HomePage_Banner
HomePage_Banner
HomePage_Banner
HomePage_Banner

ಪಯನೀರ್ ಪಬ್ಲಿಕ್ ಸ್ಕೂಲ್‌ನಲ್ಲಿ ವಾರ್ಷಿಕೋತ್ಸವ ಮತ್ತು ಸ್ಥಾಪಕರ ದಿನಾಚರಣೆ

ಜ.೧೩ರಂದು ಜಾಲ್ಸೂರಿನ ಪಯನೀರ್ ಪಬ್ಲಿಕ್ ಸ್ಕೂಲ್‌ನಲ್ಲಿ ಸ್ಥಾಪಕರ ದಿನಾಚರಣೆ ಹಾಗೂ ವಾರ್ಷಿಕೋತ್ಸವ ಕಾರ್ಯಕ್ರಮವು ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಡಾ| ರಘು ರಾಜೀವಗಾಂಧಿ ಆರೋಗ್ಯವಿಜ್ಞಾನ ವಿಶ್ವವಿದ್ಯಾಲಯದ ಸನೇಟ್ ಸದಸ್ಯರು ಭಾಗವಹಿಸಿದ್ದರು.

ನಮ್ಮ ಸಮಾಜದಲ್ಲಿ ಎಲ್ಲಾ ವರ್ಗ, ಜಾತಿಯ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಆಡಳಿಯ ಮಂಡಳಿಯ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು. ವಿದ್ಯಾರ್ಥಿಗಳ ಸಾಧನೆಗಳ ವರದಿಯನ್ನು ಮುಖ್ಯೋಪಾಧ್ಯಾಯಿನಿ ಆರತಿ ಓದಿದರು . ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕಿಯರನ್ನು ಅಭಿನಂದಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ವಿದ್ಯಾಸಂಸ್ಥೆಯ ಸ್ಥಾಪಕಾಧ್ಯಕ್ಷರಾದ ಅಬ್ದುಲ್ ರಜಾಕ್, ಸುಳ್ಯ ಪುರಸಭಾ ಸದಸ್ಯರಾದ ಸಂಶುದ್ದೀನ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಇಬ್ರಾಹಿಂ, ಉಪಾಧ್ಯಕ್ಷರಾದ ಕೃಷ್ಣಪ್ಪ, ಕರ್ನಾಟಕ ರಾಜ್ಯ ವಕ್ಪ್ ಸಲಹಾ ಸಮಿತಿ ಸದಸ್ಯರು ಹಾಗೂ ಅರಾಫಾ ವಿದ್ಯಾಲಯದ ಟ್ರಸ್ಟಿಯವರಾದ ನಜೀರ್‌ಮಠ, ಆಡಳಿತ ಮಂಡಳಿಯ ಕಾರ್ಯದರ್ಶಿಯಾದ ರನೀಷಾ, ಟ್ರಸ್ಟಿಯಾದ ಧ್ಯಾನೀಷ್, ಶಾಲಾ ಆಡಳಿತಾಧಿಕಾರಿ ರಾಜಾರಾಮ ನೆಲ್ಲಿತ್ತಾಯ, ಮುಖ್ಯೋಪಾದ್ಯಾಯಿನಿ ಆರತಿ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಜಾಲ್ಸೂರಿನ ಜನಪ್ರಿಯ ವೈದ್ಯರಾದ ಡಾ| ಕೃಷ್ಣಭಟ್ ಅವರನ್ನು ಸನ್ಮಾನಿಸಲಾಯಿತು. ನಂತರ ಕರಾಟೆಪಟು ರಾಜೇಶ್‌ರಿಂದ ತರಬೇತಿ ಪಡೆದ ಪಯನೀರ್ ವಿದ್ಯಾರ್ಥಿಗಳಿಂದ ಕರಾಟೆ ಪ್ರದರ್ಶನ ನಡೆಯಿತು. ಬಳಿಕ ಶಾಲಾ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಈ ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಶಬಿನಾ, ಸುಶ್ಮಿತಾ, ಸಂಧ್ಯಾ, ಜ್ಯೋತಿಲಕ್ಷ್ಮೀ ಹಾಗೂ ಸುಧಾರಣೆ ಪ್ರಾರ್ಥನೆಯನ್ನು ಹಾಡಿದರು. ನಜೀರ್‌ಮಠರವರು ಅತಿಥಿಗಳನ್ನು ಸ್ವಾಗತಿಸಿದರು. ಆಡಳಿತಾಧಿಕಾರಿ ರಾಜಾರಾಮ ನೆಲ್ಲಿತ್ತಾಯ ಪ್ರಾಸ್ತಾವಿಕ ಭಾಷಣವನ್ನು ಮಾಡಿ, ಶಾಲೆ ಬೆಳೆದು ಬಂದ ರೀತಿಯನ್ನು ವಿವರಿಸಿದರು. ಟ್ರಸ್ಟಿಯಾದ ಇಕ್ಬಾಲ್‌ರವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಟ್ರಸ್ಟಿಯಾದ ಧ್ಯಾನೀಷ್‌ರವರು ಧನ್ಯವಾದಗೈದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.