ಸೈಡು ಕೊಡಲು ಹೋದರೆ ಹೊಂಡಕ್ಕೆ ಬೀಳುವುದು ಗ್ಯಾರಂಟಿ – ಅರಂತೋಡು ಮರ್ಕಂಜ ರಸ್ತೆಗೆ ಆಗಬೇಕಿದೆ ಅಪಾಯದಿಂದ ಮುಕ್ತಿ

Advt_Headding_Middle
Advt_Headding_Middle
Advt_Headding_Middle

ಅರಂತೊಡು ಅಡ್ತಲೆ ಮರ್ಕಂಜ ಮೂಲಕ ಎಲಿಮಲೆಗಾಗಿ ಹೋಗುವ ಜಿ.ಪಂ ರಸ್ತೆ ಕಿರಿದಾಗಿದ್ದು, ಎದುರು ಬದುರಾಗಿ ವಾಹನ ಬಂದಾಗ ಸೈಡು ಕೊಡಲು ಜಾಗ ಇಲ್ಲದೆ ವಾಹನ ಚಾಲಕರು ಅಪಾಯವನ್ನು ಎದುರಿಸುತ್ತಿದ್ದಾರೆ. ರಸ್ತೆಯಂಚಿನ ಡಾಮಾರು ಕಿತ್ತು ಹೋಗಿ ರಸ್ತೆಯ ಇಕ್ಕೆಲಗಳಲ್ಲಿ ಆಳವಾದ ಹೊಂಡ ನಿರ್ಮಾಣವಾಗಿದ್ದು, ವಾಹನ ಇಳಿಸಲೂ ಆಗದೆ, ಮುಂದಕ್ಕೆ ಹೋಗಲೂ ಆಗದ ಅತಂತ್ರ ಸ್ಥಿತಿ ವಾಹನ ಚಾಲಕರಾದ್ದಗಿದೆ.
ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೇ ಸುಭ್ರಮಣ್ಯಕ್ಕೆ ಹೋಗಿ ಬರಲು ಅರಂತೋಡು, ಮರ್ಕಂಜ, ಎಲಿಮಲೆ ರಸ್ತೆ ಅತ್ಯಂತ ಸಮೀಪದ ರಸ್ತೆಯಾಗಿದೆ, ಸುತ್ತು ಬಳಸಿ ಹೋಗಬೇಕಾದ ಅನಿವಾರ್ಯತೆ ಇಲ್ಲ. ಹಾಗಾಗಿ ಮಡಿಕೇರಿ, ಮೈಸೂರು, ಸುಬ್ರಮಣ್ಯಕ್ಕೆ ಬರುವವರು ಹಾಗೂ ಹೋಗುವವರು ಇದೇ ರಸ್ತೆಯಲ್ಲಿ ಸಾಗುತ್ತಿದ್ದಾರೆ. ವಾಹನಗಳ ಸಂಖೈಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ.
ಈ ರಸ್ತೆ ಮರ್ಕಂಜದಿಂದ ಎಲಿಮಲೆ ತನಕ ಪ್ರಯಾಣಕ್ಕೆ ಹೆಚ್ಚಿನ ತೊಂದರೆಯಿಲ್ಲ. ಆದರೆ ಅರಂತೋಡಿನಿಂದ ಮರ್ಕಂಜದ ತನಕ ರಸ್ತೆ ಅಪಾಯಕಾರಿಯೂ, ಬಹಳ ಇಕ್ಕಟ್ಟಾಗಿಯೂ ಇದೆ. ೬-೭ ವರ್ಷಗಳ ಹಿಂದೆ ಈ ರಸ್ತೆಯ ಡಾಮಾರೀಕರಣ ನಡೆದಿದ್ದು. ರಸ್ತೆ ಅಗಲವಾಗಿಯೂ ವಾಹನ ಸಂಚಾರಕ್ಕೆ ಯೋಗ್ಯವಾಗಿಯೂ ಇತ್ತು. ಆದರೆ ಮರ್ಕಂಜದ ಅಲವುದಾರೆ ಎಂಬಲ್ಲಿ “ಕಲ್ಲಿನ ಕೋರೆ” ಮಾಡಿ ಅಲ್ಲಿಂದ ದೊಡ್ಡ ದೊಡ್ಡ

ಲಾರಿಗಳ ಮೂಲಕ ಕಲ್ಲು ಸಾಗಾಟ ಮಾಡಿದರ ಪರಿಣಾಮ ರಸ್ತೆ ಸಂರ್ಪೂಣ ಹಾಳಾಗತೊಡಗಿತು. ರಸ್ತೆಯ ಎರಡೂ ಬದಿಗಳಲ್ಲಿ ಡಾಮಾರು ಕಿತ್ತು ಹೋಗಿ ಆಳವಾದ ಹೊಂಡಗಳು ನಿರ್ಮಾಣವಾಯಿತು. ಹೀಗಾಗಿ ರಸ್ತೆಯ ಅಗಲ ಕಿರಿದಾಗುತ್ತಾ ಈಗ ಎರಡು ವಾಹನಗಳು ಎದುರು ಬದುರಾಗಿ ದಾಟಿ ಮುಂದೆ ಹೋಗಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಸೈಡು ಕೊಡಲು ಹೋದರೆ ಹೊಂಡಕ್ಕೆ ಬಿದ್ದು ಅಪಾಯ ಕಟ್ಟಿಟ್ಟ ಬುತ್ತಿ ರಸ್ತೆ ಕೂಡ ತುಂಬಾ ತಿರುವಿನಿಂದ ಕೂಡಿದ್ದು ವಾಹನ ಎದುರಿನಿಂದ ಬರುವುದು ಗೊತ್ತಾಗದೆ ಸಾಕಷ್ಟು ಅನಾಹುತಗಳು ಈಗಾಗಲೆ ನಡೆದಿದೆ. ಕೂಡಲೇ ಜಿ. ಪಂ. ಇಂಜಿನಿಯರಿಂಗ್ ವಿಭಾಗದವರು ರಸ್ತೆಯ ಅಂಚಿಗೆ ಡಾಮಾರು ಹಾಕಿ ಎರಡು ವಾಹನಗಳು ದಾಟಿ ಹೋಗಲು ರಸ್ತೆ ಅಭಿವೃದ್ಧಿಪಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.