ಜ.೩೦ರಂದು ಸುಳ್ಯದಲ್ಲಿ ರೊವರ್ಸ್ ರೇಂಜರ್ಸ್ ಸಮಾಗಮ-  ಸ್ಕೌಟ್ ಗೈಡ್ಸ್ ಮೇಳ: ಕಬ್,ಬುಲ್ ಬುಲ್ಸ್ ಉತ್ಸವ

Advt_Headding_Middle
Advt_Headding_Middle

ರೊವರ್ಸ್ ರೇಂಜರ್ಸ್ ಸಮಾಗಮ-ಸ್ಕೌಟ್ಸ್, ಗೈಡ್ಸ್ ಮೇಳ, ಕಬ್, ಬುಲ್ ಬುಲ್ಸ್ ಉತ್ಸವವು ಜ.೩೦ರಂದು ಸುಳ್ಯದ ಕೆ.ವಿ.ಜಿ. ಪುರಭವನದಲ್ಲಿ ನಡೆಯಲಿದೆ ಎಂದು ಭಾರತ್ ಸ್ಕೌಂಟ್ ಗೈಂಡ್ಸ್ ಸಂಸ್ಥೆ ಸಂಘ ಸುಳ್ಯ ಇದರ ಅಧ್ಯಕ್ಷ ರೋ.ಎಸ್.ಎಂ. ಬಾಪೂ ಸಾಹೇಬ್ ಇಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯದ ಮಾನ್ಯ ಶಾಸಕರಾದ ಎಸ್.ಅಂಗಾರರವರು ವಹಿಸಲಿದ್ದಾರೆ. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನ.ಪಂ ಅಧ್ಯಕ್ಷೆ ಶೀಲಾವತಿ ಮಾಧವ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಚೆನ್ನಕೇಶವ ದೇವಸ್ಥಾನದ ಮೊಕ್ತೇಸರಾದ ಡಾ.ಹರಪ್ರಸಾದ್, ಸುಳ್ಯದ ಕೇತ್ರ ಶಿಕ್ಷಣಾಧಿಕಾರಿ ಕೆಂಪಲಿಂಗಪ್ಪ, ಭಾ.ಸ್ಕೌ.ಗೈ.ಜಿಲ್ಲಾ ಸಂಸ್ಥೆಯ ಮುಖ್ಯ ಆಯುಕ್ತಕರಾದ ಡಾ.ಎನ್.ಜಿ. ಮೋಹನ್ ಭಾಗವಹಿಸಲಿದ್ದಾರೆ. ಬೆಳಿಗ್ಗೆ ೯.೪೫ಕ್ಕೆ ನಗರದಲ್ಲಿ ಮೆರವಣಿಗೆ ನಡೆಯಲಿದ್ದು ಇದರ ಉದ್ಘಾಟನೆಯನ್ನು ಸುಳ್ಯ ಪೋಲೀಸ್ ವೃತ್ತ ನಿರೀಕ್ಷಕರಾದ ಸತೀಶ್ ನೆರವೇರಿಸಲಿದ್ದಾರೆ. ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ತಾ.ಪಂ ಅಧ್ಯಕ್ಷ ಚನಿಯ ಕಲ್ತಡ್ಕ, ಮುಖ್ಯ ಅತಿಥಿಗಳಾಗಿ ನ.ಪಂ ಸದಸ್ಯರುಗಳಾದ ಗೋಪಾಲ ನಡುಬೈಲು, ಕೆ.ಎಂ ಮುಸ್ತಫ, ಅರೆಭಾಷೆ ಅಕಾಡೆಮಿ ಸುಳ್ಯ ಇದರ ಅಧ್ಯಕ್ಷ ಪಿ.ಸಿ. ಜಯರಾಮ, ನಿವೃತ್ತ ಜಿಲ್ಲಾ ಆರೋಗ್ಯಧಿಕಾರಿ ಡಾ.ರಂಗಯ್ಯ, ರೋಟರಿ ಕ್ಲಬ್ ಸುಳ್ಯ ಇದರ ಅಧ್ಯಕ್ಷ ಜಿತೇಂದ್ರ ವೇದಿಕೆಯಲ್ಲಿ ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕರು ಲಕ್ಷ್ಮೀಶ ರೈ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.