ಹೇಗಿದೆ ಗೊತ್ತಾ ಸುಳ್ಯ ನಗರ ಪಾರ್ಕಿಂಗ್

Advt_Headding_Middle
Advt_Headding_Middle

ಸುಳ್ಯ ನಗರದ ರಸ್ತೆಯ ಅಗಲ ಈಗಾಗಲೇ ಕಿರಿದಾಗಿದ್ದು, ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಮುಖ್ಯ ರಸ್ತೆಯಲ್ಲೇ ಪಾರ್ಕಿಂಗ್ ಇದ್ದು ಶಿರಾಡಿ ಘಾಟ್ ರಸ್ತೆಯು ಜ. ೨೦ರಿಂದ ಮುಚ್ಚಿರುವ ಹಿನ್ನೆಲೆ ವಾಹನದಟ್ಟನೆ ಮತ್ತು ಭಾರಿ ವಾಹನಗಳು ಚಲಿಸುವ ಕಾರಣ, ಜನರಿಗೆ ರಸ್ತೆ ದಾಟುವ ಸಮಸ್ಯೆಯೊಂದಿಗೆ, ನಮ್ಮ ಮುಖ್ಯರಸ್ತೆಯಲ್ಲಿ ಎಚ್ಚರಿಕೆಯಿಂದ ಜನಸಾಮಾನ್ಯರು, ವೃದ್ಧರು, ಮಹಿಳೆಯರು, ಮಕ್ಕಳು ಓಡಾಡುವಂತಾಗಿದೆ. ಇನ್ನು ಪುಟ್‌ಪಾತ್‌ನಲ್ಲಿ ಹೊಗೋಣವೇಂದರೆ, ಪುಟ್‌ಪಾತ್‌ನ ಗತಿ ಅದೋಗತಿ. ತುಂಡಾಗಿರುವ ಪುಟ್‌ಪಾತ್‌ನಲ್ಲಿ ಸರಾಗವಾಗಿ ನಡೆಯಲು ಕಷ್ಟಕರವಾಗುತ್ತಿದೆ. ಇದರಲ್ಲಿ ಬಿದ್ದು ಗಾಯವಾಗುವುದರೊಂದಿಗೆ, ಪ್ರಾಣಹಾನಿಯಾಗುವ ಸಾಧ್ಯತೆಯೂ ಹೆಚ್ಚಿದೆ.
ನಗರಾಡಳಿತ ಮತ್ತು ಪೊಲೀಸ್ ಇಲಾಖೆಯವರು ಮುಖ್ಯರಸ್ತೆಯಲ್ಲಿ ವಾಹನ ನಿಲುಗಡೆಯನ್ನು ನಿಷೇದಿಸಿ, ಅಡ್ಡರಸ್ತೆಗಳಲ್ಲಿ ಹಾಗೂ ಖಾಲಿ ಜಾಗವಿರುವಲ್ಲಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡುವ ಕುರಿತು ಸೂಕ್ತ ಕ್ರಮವನ್ನು ಕೈಗೊಳ್ಳಬೇಕಿದೆ. ಇಲ್ಲದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಅಪಘಾತ ಹಾಗೂ ಪ್ರಾಣ ಹಾನಿ ಸಂಭವಿಸಿದರೆ, ಇದಕ್ಕೆಲ್ಲ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಆಡಳಿತವೇ ನೇರಹೊಣೆಯಾಗಿರುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.