Breaking News

ತಾಲೂಕಿನಲ್ಲಿ ಇಂಟೆಕ್ ಕಾಂಗ್ರೆಸ್‌ನ್ನು ಬಲಗೊಳಿಸಿ: ರಾಕೇಶ್ ಮಲ್ಲಿ

Advt_Headding_Middle
Advt_Headding_Middle

“ಸುಳ್ಯ ತಾಲೂಕಿನಲ್ಲಿ ಇಂಟೆಕ್ ಕಾಂಗ್ರೆಸ್‌ನ್ನು ಮತ್ತಷ್ಟು ಬಲಗೊಳಿಸಿ “ ಎಂದು ಇಂಟೆಕ್ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಹೇಳಿದ್ದಾರೆ.
ಸುಳ್ಯ ಬೊಳಿಯ ಮಜಲಿನ ಸಿಟಿ ಫ್ರೆಂಡ್ಸ್ ಸ್ಪೋಟ್ಸ್ ಮತ್ತು ಆರ್ಟ್ಸ್ ಕ್ಲಬ್ ನ ಆಶ್ರಯದಲ್ಲಿ ಸುಳ್ಯದ ಕೊಡಿಯಾಲಬೈಲ್ ಎಂ.ಜಿ.ಎಂ. ಶಾಲಾ ವಠಾರದಲ್ಲಿ ಜ.೨೦ರಂದು ನಡೆದ ಇಂಟೆಕ್ ಟ್ರೋಫಿ ಪಂದ್ಯಾಟದಲ್ಲಿ ಭಾಗವಹಿಸಿದ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ಯುವ ಇಂಟೆಕ್ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಇಂಟೆಕ್ ಕಾಂಗ್ರೆಸ್ ಅಧ್ಯಕ್ಷ ಮನೋಹರ ಶೆಟ್ಟಿ, ಸುಳ್ಯ ತಾಲೂಕು ಇಂಟೆಕ್ ಅಧ್ಯಕ್ಷ ಉದಯ ಕುಮಾರ್ ಕುಕ್ಕುಡೇಲು, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಿವಾಕರ ರೈ ಪಿ.ಬಿ., ವಕ್ಫ್ ಕ್ವನ್ಸಿಲ್ ಸದಸ್ಯ ಎಸ್.ಸಂಶುದ್ದೀನ್, ನ.ಪಂ. ಸದಸ್ಯ ಗೋಕುಲ್‌ದಾಸ್, ರಾಜ್ಯ ಇಂಟೆಕ್ ಕಾಂಗ್ರೆಸ್ ಕಾರ್ಯದರ್ಶಿ ಸುನಿಲ್ ರೈ, ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಶ್ರೀಹರಿ ಕುಕ್ಕುಡೇಲು, ಕಾಂಗ್ರೆಸ್ ವಕ್ತಾರ ನಂದರಾಜ್ ಸಂಕೇಶ್, ಭವಾನಿ ಶಂಕರ ಕಲ್ಮಡ್ಕ, ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಶಾಫಿ ಕುತ್ತಮೊಟ್ಟೆ ಮೊದಲಾವದರು ವೇದಿಕೆಯಲ್ಲಿದ್ದರು. “ಯುವಕ ಸಂಘಟನೆ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುವುದರ ಮೂಲಕ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದು ನಿರಂತರ ವಾಗಿ ನಡೆಯಲಿ ನಿಮ್ಮ ಕಾರ್ಯಕ್ರಮಕ್ಕೆ ನಾವು ಕೈ ಜೋಡಿಸುತ್ತೇವೆ‘’ ಎಂದು ಮಲ್ಲಿ ಹೇಳಿದರು.
ಆರ್ .ಕೆ.ಮಹಮ್ಮದ್ ಸ್ವಾಗತಿಸಿ, ರಶೀದ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು. ಜ.೨೦ ಮತ್ತು ೨೧ರಂದು ಕ್ರಿಕೆಟ್ ಪಂದ್ಯಾಟ ನಡೆಯಿತು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.