Breaking News

ಪುತ್ತೂರು ದೇವಳದಲ್ಲಿ ಪಲ್ಲಕ್ಕಿ ಉತ್ಸವ – ಪ್ರಶಾಂತ ರೈ ಮರುವಂಜಯವರಿಂದ ಸೇವೆ

Advt_Headding_Middle
Advt_Headding_Middle

ಪುತ್ತೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಮಣದ ಅಂಗವಾಗಿ ನಡೆಯುವ ವಿಶೇಷ ಸೇವೆಯಾದ ಪಲ್ಲಕ್ಕಿ ಉತ್ಸವ ಸೇವೆಯನ್ನು ಕಳೆದ ೪ ವರ್ಷಗಳಿಂದ ಸತತವಾಗಿ ಪ್ರಶಾಂತ ರೈ ಮರುವಂಜಯವರು ನಡೆಸಿಕೊಂಡು ಬಂದಿದ್ದಾರೆ. ಇವರು ಕರ್ನಾಟಕ ರಾಜ್ಯ ಭ್ರಷ್ಟಾಚಾರ ಹಾಗೂ ಅಪರಾಧ ಪತ್ತೆದಳದ ರಾಜ್ಯಾಧ್ಯಕ್ಷರಾಗಿದ್ದವರು.
ಈ ಸಂದರ್ಭದಲ್ಲಿ ಪುತ್ತೂರಿನ ಶಾಸಕಿ ಶಕುಂತಲಾ ಶೆಟ್ಟಿ ಪುತ್ತೂರು ಸಬ್ ಇನ್ಸ್‌ಪೆಕ್ಟರ್ ಅಜಯ ಗೌಡ, ಕೆ.ಪಿ.ಸಿ.ಸಿ ಸದಸ್ಯರಾದ ಡಾ.ರಘು, ಸುಳ್ಯ ತಾ. ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎನ್. ಜಯಪ್ರಕಾಶ್ ರೈ, ಮಹಾಬಲ ಮಾರ್ಲ, ಹರಿಪ್ರಸಾದ್ ರೈ, ದಿನೇಶ್ ಕೈಕಾರ, ಬಾಲಕೃಷ್ಣ ರೈ ಮಹಿಳಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗೀತಾ ಚಂದ್ರಶೇಖರ್ ಕೋಲ್ಚರ್,ಪ್ರಶಾಂತ ರೈ ಯವರ ತಂದೆ ವಿಶ್ವನಾಥ ರೈ( ರಾಷ್ಟ್ರ ಮಟ್ಟದ ಕ್ರೀಡಾಪಟು, ತಾಯಿ ಹೇಮಲತ ವಿ.ರೈ, ಪತ್ನಿ ಪ್ರವೀಣ್ ಪಿ. ರೈ ಮೊದಲಾದವರು ಧಾರ್ಮಿಕ ಕೈಂಕರ್ಯದಲ್ಲಿ ಭಾಗವಹಿಸಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.