ಕೆರೆಮೂಲೆ ಪನ್ನೆಬೀಡು ಕಾಲುದಾರಿಯಲ್ಲಿ ಸಾಗಿದರೆ ಉಸಿರು ಗಟ್ಟಿಸುತ್ತದೆ ಕೊಳಚೆ ತ್ಯಾಜ್ಯ ನೀರು

Advt_Headding_Middle
Advt_Headding_Middle
Advt_Headding_Middle

ಕೆರೆಮೂಲೆಯಿಂದ ಪನ್ನೆಬೀಡಿಗೆ ಹೋಗುವ ಕಾಲುದಾರಿಯಲ್ಲಿ ಸುಮಾರು ಅರ್ಧ ಕಿಲೋಮೀಟರ್ ಉಸಿರು ಕಟ್ಟಿಕೊಂಡು ಹೋಗುವುದು ಅನಿವಾರ್ಯ. ಸಹಜವಾಗಿ ಉಸಿರಾಡಲು ಬಯಸುವಿರಾದರೆ ಅದು ಅದ್ಬುತವೇ ಸರಿ. ಅಷ್ಟರ ಮಟ್ಟಿಗೆ ಇಲ್ಲಿ ಹರಿಯುತ್ತಿರುವ ಕೊಳಚೆ ನೀರು ಪರಿಣಾಮ ಬೀರುತ್ತಿದೆ.

ಶ್ರೀ ಚೆನ್ನಕೇಶವ ದೇವಸ್ಥಾನದಿಂದ- ಭಗವತಿ ಬೀಡಿಗೆ ಹೋಗುವ ಈ ಕಾಲುದಾರಿ ಶತಮಾನಗಳಷ್ಟು ಹಿಂದಿನದ್ದು, ದೈವಗಳ ಭಂಡಾರ, ದೇವಸ್ಥಾನದ ಪುಣ್ಯಕಾರ್ಯಗಳ ಸಂದರ್ಭ ಇದೇ ಕಾಲುದಾರಿಯಲ್ಲಿ ಹೋಗಿ ಬರುವುದು. ರಥಬೀದಿಯ ರಸ್ತೆಯಿಂದ ಕೆಳಗೆ ಇಳಿಯುತ್ತಿದ್ದಂತೆ ಈ ಕಾಲುದಾರಿಯ ಒಂದು ಬದಿಯಲ್ಲಿ ಗಬ್ಬೆದ್ದು ವಾಸನೆ ಬರುವ ಕೊಳಚೆ ತ್ಯಾಜ್ಯ ನೀರು ಹರಿಯುತ್ತಿದೆ. ಕಾಲುದಾರಿಯ ಮೇಲ್ಭಾಗದ ಅಂಗಡಿ- ಮಳಿಗೆ, ಮನೆಗಳ ತ್ಯಾಜ್ಯ ನೀರನ್ನು ಚರಂಡಿಗೆ ಬಿಡುತ್ತಿರುವುದರಿಂದ ಇದೇ ಕಾಲುದಾರಿಯ ಬದಿಯಲ್ಲಿ ಕೋಳಚೆ ನೀರು ಹರಿಯುತ್ತಿದೆ.ಕಾಲುದಾರಿಯ ಇಕ್ಕೆಲಗಳಲ್ಲಿ ಸಾಕಷ್ಟು ಮನೆಗಳಿವೆ. ವಿದ್ಯಾರ್ಥಿನಿಲಯ( ಹಾಸ್ಟೆಲ್) ಕೂಡಾ ಸಮೀಪದಲ್ಲೇ ಇದೆ. ಇದೇ ದಾರಿಯಾಗಿ ದಿನಂಪ್ರತಿ ನೂರಾರು ಮಂದಿ ಹೋಗಿ ಬರುತ್ತಾರೆ. ಪನ್ನೆಬೀಡಿಗೆ ಹೋಗುವ ದಾರಿಯೂ ಇದೇ ಆಗಿದ್ದರೂ, ನಗರ ಪಂಚಾಯತ್‌ನವರು ಇಲ್ಲಿ ವ್ಯವಸ್ಥಿತ ಚರಂಡಿ ನಿರ್ಮಾಣ ಮಾಡಿ ಅದನ್ನು ಮುಚ್ಚುವ ಕೆಲಸ ಇನ್ನೂ ಮಾಡಿಲ್ಲ. ಸ್ಥಳೀಯ ವಾರ್ಡ್ ಸದಸ್ಯರು ಇದರ ಬಗ್ಗೆ ಕೊಡಲೇ ಗಮನಹರಿಸಿ, ಕಾಂಕ್ರೀಟ್ ಚರಂಡಿ ಮಾಡಿಸುವ ಜವಾಬ್ದಾರಿ ವಹಿಸಿಕೊಳ್ಳಬೇಕಿದೆ. ಮಾರಕ ಕಾಯಿಲೆಗಳನ್ನು ಸೃಷ್ಠಿಸುವ ಸೊಳ್ಳೆಗಳ ಆವಾಸ ಸ್ಥಾನವನ್ನು ಇಲ್ಲದಂತೆ ಮಾಡಿ ಸ್ವಚ್ಚ ಸುಳ್ಯದ ಸಂಕಲ್ಪಕ್ಕೆ ಕೈಜೋಡಿಸಬೇಕಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.