Breaking News

ಅಲ್ಪಸಂಖ್ಯಾತ ಕಾಂಗ್ರೇಸ್‌ ಸಮಿತಿಯಲ್ಲಿ ವಿವಿಧ ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೇಸ್ ಭವನ ಮಲ್ಲಿಕಟ್ಟೆ ಮಂಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್‌ಕುಮಾರ್, ಮಂಗಳೂರು ಶಾಸಕರಾದ ಜೆ.ಆರ್ ಲೊಬೋ, ದಕ್ಷಿಣ ಕನ್ನಡ ಜಿಲ್ಲಾ ಅಲ್ಪ ಸಂಖ್ಯಾತ ಕಾಂಗ್ರೆಸ್‌ನ ಅಧ್ಯಕ್ಷರಾದ ಹಾಜಿ. ಎನ್.ಎಸ್ ಕರೀಂ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪ ಸಂಖ್ಯಾತ ಕಾಂಗ್ರೆಸ್ ಘಟಕದ ಕರಾವಳಿ ಭಾಗದ ಅಧ್ಯಕ್ಷರಾದ ಸಲೀಂ ಉಲ್ಲಾಳ, ದ.ಕ. ಜಿಲ್ಲಾ ಅಲ್ಪ ಸಂಖ್ಯಾತ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಲಾರೆನ್ಸ್ ಡಿ.ಸೋಜಾ ಮೊದಲಾದವರು ಸಮುಖದಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಜಿಲ್ಲಾ ಮಟ್ಟದ ಸಭೆಯಲ್ಲಿ ವಿವಿಧ ಘಟಕಗಳ ಪದಾಧಿಕಾರಿಗಳಿಗೆ ಅನುಮತಿ ಆದೇಶ ಪತ್ರವನ್ನು ನೀಡಲಾಯಿತು.

ಆಯ್ಕೆಯಾದ ಪದಾಧಿಕಾರಿಗಳ ವಿವರ ಇಲ್ಲಿದೆ

ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಪಡ್ಪಿನಂಗಡಿ
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಿತಿಯ ಉಪಾಧ್ಯಕ್ಷರಾಗಿ ಮೂಸ ಕುಂಞಿ ಪೈಂಬಚ್ಚಲ್

ಜಿಲ್ಲಾ ಕಾರ್ಯದರ್ಶಿಯಾಗಿ ಜಮಲೂದ್ದೀನ್ ಬೆಳ್ಳಾರೆ

ಜಿಲ್ಲಾ ಕಾಂಗ್ರೇಸ್ ಅಲ್ಪಸಂಖ್ಯಾತ ಘಟಕದ ಸದಸ್ಯರಾಗಿ ಅಬ್ದುಲ್ ರಹೀಮನ್ ಮೊಗರ್ಪಣೆ ಹಾಗೂ

ಎಸ್.ಎಂ ಮಹಮ್ಮದ್ ಬಶೀರ್ ಪೈಚಾರು ಶಾಂತಿನಗರ ಇವರುಗಳು ಅಧಿಕಾರ ಪತ್ರವನ್ನು ಪಡೆದರು.

ಸುಳ್ಯ ಬ್ಲಾಕ್ ಅಲ್ಪಸಂಖ್ಯಾತ ಕಾಂಗ್ರೆಸ್ ಫಟಕದ ಪ್ರಧಾನ  ಕಾರ್ಯದರ್ಶಿಯಾಗಿ ಜಲೀಲ್ ಬೆಳ್ಳಾರೆ ಅಧಿಕಾರವನ್ನು ಪಡೆದುಕೊಂಡರು
ಸುಳ್ಯ ಬ್ಲಾಕ್ ಅಲ್ಪಸಂಖ್ಯಾತ ಸಮಿತಿಯ ಅಧ್ಯಕ್ಷರಾಗಿ ಜಿ.ಕೆ ಸಾಹುಲ್ ಹಮೀದ್ ಅವರು ಅಧಿಕಾರ ಪತ್ರವನ್ನು ಪಡೆದು ಅಧಿಕಾರವನ್ನು ಸ್ವೀಕರಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.