Breaking News

ಮಾರ್ಚ್ 12ರಂದು ಗೌಡ ಸಮುದಾಯ ಭವನದ ಉದ್ಘಾಟನೆ

Advt_Headding_Middle
Advt_Headding_Middle

ಗೌಡರ ಯುವ ಸೇವಾ ಸಂಘ ಸುಳ್ಯ ಹಾಗೂ ಗೌಡ ಸಮುದಾಯ ಭವನ ನಿರ್ಮಾಣ ಸಮಿತಿಯ ವತಿಯಿಂದ ಕೊಡಿಯಾಲ್ ಬೈಲುವಿನಲ್ಲಿ ನಿರ್ಮಿಸುತ್ತಿರುವ ಬೃಹತ್ “ಗೌಡ ಸಮುದಾಯ ಭವನವು” ಮಾ.೧೮ರಂದು ಉದ್ಘಾಟನೆಗೊಳ್ಳಲಿದೆ. ಮಾರ್ಚ್ ೮ ಗುರುವಾರದಂದು ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಮಾ.೧೨ರಂದು ಬೆಳಿಗ್ಗೆ ೧೦.೩೦ಕ್ಕೆ ಪ್ರಥಮ ಹಂತದ ಸಮುದಾಯ ಭವನವನ್ನು ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು ಮತ್ತು ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಳಿಸಲಿದ್ದಾರೆ.
ಅಂತಿಮ ಕೆಲಸ ಕಾರ್ಯಗಳು ನಡೆಯುತ್ತಿದ್ದು, ಭವನದ ಮೊದಲ ಹಂತದ ಮುಖ್ಯ ಸಭಾ ಭವನ, ಅದರ ಪಾಕ ಶಾಲೆ, ಭೋಜನ ಕೊಠಡಿಗಳನ್ನು ೨೦೧೮ ಮಾರ್ಚ್ ತಿಂಗಳಿನಲ್ಲಿ ಉದ್ಘಾಟನೆ ಮಾಡಲು ಗೌಡ ಸಂಘ ತೀರ್ಮಾನಿಸಿದೆ.
ಇದರ ಪ್ರಯುಕ್ತ ಸಂಘದ ವ್ಯಾಪ್ತಿಯಲ್ಲಿ ಬರುವ ೪೭ ಗ್ರಾಮಗಳಲ್ಲಿ ಸಮಾಜ ಭಾಂಧವರ ೧೦,೦೦೦ ಮನೆಗಳಿದ್ದು, ಈಗಾಗಲೇ ಮೂರು ಸಾವಿರ ಮನೆಯವರು ವಿವಿಧ ಹಂತದ ಧನ ಸಹಾಯವನ್ನು ನೀಡಿದ್ದಾರೆ. ಉಳಿದ ಮನೆಗಳಿಗೆ ಏಕಕಾಲದಲ್ಲಿ ದೇಣಿಗೆ ಸಂಗ್ರಹಕ್ಕಾಗಿ ಇದೇ ಜನವರಿ ೧೫ರಿಂದ -ಫೆಬ್ರವರಿ ೧೫ರ ತನಕ ೩೦ ದಿನಗಳ “ಗೌಡನಿಧಿ ಸಂಗ್ರಹಣಾ ಆಂದೋಲನ” ವನ್ನು ಹಮ್ಮಿಕೊಳ್ಳಲಾಗಿದೆ. ೪೭ ಗ್ರಾಮಗಳಿಗೆ ಈಗಾಗಲೇ ಉಸ್ತುವಾರಿ ನಿರ್ದೇಶಕರನ್ನು ನೇಮಿಸಿದ್ದು, ಅವರ ನೇತೃತ್ವದಲ್ಲಿ ಗ್ರಾಮ ಸಮಿತಿ, ಮಹಿಳಾ ಘಟಕ, ತರುಣ ಘಟಕಗಳ ಪದಾಧಿಕಾರಿಗಳ ನೇತೃತ್ವದಲ್ಲಿ ಈ ಆಂದೋಲನ ನಡೆಯಲಿದೆ.
ಸಮಾಜ ಬಾಂಧವರ ಆರ್ಥಿಕ ಶಕ್ತ್ಯಾನುಸಾರವಾಗಿ ದೇಣಿಗೆಯನ್ನು ಎರಡು ಹಂತದಲ್ಲಿ ನೀಡಲು ಅವಕಾಶವಿದ್ದು, ಇದಕ್ಕಾಗಿ ವಿವಿಧ ಮೊತ್ತದ ಕೂಪನ್‌ಗಳನ್ನು ಬಿಡುಗಡೆ ಮಾಡುತ್ತಿದ್ದೇವೆ. ಇನ್ನೊಂದು ಬಾರಿ ಮುಂದಿನ ನವೆಂಬರ್‌ನಲ್ಲಿ ಸಂಗ್ರಹಣ ಆಂದೋಲನ ನಡೆಯಲಿದೆ.
ಮಾರ್ಚ್‌ನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಆದಿಚುಂಚನಗಿರಿ ಕ್ಷೇತ್ರದ ಪೀಠಾಧಿಪತಿಗಳಾದ ಡಾ.ನಿರ್ಮಾಲಾನಂದ ಸ್ವಾಮೀಜಿಯವರು ಉಪಸ್ಥಿತರಿದ್ದು, ಆಶೀರ್ವಚನ ನೀಡಲಿದ್ದಾರೆ. ಅಲ್ಲದೆ ಕೇಂದ್ರ ಸಚಿವರಾದ ಶ್ರೀ ಡಿ.ವಿ. ಸದಾನಂದಗೌಡ, ಸೇರಿದಂತೆ ಹಲವಾರು ಸಚಿವರು, ಜನಪ್ರತಿನಿಧಿಗಳು ಉಪಸ್ಥಿತಿಯಲ್ಲಿ ಗೌರವಾಧ್ಯಕ್ಷರು, ಮಾರ್ಗದರ್ಶಕರಾದ ಡಾ.ಕೆ.ವಿ. ಚಿದಾನಂದ ಮತ್ತು ರಾಜ್ಯ ಒಕ್ಕಲಿಗ ಗೌಡ ಸಂಘದ ನಿರ್ದೇಶಕರಾದ ಡಾ.ರೇಣುಕಾ ಪ್ರಸಾದ್ ಕೆ.ವಿ. ಇವರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿದೆ. ಈಗಾಗಲೇ ಭವನಕ್ಕೆ ರೂ. ೬.೩೦ ಕೋಟಿ ಹಣ ಖರ್ಚಾಗಿದ್ದು, ಇನ್ನು ೪ ಕೋಟಿಯ ಹಣದ ಅಗತ್ಯ ಇದೆ. ಈ ಗೌಡ ನಿಧಿ ಆಂದೋಲನದಲ್ಲಿ ರೂ. ೧.೫೦ ಕೋಟಿ ನಿಧಿಯನ್ನು ಸಂಗ್ರಹಿಸುವ ಗುರಿ ಹೊಂದಿದೆ. ಸಮಾಜ ಬಾಂಧವರು ಪ್ರತಿ ಮನೆಯವರು ಕನಿಷ್ಠ ರೂ. ೧೦೦೦ದಿಂದ ದೇಣಿಗೆ ಪ್ರಾರಂಭಿಸಿ ಈ ಆಂದೋಲನದಲ್ಲಿ ಸಹಕರಿಸಬೇಕೆಂದು ಎಂದು ಗೌಡ ಯುವ ಸೇವಾ ಸಂಘದ ಅಧ್ಯಕ್ಷ ದಿನೇಶ್ ಮಡಪ್ಪಾಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.