HomePage_Banner
HomePage_Banner
HomePage_Banner
HomePage_Banner

ಅರಂತೋಡು : ಕಸದ ತೊಟ್ಟಿ ತುಂಬಿ ಹೊರಚೆಲ್ಲಿದೆ

ಅರಂತೋಡು ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜು ಸ್ವಚ್ಚತೆಯ ಬಗ್ಗೆ ನರಂತರ ಜಾಗೃತಿಯನ್ನು ನೀಡುತ್ತಲೆ ಇದ್ದರೂ ಜನಸಾಮಾನ್ಯರಿಗೆ ಸ್ವಚ್ಚತೆಯ ಮಹತ್ವ ಇನ್ನೂ ಮುಟ್ಟಿದಂತಿಲ್ಲ. ಪಂಚಾಯತ್‌ನವರು ಪೇಟೆಯಲ್ಲಿ ಅಳವಡಿಸಿದ ಕಸದ ತೊಟ್ಟಿ ತುಂಬಿ ಹೋಗಿ ಹೊರಚೆಲ್ಲುವ ತನಕ ಅಲ್ಲಿಗೆ ತ್ಯಾಜ್ಯವನ್ನು ಎಸೆದು ಹೋಗುತ್ತಿದ್ದಾರೆ.

ಅರಂತೋಡು ಪೇಟೆಯ ತುಂಬಾ ಸ್ವಚ್ಚತೆಯ ಮಹತ್ವವನ್ನು ಸಾರುವ ಫಲಕವನ್ನು ಅಳವಡಿಸಲಾಗಿದೆ. ಪಂಚಾಯತ್ ವತಿಯಿಂದಲೂ ಅಲ್ಲಲ್ಲಿ ತೊಟ್ಟಿ ಅಳವಡಿಸಿ ಒಂದೇ ಕಡೆ ಕಸ ಹಾಕುವಂತೆ ಮಡಲಾಗಿದೆ. ಕಸದ ತೊಟ್ಟಿಯಲ್ಲಿ ತುಂಬಿರುವ ಕಸವನ್ನು ಪಂಚಾಯತ್‌ನವರು ವಿಲೇವಾರಿ ಮಾಡಬೇಕಿದ್ದರೂ, ಮತ್ತೆ ಮತ್ತೆ ಅದಕ್ಕೆ ಕಸ ತಂದು ಹಾಕುವ ಸಾರ್ವಜನಿಕರೂ ಸ್ವಚ್ಚತೆಯ ಮಹತ್ವ ತಿಳಿದುಕೊಳ್ಳುವುದು ಬೇಡವೇ? ಅದು ಪಂಚಾಯತ್‌ನವರ ಜವಾಬ್ದಾರಿ ಎಂದು ಹೇಳುತ್ತಾ ಕುಳಿತರೆ ಸ್ವಚ್ಚತೆ ಸಾಧ್ಯವೇ? ಪೇಟೆಯ ವರ್ತಕರು ತಮ್ಮಲ್ಲಿನ ಕಸವನ್ನು ತೊಟ್ಟಿಗೆ ಎಸೆಯದೆ ತಮ್ಮಲ್ಲೇ ವಿಲೇವಾರಿ ಮಾಡಿ ಸ್ವಚ್ಚತೆಯ ಜೊತೆ ಕೈಜೋಡಿಸುವುದು ಒಳಿತಲ್ಲವೇ?
ಕಸದ ತೊಟ್ಟಿಯಲ್ಲಿ ತುಂಬಿ ತುಳುಕುತ್ತಿರುವ ತ್ಯಾಜ್ಯವನ್ನು ಬೀದಿ ನಾಯಿಗಳು, ಜಾನುವಾರುಗಳು ಎಳೆದಾಡಿ ಸುತ್ತೆಲ್ಲ ಹರಡುತ್ತಿದೆ. ಇದರಿಂದ ಅನಾರೋಗ್ಯಕ್ಕೆ
ಕಾರಣವಾಗುವ ಸೊಳ್ಳೆ, ಕ್ರೀಮಿ, ಕೀಟಗಳು ಉತ್ಪತ್ತಿಯಾಗುತ್ತಿದ್ದು, ಪರಿಸರಕ್ಕೆ ಮಾರಕವಾಗುವ ಲಕ್ಷಣಗಳಿವೆ. ಸ್ವಚ್ಚತೆಯ ಕೆಲಸ ಪಂಚಾಯತ್, ಆಡಳಿತ, ವಿದ್ಯಾಸಂಸ್ಥೆಗಳ ಮೂಲಕ ಆಗಬೇಕಾಗಿದ್ದಲ್ಲ, ಪ್ರತಿಯೊಬ್ಬನ ಮನಸ್ಸಿನ್ಲಲೂ ಸ್ವಚ್ಚತೆಯ ಕುರಿತು ಜಾಗೃತಿ ಆಗಬೇಕಾಗಿದೆ.

 

About The Author

Related posts

1 Comment

  1. Shivananda Kukkambala

    ಅಭಿವೃದ್ಧಿ ಕಾಮಗಾರಿಗೆ ಬಳಸಬೇಕಾದ ಹಣ ಕಸದ ತೊಟ್ಟಿ ಖಾಲಿ ಮಾಡಲು ಬಳಸಬೇಕಾದಗ ಬೇಸರವಾಗುತ್ತದೆ. ಸಾರ್ವಜನಿಕರು ಕಸವನ್ನು ಮೂಲದಲ್ಲಿ ಕಡಿಮೆ ಮಾಡಿದರೆ ಉತ್ತಮ.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.