ ನಡುಬೈಲು, ವ್ಯವಸ್ಥಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಹರಿ ನೂಚಿಲ, ಸದಸ್ಯರಾದ
ರವೀಂದ್ರ ದೇರಳ,ಶ್ರೀಮತಿ ಎಸ್.ಎಸ್ ಮಹಾದೇವಿ ಏನಡ್ಕ, ಶ್ರೀ ಕ್ಷೆ.ಧ.ಗ್ರಾ.ಯೋ (ರಿ) ಒಕ್ಕೂಟ ಪಂಜ ವಲಯದ ಮೇಲ್ವಿಚಾರಕರಾದ ಶ್ರೀಮತಿ ಭಾಗೀರಧಿ ಎಡಮಂಗಲ “ಬಿ” ಒಕ್ಕೂಟದ ಸೇವಾ ಪ್ರತಿನಿಧಿ ರಾಮಣ್ಣ ಬಳ್ಳಕ್ಕಬೆ “ಬಿ”ಒಕ್ಕೂಟದ ಅಧ್ಯಕ್ಷರಾದ ನವಿನ್ ಕೂಟಾಜೆ, ಎಲ್ಯಣ್ಣ ಗೌಡ ಜಾಲ್ತಾರು, ಪ್ರವೀಣ್ ಪರ್ಲ, ಹೊನ್ನಪ್ಪ ಮಾಲೆಂಗ್ರಿ, ನಾರ್ಣಪ್ಪ ದೋಳ್ತಿಲ, ಅಶೋಕ್ ಮಣಿಲ, ಪರಮೇಶ್ವರ ಕಜೆ, ಅನಂತ ಪದ್ಮನಾಭ ಪರ್ಲ, ಕುಶಾಲಪ್ಪ ಗೌಡ ಹೊಳೆಕರೆ, ಜಗದೀಶ ಮರೋಳಿ ಮತ್ತು ಸ್ಟುಡಿಯೋ ಜಯರಾಮ ಬಳಕ್ಕಬೆ ಉಪಸ್ಥಿತರಿದ್ದರು.
ದುಗ್ಗಲಡ್ಕ ೨೨ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಸಮ್ಮೇಳನ ಸಂಘಟಕರೊಂದಿಗೆ ಸಂವಾದ
ದುಗ್ಗಲಡ್ಕದಲ್ಲಿ ನಡೆದ ೨೨ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆಯವರು ಜ. ೧೫ ರಂದು ದುಗ್ಗಲಡ್ಕದ ಮಿತ್ರಯುವಕ ಮಂಡಲ ಸಭಾಭವನದಲ್ಲಿ ಸಾಹಿತ್ಯ ಸಮ್ಮೇಳನದ ಸಂಘಟಕರೊಂದಿಗೆ ಸಂವಾದ ನಡೆಸಿದರು.
ಸಮ್ಮೇಳನದ ಯಶಸ್ಸಿನ ಬಗ್ಗೆ ಸಂಘಟಕರಿಗೆ ಕೃತಜ್ಞತೆ ಸಲ್ಲಿಸಿದ ಅವರು ಸಮ್ಮೇಳನ ಅದ್ದೂರಿ ಹಾಗೂ ವ್ಯವಸ್ಥಿತವಾಗಿ ಮೂಡಿ ಬಂದಿದೆ. ಇದೊಂದು ಮಾದರಿ ಸಮ್ಮೇಳನವಾಗಿ ಹೊರಹೊಮ್ಮಿದೆ. ಸಮ್ಮೇಳನದಲ್ಲಿ ನಡೆದ ವಿಚಾರ ಗೋಷ್ಠಿ, ಕವಿಗೋಷ್ಠಿ ನುಡಿನಮನ ಅಲ್ಲಿದೆ ವಿಶಿಷ್ಠವಾದ ಮಕ್ಕಳ ಗೋಷ್ಠಿ ಅದ್ಭುತವಾಗಿ ನಡಿದಿದೆ. ಒಟ್ಟಾರೆಯಾಗಿ ಯಶಸ್ವಿ, ಸಮ್ಮೇಳವಾಗಿದೆ ಎಂದರು.
ಸಮ್ಮೇಳನದ ನಿರ್ಣಯಗಳಾದ ಸಾಹಿತಿ ನಿರಂಜನದ ಹೆಸರಿನಲ್ಲಿ ಸುಳ್ಯದಲ್ಲಿ ಸಾಂಸ್ಕೃತಿಕ ರಂಗಮಂದಿರ ನಿರ್ಮಾಣ ಕಾರ್ಯಕ್ಕೆ ತ್ವರಿತವಾಗಿ ಕಾರ್ಯೊನ್ಮುಖವಾಗುವ ಹಿನ್ನೆಲೆಯಲ್ಲಿ ಸ್ಥಳ ಗುರುತಿಸುವ ಕೆಲಸವನ್ನು ಸುಳ್ಯ ಕ.ಸಾ.ಪ ಮಾಡಬೇಕಿದೆ. ಇಲಾಖೆಯ ಮತ್ತು ಸರಕಾರದ ಮಟ್ಟದಲ್ಲಿ ಅನುಷ್ಠಾನ ಗೂಳಿಸುವ ಕಾರ್ಯಕ್ಕೆ ನಾನು ಪ್ರಯತ್ನ ಮಾಡುತ್ತೇನೆ.
ಸುಳ್ಯದ ಕನ್ನಡಭವನವನ್ನು ಮೇಲ್ಧರ್ಜೆಗೇರಿಸಿ ಸುಸಜ್ಜಿತವಾದ ಗ್ರಂಥಾಲಯ ಸ್ಥಾಪಿಸುವ ಕೆಲಸವನ್ನು ಮಾಡಲಾಗುವುದು ಅಲ್ಲದೆ ಸುಳ್ಯ ತಾಲೂಕಿನ ಶಾಲೆಗಳಲ್ಲಿ ಕನ್ನಡದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡುವ ಕೆಲಸ ಕಾರ್ಯವನ್ನು ಮಾಡಬೇಕಿದೆ ಎಂದರು. ತಾಲೂಕಿನ ಗಡಿನಾಡ ಶಾಲೆಗಳಲ್ಲಿ ಹೆಚ್ಚು ಕನ್ನಡ ಶಿಕ್ಷಕರನ್ನು ನೇಮಕ ಮಾಡುವುದು ಒತ್ತಾಯ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸುಳ್ಯ ಕ.ಸಾ.ಪ ಅಧ್ಯಕ್ಷ ಡಾ/ ಹರಪ್ರಸಾದ್ ತುದಿಯಡ್ಕ ಕ.ಸಾ.ಪ ಗೌರವ ಕಾರ್ಯದರ್ಶಿ ಚಂದ್ರಶೇಖರ ಪೇರಾಲು, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಟಿ ವಿಶ್ವನಾಥ ಅನಿಸಿಕೆ ವ್ಯಕ್ತಪಡಿಸಿದರು. ಸುಳ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಪ್ರಧಾನ ನಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ, ಕೋಶಾಧಿಕಾರಿ ಸಿರಿಲ್ ಡಿಸೋಜ ಉಪಸ್ತಿತರಿದ್ದರು.
ಸ್ವಾಗತ ಸಮಿತಿಯ ಸದಸ್ಯರಾದ ನಾರಾಯಣ ಟೈಲರ ದುಗ್ಗಲಡ್ಕ, ಭಾಗೀಶ್ ಕೆ.ಟಿ. ಗಿರಿಧರ ನಾಯರ್ ಹಿತ್ಲು, ಸುರೇಶ್ ನಾಯಕ್, ಸುರೇಶ್ ಭಟ್(ಅಂಬಾವನ), ದಿನೇಶ್ ಮೂಡೆಕಲ್ಲು, ಧನಂಜಯ ಕಲ್ಮಡ್ಕ, ಲಿಂಗಪ್ಪ ಮೂಡೆಕಲ್ಲು, ಸೀತಾರಾಮ ಕಲ್ಮಡ್ಕ, ಶ್ರೀಮತಿ ನವ್ಯ ದಿನೇಶ್, ಶ್ರೀಮತಿ ಪ್ರಿಯಾ ಸದಾನಂದ, ಶ್ರೀಮತಿ ವಾರಿಜ ಕೂರಗಪ್ಪ, ಶ್ರೀಮತಿ ಕಲಾವತಿ, ಪ್ರದೀಪ್ ಮೂಡೆಕಲ್ಲು, ಚೇತನ ಕಲ್ಮಡ್ಕ, ರಂಜಿತ್ ಕಲ್ಮಡ್ಕ, ಮಾಲತಿ ಕಲ್ಮಡ್ಕ, ಉಜಾರು ದುಗ್ಗಲಡ್ಕ, ಶಿವರಾಮಗೌಡ ಪಾನತ್ತಿಲ, ಆನಂದಗೌಡ ನೀರಬಿದಿರೆ, ಮಾಧವ ನಾಯ್ಕ ನೀರಬಿದಿರೆ, ಬಾಲಕೃಷ್ಣ, ನೀರಬಿದಿರೆ, ರೋಹಿತ್ ಎಸ್. ಎನ್. ಜಯಶೀಲಾ ದುಗ್ಗಲಟ್ಕ, ಮನೋPಜ್ ಪಾನತ್ತಿಲ, ಕೃಷ್ಣಸ್ವಾಮಿ ಕಂದಡ್ಕ, ಚಂದ್ರನ್ ಕೂಟೇಲು, ಅರುಣಾಚಷಿ ಕೂಟೇಲು, ವಾರಿಜಾ ಚಂದ್ರಶೇಖರ, ಚಿದಾನಂದ ಕೊಕುಳಿ, ಜಯಲತಾ ನೀರಬಿದಿರೆ, ಹರ್ಷವರ್ದನ ಮೂಡೆಕಲ್ಲು ಜುಭೇರ್ ಕೊಳಂಜಕೋಡಿ, ಅದ್ದು ಕೊಳಂಜಿಕೋಡಿ, ಸಂಜೀವ ಪೂಜಾರಿ ಮೂಡೆಕಲ್ಲು, ಕಾಂತಪ್ಪಪೂಜಾರಿ ಮೂಡೆಕಲ್ಲು ಭಾಗವಹಿಸಿದ್ದರು.
ಸಿರಿಲ್ ಡಿಸೋಜ ಸ್ವಾಗತಿಸಿ, ಜಯರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಎಡಮಂಗಲ: ಭಕ್ತಾಧಿಗಳ ಸಭೆ ಆಮಂತ್ರಣ ಪತ್ರಿಕೆ ಬಿಡುಗಡೆ
ಎಡಮಂಗಲ ಶ್ರೀಪಂಚಲಿಂಗೇಶ್ವರ ಶ್ರೀದುರ್ಗಾ ಪರಮೇಶ್ವರಿ ದೇವಸ್ಥಾನಗಳು ಜೀರ್ಣೋದ್ದಾರಗೊಂಡು ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಧರ್ಮಸ್ಥಳದಲ್ಲಿ ಬಿಡುಗಡೆಗೊಂಡು ಜ. ೧೬ ರಂದು ಭಕ್ತಾದಿಗಳ ಸಭೆಯಲ್ಲಿ ಆಮಂತ್ರಣ ಪತ್ರಿಕೆ ವಿತರಿಸಿ ತಾಲೂಕಿನಾದ್ಯಂತ ವಿತರಿಸುವುದು ಮತ್ತು ಪದಾಧಿಕಾರಿಗಳ ಜವಾಬ್ದಾರಿಯನ್ನು ಮಾಹಿತಿ ಮೂಲಕ ತಿಳಿಸಲಾಯಿತು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ವಿವಿದ ಪದಾದಿಕಾರಿಗಳು ಪತ್ರಿಕಾ ಪ್ರತಿನಿಧಿಗಳು, ವ್ಯವಸ್ಥಾಪನ ಸಮಿತಿಗಳು, ಜೀರ್ಣೋದ್ದಾರ ಸಮಿತಿಗಳು ಊರ ಹಾಗೂ ಪರ ಊರ ಭಕ್ತಾಧಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.